ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕೊನೆ ಟ್ವಿಸ್ಟ್ ಕೊಡ್ತಾಳಾ ಸಿಡಿ ಗರ್ಲ್ ?
ಬೆಂಗಳೂರು, ಮಾರ್ಚ್ 19: ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟಗೊಂಡು ಬರೋಬ್ಬರಿ ಹದಿನೇಳು ದಿನ ಕಳೆದಿವೆ. ಸಂತ್ರಸ್ತೆ ಎನ್ನಲಾದ ಯುವತಿಗೆ ನಾಲ್ಕು ನೋಟಿಸ್ ನೀಡಿದರೂ ಪತ್ತೆಯಾಗಿಲ್ಲ. ಯುವತಿಯನ್ನು ಅಪಹರಿಸಲಾಗಿದೆ ಎಂದು ಪೋಷಕರು ಬೆಳಗಾವಿಯಲ್ಲಿ ನೀಡಿದ್ದ ದೂರು ಬೆಂಗಳೂರಿನ ಅರ್.ಟಿ. ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ಈ ಪ್ರಕರಣ ಇದೀಗ ಅಧಿವೇಶನದಲ್ಲೂ ಗದ್ದಲ ಎಬ್ಬಿಸುತ್ತಿದೆ. ನಾನಾ ತಿರುವು ಪಡೆದುಕೊಂಡ ಸಿಡಿ ಪ್ರಕರಣ ಕೊನೆಯದಾಗಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಬಹು ಚರ್ಚೆ ಹುಟ್ಟು ಹಾಕಿದೆ. ಇದರ ಬೆನ್ನಲ್ಲೇ ಸಂತ್ರಸ್ತೆ ಎನ್ನಲಾದ ಯುವತಿ ಅತಿ ಶೀಘ್ರದಲ್ಲಿಯೇ ಪ್ರತ್ಯಕ್ಷಳಾಗಿ ಹೊಸ ಟ್ವಿಸ್ಟ್ ಕೊಡಲಿದ್ದಾಳೆ ಎನ್ನಲಾಗಿದೆ.
ಸಿಡಿ ಪ್ರಕರಣ ಸಂಬಂಧ ಶಂಕಿತ ಆರೋಪಿ ಎನ್ನಲಾದ ನರೇಶ್ ಎಂಟು ನಿಮಿಷದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಮುಂದಿನ ಎಂಟು ದಿನದಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗುವುದಾಗಿಯೂ ಹೇಳಿಕೆ ನೀಡಿದ್ದಾರೆ. ಸಿಡಿ ಗರ್ಲ್ ಕೂಡ ಜತೆಗೆ ಇರುವುದಾಗಿ ಆತ ವಿಡಿಯೋದಲ್ಲಿ ಹೇಳಿದ್ದು, ರಾಜ್ಯದ ಬೆಳವಣಿಗೆ ನೋಡಿಕೊಂಡೇ ಮುಂದಿನ ಹೆಜ್ಜೆ ಇಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅಜ್ಞಾತ ಸ್ಥಳದಲ್ಲಿ ನೆಲೆಸಿರುವ ಸಿಡಿ ಗರ್ಲ್ ಮತ್ತು ಶಂಕಿತ ಆರೊಪಿಗಳಿಗಾಗಿ ಎಸ್ಐಟಿ ಅಧಿಕಾರಿಗಳು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದರ ನಡುವೆ ಯುವತಿ ಬೆಂಗಳೂರಿಗೆ ಬಂದು ಹೇಳಿಕೆ ನೀಡಲಿದ್ದಾಳೆ ಎಂಬ ಮಾಹಿತಿ ಕೂಡ ಮಾಧ್ಯಮ ವಲಯದಲ್ಲಿ ಹರಿದಾಡುತ್ತಿದೆ.

ನೋಟಿಸ್ ಕೊಟ್ಟರೂ ಬಾರದ ಯುವತಿ: ಸಿಡಿ ಸ್ಪೋಟಗೊಂಡು ಬರೋಬ್ಬರಿ ಹದಿನೇಳು ದಿನ ಕಳೆದಿವೆ. ಸಂತ್ರಸ್ತೆ ಎನ್ನಲಾದ ಯುವತಿಗೆ ನಾಲ್ಕು ನೋಟಿಸ್ ನೀಡಲಾಗಿದೆ. ಇಷ್ಟಾಗಿಯೂ ಯುವತಿ ಇರುವ ಜಾಗ ಪತ್ತೆ ಮಾಡಲು ಎಸ್ಐಟಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಸಿಡಿ ಜಾಡು ಹಿಡಿದು ಪತ್ತೆಗೆ ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಸಿಡಿ ಸ್ಫೋಟಗೊಂಡು ಬರೋಬ್ಬರಿ ಹದಿನೇಳು ದಿನಗಳು ಕಳೆದರೂ . ಸಂತ್ರಸ್ತೆ ಎನ್ನಲಾದ ಯುವತಿಗೆ ನಾಲ್ಕು ನೋಟಿಸ್ ನೀಡಿದರೂ ಬಂದಿಲ್ಲ. ಹದಿನೇಳು ದಿನದಿಂದ ಯುವತಿ ಎಲ್ಲಿದ್ದಾಳೆ ? ಪೋನ್ ಬಳಸದ ಯುವತಿ ಜಾಡು ಪತ್ತೆಗಾಗಿ ಎಸ್ಐಟಿ ಪ್ರತ್ಯೇಕ ತಂಡ ರಚಿಸಿದೆ. ಯುವತಿಯ ಮೂಲ ಪತ್ತೆ ಹಚ್ಚುವಲ್ಲಿ ಎಸ್ಐಟಿ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಕಾದು ನೋಡುವ ತಂತ್ರ: ಕೇವಲ ಅಶ್ಲೀಲ ಸಿಡಿ ಸ್ಫೋಟಗೊಳ್ಳುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅವರ ಮಾನ ಹರಾಜು ಆಗಿ ಸಚಿವ ಸ್ಥಾನ ಕಳೆದುಕೊಂಡರು. ಆದರೆ, ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟ ನಡೆದುಕೊಂಡ ರೀತಿ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು. ದಿನಗಳು ಕಳೆದಂತೆ ಷಡ್ಯಂತ್ರ ರೂಪಿಸಿ ರಮೇಶ್ ಜಾರಕಿಹೊಳಿಯನ್ನು ಟ್ರ್ಯಾಪ್ ಮಾಡಲಾಗಿದೆ ಎಂಬ ಮಾತು ಕೇಳಿ ಬಂದವು. ಸಿಡಿ ಬಿಡುಗಡೆ ಮೂಲಕ ಸಚಿವ ಸ್ಥಾನ ರಾಜೀನಾಮೆ ಯಶಸ್ವಿಯಾದರೂ ಜಾರಕಿಹೊಳಿ ಕುರಿತ ಅನುಕಂಪದ ಅಲೆ ದೊಡ್ಡ ಮಟ್ಟದಲ್ಲಿ ಎದ್ದಿದೆ.
ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಜತೆ ಹಲವರು ಸೇರಿ ದುರುದ್ದೇಶ ಪೂರ್ವಕವಾಗಿ ಟ್ರ್ಯಾಪ್ ಮಾಡಲಾಗಿದೆ ಎಂಬ ಮಾತು ಚರ್ಚೆಗೆ ಕಾರಣವಾಯಿತು. ಇದರ ಬೆನ್ನಲ್ಲೇ ಎಸ್ಐಟಿ ರಚನೆ, ತನಿಖೆ ಎಲ್ಲವೂ ಆರಂಭವಾಯಿತು. ಹೀಗಾಗಿ ಈ ಪ್ರಕರಣ ಜಾರಕಿಹೊಳಿಗಿಂತಲೂ ಬಿಡುಗಡೆ ಮಾಡಿದವರ ಪಾಲಿಗೆ ಉರುಳಾಗಿದೆ. ಇದೀಗ ಜಾರಕಿಹೊಳಿ ವಿರುದ್ಧ ಕೆಲವರು ದೂರು ದಾಖಲಿಸುತ್ತಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಎಲ್ಲಾ ಬೆಳವಣಿಗೆ ನೋಡಿಕೊಂಡು ಕೊನೆಯದಾಗಿ ಸಿಡಿ ಗರ್ಲ್ ನ್ನು ಅಖಾಡಕ್ಕೆ ಇಳಿಸಿ ಹೇಳಿಕೆ ದಾಖಲಿಸಲು ಸಿಡಿ ಗ್ಯಾಂಗ್ ನಿರ್ಧರಿಸಿದೆ ಎಂಬ ಮಾತುಗಳು ಚರ್ಚೆಗೆ ನಾಂದಿ ಹಾಡಿವೆ.












Click it and Unblock the Notifications