ಸಿಡಿ ಗರ್ಲ್ ಮಾಸಿಕ 30 ಸಾವಿರ ಸಂಬಳ ಪಡೆಯುತ್ತಿದ್ದಳಂತೆ ! ಮತ್ತೆ ಉದ್ಯೋಗ ಯಾಕೆ ?
ಬೆಂಗಳೂರು, ಮಾರ್ಚ್ 17: ರಮೇಶ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ಕುರಿತು ರೋಚಕ ಸಂಗತಿ ಹೊರ ಹಾಕುತ್ತಿರುವ ವಿಶೇಷ ತನಿಖಾ ತಂಡ ಇದೀಗ ಸಿಡಿ ಗರ್ಲ್ ನ ಮಹತ್ವದ ಮಾಹಿತಿಯನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ಆಕೆಗೂ ಶಂಕಿತ ಆರೋಪಿಗಳಿಗೆ ಹೇಗೆ ಲಿಂಕ್ ಆಯಿತು ? ಅದರ ಸೂತ್ರಧಾರ ಯಾರು ? ನಿಜವಾಗಿಯೂ ಆಕೆಗೆ ಕೆಲಸದಲ್ಲಿ ಇರಲಿಲ್ಲವೇ ಎಂಬುದಕ್ಕೆ ಎಸ್ಐಟಿ ಉತ್ತರ ಕಂಡು ಕೊಂಡಿದೆ.
ಸದ್ಯ ಎಸ್ಐಟಿ ವಿಚಾರಣೆ ಎದುರಿಸುತ್ತಿರುವ ಶಂಕಿತ ಆರೋಪಿಗೆ ಸಿಡಿ ಗರ್ಲ್ ಕ್ಲಾಸ್ ಮೇಟ್ ಅಂತೆ. ಹೀಗೆ ಪರಿಚಯವಾಗಿದ್ದ ಸಿಡಿ ಗರ್ಲ್ ಹಾಗೂ ಶಂಕಿತ ಆರೋಪಿ ಪರಸ್ಪರ ಭೇಟಿ ಮಾಡುತ್ತಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮಾಸಿಕ 30 ಸಾವಿರ ಸಂಬಳ ಪಡೆಯುತ್ತಿದ್ದ ಸಿಡಿ ಗರ್ಲ್ ಕೆಲಸ ಇಲ್ಲದೇ ಖಾಲಿ ಇರಲಿಲ್ಲ. ಇದರ ಜತೆಗೆ ಕರ್ನಾಟಕದ ಸಂಘಟನೆಯೊಂದರಲ್ಲೂ ಸಹ ಆಕೆ ಗುರುತಿಸಿಕೊಂಡಿದ್ದರು. ಈ ಮೂಲಕ ಮಾಧ್ಯಮ ಪ್ರತಿ ನಿಧಿಗಳ ಸಂಪರ್ಕ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ. ಆಕೆ ಈಗಾಗಲೇ ಕೆಲಸ ಮಾಡಿ ಕೈತುಂಬಾ ಸಂಬಳ ಪಡೆಯುತ್ತಿದ್ದು, ಇಷ್ಟಾಗಿಯೂ ಆಕೆಗೆ ಕೆಲಸದ ಅಗತ್ಯವೇ ಇರಲಿಲ್ಲ. ಷಡ್ಯಂತ್ರದ ಭಾಗವಾಗಿಯೇ ಆಕೆ ಖೆಡ್ಡಾಗೆ ಬೀಳಿಸಿದಳಾ ? ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Recommended Video
ತೀವ್ರ ಶೋಧ ಕಾರ್ಯಾಚರಣೆ: ತಲೆಮರೆಸಿಕೊಂಡಿರುವ ಶಂಕಿತ ಆರೋಪಿಗಳ ಪತ್ತೆಗಾಗಿ ನಾನಾ ರಾಜ್ಯಗಳಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ನೆರೆ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಗೋವಾ ಮತ್ತಿತರ ಕಡೆ ಹುಡುಕಾಟ ಮಂದುವರೆದಿದೆ. ಆದರೆ ಈವರೆಗೂ ಆವರ ಬಗ್ಗೆ ಸುಳಿವು ಸಿಕ್ಕಿಲ್ಲ. ಇನ್ನು ನಾಲ್ಕು ಪ್ರತ್ಯೇಕ ತಂಡಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications