Ramzan food fair: ಬೆಂಗಳೂರು 'ರಂಜಾನ್ ಆಹಾರ ಮೇಳ' ನಿಷೇಧಕ್ಕೆ ಆಗ್ರಹ: ಕಾರಣವೇನು?
ಬೆಂಗಳೂರು, ಫೆಬ್ರವರಿ 21: ಮುಸ್ಲಿಮರ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ರಂಜಾನ್ ಪ್ರಯುಕ್ತ (Ramadan) ಈ ಭಾಗದ ಸುತ್ತಮುತ್ತ 'ವಾರ್ಷಿಕ ಆಹಾರ ಮೇಳ' ನಿಷೇಧಿಸುವಂತೆ ಬೆಂಗಳೂರಿನ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಮುಂದಿನ ಮಾರ್ಚ್ 10ರಿಂದ ಏಪ್ರಿಲ್ 9ರವರೆಗೆ ಒಂದು ತಿಂಗಳ ಕಾಲ ರಂಜಾನ್ ಆಚರಣೆ ನಡೆಯಲಿದೆ. ಈ ಹಬ್ಬದ ಪ್ರಯುಕ್ತ ಮಸೀದಿ ರಸ್ತೆ, ಎಂಎಂ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾರ್ಷಿಕ ಆಹಾರ ಮೇಳ ಹಮ್ಮಿಕೊಳ್ಳಬಾರದು. ಅದನ್ನು ನಿಷೇಧಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೇಸರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (FTRWA) ಸದಸ್ಯರು ಪುಲಕೇಶಿನಗರ ಶಾಸಕ ಎಸಿ ಶ್ರೀನಿವಾಸ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ರಂಜಾನ್ ಹಬ್ಬದ ಪ್ರಯುಕ್ತ ಮಾರ್ಚ್ 12 ರಂದು ಈ ವಾರ್ಷಿಕ ಆಹಾರ ಮೇಳ ಪ್ರಾರಂಭವಾಗುವ ಸಾಧ್ಯತೆ ಇದೆ. ಇದ ಜಾತ್ರೆ ರೀತಿಯಲ್ಲಿ ನಡೆಯುತ್ತದೆ. ಈ ಜಾತ್ರೆಗೆ ಸಾವಿರಗಟ್ಟಲೇ ಜನರು ಬರುತ್ತಾರೆ. ಆಚರಣೆ ಬಳಿಕ ಉಂಟಾದ ಅವ್ಯವಸ್ಥೆಯಿಂದ ನಿವಾಸಿಗಳು ರೋಸಿಹೋಗಿದ್ದಾರೆ. ಸಾಕಷ್ಟು ಸಮಸ್ಯೆ, ನೋವು ಅನುಭವಿಸಿದ್ದರ ಕುರಿತು ಉಲ್ಲೇಖಿಸಲಾಗಿದೆ.
ಆಹಾರ ಮೇಳ ತಡೆಯಲು ಮುಂದಾಗಿಲ್ಲ
ಕಳೆದ ಐದಾರು ವರ್ಷಗಳಿಂದ ಈ ಬಗ್ಗೆ ಹಲವು ಕುಟುಂಬಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಾರ್ಷಿಕ ಆಹಾರ ಮೇಳ ನಡೆಸದಂತೆ ಕೊನೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಸಂಘಟಿತ ಪ್ರಯತ್ನ ನಡೆದಿಲ್ಲ" ಎಂದು ಫ್ರೇಸರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (FTRWA) ಜಂಟಿ ಕಾರ್ಯದರ್ಶಿ ದೌಲತ್ ರಾವ್ ವಿವರಿಸಿದರು.
ಈ ಕುರಿತು ಅಭಿಯಾನ ಆರಂಭಿಸಲಾಗಿದೆ. ಅಭಿಯಾನದ ನೇತೃತ್ವ ವಹಿಸಿರುವ ಸಂಘದ ಸೌದ್ ದಸ್ತಗಿರ್ ಅವರು, ಈ ವರ್ಷದ ರಂಜಾನ್‌ಗೆ ಮೊದಲೇ ಜಾತ್ರೆ ನಡೆಸದಿರುವ ಕುರಿತು ಖಚಿತಪಡಿಸುವ ಸಲುವಾಗಿ ಅಭಿಯಾನ ನಡೆಸಲಾಗುತ್ತಿದೆ. ಕಳೆದ ವರ್ಷವೇ ಜಾತ್ರೆ ನಿಲ್ಲಿಸುವ ಚಳುವಳಿ ಆರಂಭವಾಗಿತ್ತು.

ಆಹಾರ ಜಾತ್ರೆಯಿಂದ ಹಾನಿಯೇ ಹೆಚ್ಚು
ಈ ಜಾತ್ರೆಯು ಒಳಿತಿಗಿಂತ ಹೆಚ್ಚು ಹಾನಿ ಉಂಟು ಮಾಡುತ್ತದೆ ಎಂದು ಆರೋಪಿಸಿದರು. ಜಾತ್ರೆ ನಡೆದರೆ ಇದು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಏರಿಕೆ ಆಗಿ, ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೆ ಇಲ್ಲಿ ಪ್ರದೇಶ ಕಲುಷಿತಗೊಳಿಸುತ್ತದೆ. "ಅನೈರ್ಮಲ್ಯ" ಆಹಾರ ತಯಾರಿಕೆಯಿಂದಾಗಿ ವಿಶೇಷವಾಗಿ ಮಕ್ಕಳಲ್ಲಿ ಅನಾರೋಗ್ಯ ಉಂಟಾಗಲು ಕಾರಣವಾಗುತ್ತದೆ ಎಂದು ತಿಳಿಸಿದರು.
ಈ ಅವಧಿಯಲ್ಲಿ ಅಪರಾಧಗಳು ಕೂಡ ಹೆಚ್ಚಾಗುತ್ತವೆ. ಹಿಂದಿನ ವರ್ಷ ಈ ಭಾಗದಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಈ ವೇಳೆ ಜಾತ್ರೆ ಮಾರ್ಗವಾಗಿ ಆಂಬ್ಯುಲೆನ್ಸ್‌ಗಳ ಸಂಚಾರ ಆಗದಷ್ಟು ತೊಂದರೆ ಆಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಸ್ಥಳೀಯರಿಂದ 3,500 ಕ್ಕೂ ಹೆಚ್ಚು ಸಹಿ ಸಂಗ್ರಹ
ಆಹಾರ ಮೇಳವನ್ನು ನಡೆಸದಂತೆ ಇಲ್ಲಿನ ನಿವಾಸಿಗಳಿಂದ 3,500 ಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಲಾಗಿದೆ. ನಮ್ಮ ಸಂಘವು ಜಾತ್ರೆ ಮತ್ತು ಅದಕ್ಕೆ ಸಂಬಂಧಿಸಿದ ಆಯೋಜನೆ ತಡೆಯುವ ಗುರಿ ಹೊಂದಿದೆ. ಮೇಲಿನ ಎಲ್ಲ ಅಂಶಗಳನ್ನು ಗಮನಿಸಿ ಶಾಸಕರು ಮನವಿ ಪರಿಗಣಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ ಎಂದು 'ಡಿಎಚ್' ವರದಿ ಮಾಡಿದೆ.












Click it and Unblock the Notifications