ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಹತ್ಯೆ, ಸಚಿವ ರವಿಶಂಕರ್ ಗೆ ರಾಮಲಿಂಗಾರೆಡ್ಡಿ ತಿರುಗೇಟು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 08 : ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕಿತ್ತಾಟ ಮುಂದುವರಿದೆ.

ಗೌರಿಗೆ ಕರ್ನಾಟಕ ಸರ್ಕಾರ ರಕ್ಷಣೆ ಏಕೆ ಕೊಟ್ಟಿರಲಿಲ್ಲ: ರವಿಶಂಕರ್ ಪ್ರಶ್ನೆಗೌರಿಗೆ ಕರ್ನಾಟಕ ಸರ್ಕಾರ ರಕ್ಷಣೆ ಏಕೆ ಕೊಟ್ಟಿರಲಿಲ್ಲ: ರವಿಶಂಕರ್ ಪ್ರಶ್ನೆ

ಗೌರಿಗೆ ಬೆದರಿಕೆ ಇದ್ದರೂ ಕರ್ನಾಟಕ ಸರ್ಕಾರ ರಕ್ಷಣೆ ಏಕೆ ಕೊಟ್ಟಿರಲಿಲ್ಲ ಎಂಬ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಶ್ನೆಗೆ ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

Ramalinga Reddy hits out at Prasad over charge on Gauri's murder

ರವಿಶಂಕರ್ ಪ್ರಸಾದ್ ಅವರಿಗೆ ಹತ್ಯೆಯಾದ ಪತ್ರಕರ್ತೆಯ ಬಗ್ಗೆ ಮಾಹಿತಿ ಇಲ್ಲ. ಗೌರಿ ಲಂಕೇಶ್ ಅವರು ಯಾವತ್ತೂ ಭದ್ರತೆ ಕೇಳಿರಲಿಲ್ಲ ಎಂದು ರಾಮಲಿಂಗಾ ರೆಡ್ಡಿ ಟಾಂಗ್ ಕೊಟ್ಟರು.

ಗೌರಿ ಲಂಕೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಭದ್ರತೆ ಒದಗಿಸುವಂತೆ ಕೇಳಿಕೊಂಡಿಲ್ಲ. ಒಂದು ವೇಳೆ ಅವರು ಭದ್ರತೆ ಕೇಳಿದ್ದರೆ ನಾವು ಖಂಡಿತ ನೀಡುತ್ತಿದ್ದೇವೆ.

ಗೌರಿ ಲಂಕೇಶ್ ಹತ್ಯೆಯ ನಂತರ ಭದ್ರತೆ ಕೇಳದಿದ್ದರೂ ಕೆಲವು ಬುದ್ಧಿಜೀವಿಗಳಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

English summary
Karnataka Home Minister Ramalinga Reddy today hit back at Union Minister Ravi Shankar Prasad for alleging that the Congress government in the state had failed to provide security to journalist Gauri Lankesh, who was shot dead outside her house here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X