ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಶಂಕಿತರ ಜಾಮೀನು ಅರ್ಜಿಗೆ ಎಸ್ ಐಟಿ ಆಕ್ಷೇಪ

|
Google Oneindia Kannada News

ಬೆಂಗಳೂರು, ಮೇ. 29: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಶಂಕಿತ ಆರೋಪಿಗಳಾದ ಶ್ರವಣ್ ಮತ್ತು ನರೇಶ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್ಐಟಿ ಅಧಿಕಾರಿಗಳು ಪೂರ್ವ ಸಿದ್ಧತೆ ನಡೆಸಿದ್ದಾರೆ.

ತಾಂತ್ರಿಕ ಕಾರಣದಿಂದಾಗಿ ಶನಿವಾರ ಸಲ್ಲಿಸಬೇಕಿದ್ದ ಆಕ್ಷೇಪಣೆ ಅರ್ಜಿಯನ್ನು ಸೋಮವಾರ ಸಲ್ಲಿಸಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಎಸ್ಐಟಿ ತನಿಖೆಯಲ್ಲಿ ಹನಿಟ್ರ್ಯಾಫ್ ಗೆ ಸಂಬಂಧಿಸಿದಂತೆ ಎಸ್ಐಟಿ ಕಲೆಹಾಕಿರುವ ಸಿಸಿಟಿವಿ ದೃಶ್ಯಗಳು, ದಾಖಲೆಗಳನ್ನು ಆಧರಿಸಿ ಆಕ್ಷೇಪಣೆ ಸಲ್ಲಿಸಲು ಎಸ್ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಅಶ್ಲೀಲ ಸಿಡಿ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲಾಕ್ ಮೇಲ್ ದೂರು ದಾಖಲಿಸಿದ್ದರು.

ಆನಂತರ ದಿನಕ್ಕೊಂದು ಟ್ವಿಸ್ಟ್ ಪಡೆದಿದ್ದ ಸಿಡಿ ಪ್ರಕರಣದಲ್ಲಿ ಕಣ್ಮರೆಯಾಗಿದ್ದ ಯುವತಿಯೇ ಅತ್ಯಾಚಾರ ದೂರು ದಾಖಲಿಸಿದಳು. ರಮೇಶ್ ಜಾರಕಿಹೊಳಿ ವಿರುದ್ಧ ಸರ್ಕಾರಿ ಕೆಲಸದ ಅಮಿಷ ಒಡ್ಡಿ ಲೈಂಗಿಕ ದುರ್ಬಳಕೆ ಮಾಡಿಕೊಂಡಿದ್ದಾಗಿ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಳು. ಅಲ್ಲದೇ ನ್ಯಾಯಾಧೀಶರ ಮುಂದೆ ಹೇಳಿಕೆಯೂ ದಾಖಲಿಸಿದ್ದಳು. ಆನಂತರ ಸತತವಾಗಿ ಸಂತ್ರಸ್ತ ಯುವತಿಯನ್ನು ವಿಚಾರಣೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕಿದ್ದರು.

Ramesh Jarkiholi CD Case: SIT prepares evidence with objection to not to grant anticipatory bail to accused

ಹೆಜ್ಜೆ ಹೆಜ್ಜೆಗೂ ಹನಿಟ್ರ್ಯಾಪ್ ಸಾಕ್ಷಿಗಳು : ಸಂತ್ರಸ್ತ ಯುವತಿ ಎಸ್ಐಟಿ ಅಧಿಕಾರಿಗಳ ಮುಂದೆ ದಾಖಲಿಸಿರುವ ಹೇಳಿಕೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ದೊರಕಿರುವ ಸಾಂದರ್ಭಿಕ ಸಾಕ್ಷಿಗಳೇ "ಇದೊಂದು ಹನಿ ಟ್ರ್ಯಾಪ್ " ಎಂದು ಸಾಬೀತು ಮಾಡುವಂತಿವೆ. ರಮೇಶ್ ಜಾರಕಿಹೊಳಿ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ, ಸಿಡಿಯಲ್ಲಿರುವ ಯುವತಿ ಜತೆ ಇರುವುದು ನಾನೇ. ಆ ಯುವತಿ ಜತೆ ಸಹಮತದ ಸೆಕ್ಷ್ ಮಾಡಿದ್ದು ನಿಜ. ಅದೇ ವಿಡಿಯೋ ಬಳಸಿಕೊಂಡು ನನಗೆ ಬ್ಲಾಕ್ ಮೇಲ್ ಮಾಡಿದ್ದರು. ಮೂರನೇ ವ್ಯಕ್ತಿ ಮೂಲಕ ನನಗೆ ವಿಡಿಯೋ ಕಳಿಸಿದ್ದು, ಲಕ್ಷಾಂತರ ರೂಪಾಯಿ ಹಣವನ್ನು ನೀಡಿದ್ದಾಗಿ ಹೇಳಿಕೆ ದಾಖಲಿಸಿದ್ದರು. ಈ ಹೇಳಿಕೆ ಇಡೀ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.

ಆಕ್ಷೇಪಣೆಗೆ ಎಸ್ಐಟಿ ತಯಾರಿ ಅಂಶಗಳು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಹನಿಟ್ರ್ಯಾಪ್ ಮಾಡಲೆಂದು ಮೊದಲೇ ಪ್ಲಾನ್ ಮಾಡಿದ್ದಾರೆ. ಅದಕ್ಕೆ ಬೇಕಾದ ಲಕ್ಷಾಂತರ ರೂ. ಬೆಲೆ ಬಾಳುವ ಕಂಪ್ಯೂಟರ್ ನ್ನು ಎಸ್. ಪಿ. ರೋಡ್ ನಲ್ಲಿ ಖರೀದಿಸಿದ್ದಾರೆ. ಇನ್ನು ಆಕೆ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಲು ಹೋದಾಗ ಶಂಕಿತ ಆರೋಪಿಗಳಿಬ್ಬರು ಜತೆಗೆ ಇದ್ದಾರೆ. ಆಕೆಯನ್ನು ಕರೆದುಕೊಂಡು ಹೋಗುವುದು, ಕರೆದುಕೊಂಡು ಬರುವ ಕೆಲಸವನ್ನು ಈ ಇಬ್ಬರೇ ನಿರ್ವಹಣೆ ಮಾಡಿದ್ದಾರೆ.

Ramesh Jarkiholi CD Case: SIT prepares evidence with objection to not to grant anticipatory bail to accused

Recommended Video

China ಆರ್ಥಿಕತೆಯಲ್ಲಿ ಮೊದಲನೇ ಸ್ಥಾನ!! | Oneindia Kannada

ಇನ್ನು ಸಂತ್ರಸ್ತ ಯುವತಿ ತನ್ನ ಪ್ರಿಯತಮನ ಜತೆ ನಡೆಸಿರುವ ಸಂಭಾಷಣೆಯ ತುಣುಕುಗಳು ಕೂಡ ಹನಿಟ್ರ್ಯಾಪ್ ಎಂಬುದಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿವೆ. ಪೋನ್ ಕರೆಗಳ ಸಂಭಾಷಣೆಯು ಕೂಡ ಹೊಲಿಕೆಯಾಗಿದ್ದು, ಇದು ಹನಿಟ್ರ್ಯಾಪ್ ಎಂಬುದಕ್ಕೆ ಪೂರಕ ಸಾಕ್ಷಿಗಳು ಎಸ್ಐಟಿ ಅಧಿಕಾರಿಗಳಿಗೆ ಸಿಕ್ಕಿವೆ.

English summary
Ramesh Jarkiholi CD Case: SIT officials are preparing to evidence with objection report to court challenging granting anticipatory bail to accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X