ಸತ್ಯಪರರೇ, ನ್ಯಾಯನಿಷ್ಠರೇ ಸಿಡಿದೇಳಿ : ರಾಘವೇಶ್ವರ ಭಾರತಿ ಸ್ವಾಮಿ

ಬೆಂಗಳೂರು, ಸೆಪ್ಟೆಂಬರ್ 21: ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಸುಪ್ರೀಂ ಕೋರ್ಟ್ ಆದೇಶವನ್ನೂ ಲೆಕ್ಕಿಸದೆ ತನ್ನ ಸುಪರ್ದಿಗೆ ಪಡೆದ ರಾಜ್ಯ ಸರ್ಕಾರದ ವಿರುದ್ಧ ರಾಮಚಂದ್ರಾಪುರ ಮಠ ನ್ಯಾಯಾಂಗ ನಿಂದನೆಯ ದೂರು ದಾಖಲಿಸಿದೆ.

ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಬಂದು ಎಂಟು ವಾರಗಳ ಕಾಲ ದೇವಾಲಯದ ಉಸ್ತುವಾರಿಯನ್ನು ಮಠವೇ ವಹಿಸಿಕೊಳ್ಳಬೇಕು ಎಂದು ಕೋರ್ಟ್ ಹೇಳಿದ್ದರೂ, ಎಂಟು ವಾರ ಕಳೆಯುವ ಮೊದಲೇ ಉತ್ತರ ಕನ್ನಡ ಜಿಲ್ಲಾಡಳಿತ ಮಠವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಸರ್ಕಾರದ ಈ ಕ್ರಮವನ್ನು ಮಠ ವಿರೋಧಿಸಿ, ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ.

ಈ ಕುರಿತು ರಾಮಚಂದ್ರಾಪುರ ಮಠ ಟ್ವಿಟ್ಟರ್ ಅಭಿಯಾನ ಸಹ ಆರಂಭಿಸಿದ್ದು, ಸರ್ಕಾರದ ನಡೆಯ ವಿರುದ್ಧ ಜನ ಸಿಡಿದೇಳಬೇಕೆಂದು ಮನವಿ ಮಾಡಿದೆ.

Ramachandrapura mutt files Case of Contempt of court against Government of Karnataka

"ಸತ್ಯಪರರೇ! ನ್ಯಾಯನಿಷ್ಠರೇ! ಸಿಡಿದೇಳಿ! ಸಜ್ಜನಶಕ್ತಿಯ ಮೇಲೆ ನಿರಂತರ-ನಿಷ್ಕಾರಣ ಪ್ರಹಾರ ನಡೆಸುತ್ತಿರುವ ಅಸುರರ ವಿರುದ್ಧ ಸಂಘಟಿತ ಸಮರ ಸಾರೋಣ. ಸಾತ್ತ್ವಿಕ ಶಕ್ತಿಯ ಸಾಮರ್ಥ್ಯವೇನೆಂಬುದನ್ನು ಜಗತ್ತು ನೋಡಲಿ..." ಎಂದು ರಾಮಚಂದ್ರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮಿ ಅವರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಜೊತೆಗೆ #TempleLooted ಮತ್ತು #MuttAttacked ಎಂಬ ಎರಡು ಹ್ಯಾಶ್ ಟ್ಯಾಗ್ ಗಳ ಮೂಲಕ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+