ಚುನಾವಣೆಗೂ ಮೊದಲೇ ಮೋದಿ ಸೋತಿದ್ದಾರೆ: ರಾಮಲಿಂಗಾರೆಡ್ಡಿ
ಬೆಂಗಳೂರು, ಏಪ್ರಿಲ್ 30: ಪ್ರಧಾನಿ ನರೇಂದ್ರ ಮೋದಿ 15 ದಿನ ರಾಜ್ಯಕ್ಕೆ ಬರುತ್ತಾರೆ ಎಂದಿದ್ದರು ಆದರೆ ಅದು ಐದು ದಿನಕ್ಕೆ ಬಂದಿದೆ. ಅವರಿಗೆ ಕರ್ನಾಟಕದಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದ್ದಂತಿಲ್ಲ ಎಂದು ಗೃಹ ಸಚಿವ
ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇಲ್ಲ, ಯಡಿಯೂರಪ್ಪ ಅವರನ್ನು ದೂರ ಇಟ್ಟು ಮೆರವಣಿಗೆ ಮಾಡುತ್ತಿದ್ದಾರೆ, ಚುನಾವಣೆ ವರೆಗೂ ಯಡಿಯೂರಪ್ಪ ಅವರನ್ನು ಇಟ್ಟುಕೊಳ್ಳುತ್ತಾರೆ, ಆಮೇಲೆ ಬಿಎಸ್ವೈ ಗೆ ಗೇಟ್ ಪಾಸ್ ಕೊಡ್ತಾರೆ ಎಂದು ಲೇವಡಿ ಮಾಡಿದರು.
ಅಡ್ವಾಣಿ ಗೆ ಮೋಸ ಮಾಡಿದವರು, ಯಡಿಯೂರಪ್ಪ ಗೆ ಮೋಸ ಮಾಡಲ್ಲವೇ, ಮೋದಿ ಮತ್ತು ಅಮಿತ್ ಶಾ ಅಲೆ ಇಲ್ಲಿ ವರ್ಕೌಟ್ ಆಗಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಸಾಮಾನ್ಯ., ತಪ್ಪು ದಾರಿಯಲ್ಲಿ ಸಿಎಂ ಸೋಲಿಸಲು ಮುಂದಾಗಿದ್ದಾರೆ ಆದರೆ ಸಿಎಂ ಎರಡು ಕ್ಷೇತ್ರದಲ್ಲಿ ಗೆದ್ದು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಕೋಮುವಾದದ ಫ್ಯಾಕ್ಟರಿ ಆಗಿದೆ. ಎರಡೂ ಜಿಲ್ಲೆಗಳಲ್ಲಿ.ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ರಾಜಕೀಯ ಕಾರಣಕ್ಕೆ ಶಾಂತಿ, ಕದಡುವ ಕೆಲಸ ಮಾಡುತ್ತಿವೆ. ಅವರ ಫ್ಯಾಕ್ಟರಿಯನ್ನು ಮುಚ್ಚಿಸುತ್ತೇನೆ.
ನಾವು ಟಿಪ್ಪು ಜಯಂತಿ ಮಾಡಿದ್ದೇವೆ ಅಂತ ಮದಕರಿ ನಾಯಕನ ಜಯಂತಿ ಮಾಡುವುದಾಗಿ ಅಮಿತ್ ಶಾ ಹೇಳಿದ್ದಾರೆ. ನಾವೇ ಅಧಿಕಾರಕ್ಕೆ ಬಂದರೆ ಮಾಡುತ್ತೇವೆ. ನಾವು, 26 ಮಹಾಪುರುಷರ ಜಯಂತಿ ಆಚರಣೆ ಮಾಡಿದ್ದೇವೆ ಎಂದರು.
ಅದರಲ್ಲಿ ಇರುವವರನ್ನು ಮಟ್ಟಹಾಕಲು ಸೂಚನೆ ನೀಡಿದ್ದೇನೆ, ಮಂಗಳೂರಿನ ಜನಕ್ಕೆ ಇದ್ಯಾವುದು ಬೇಕಿಲ್ಲ, ರಾಜಕಾರಣಿಗಳ ಕುಮ್ಮಕ್ಕಿನಿಂದ ಕೊಲೆಗಳು ಆಗಿವೆ. ಶಾಂತಿ ಕದಡುವ ಕೆಲಸ ಕೆಲ ನಾಯಕರಿಂದ ನಡೆಯಿತು, ಮದಕರಿ ನಾಯಕ ಜಯಂತಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಟಿಪ್ಪು ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ತಾಳಿದೆ. ಯಡಿಯೂರಪ್ಪ ಟಿಪ್ಪು ಪೇಟೆ ಧರಿಸಿದ್ದರು. ಅದನ್ನ ನೋಡಿ ಶೋಭಾ ಕರಂದ್ಲಾಜೆ ಖುಷಿ ಪಟ್ಟಿದ್ದರು ಈಗ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.












Click it and Unblock the Notifications