ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಘವೇಶ್ವರ ಶ್ರೀ ಭಕ್ತರಿಂದ ಮಾಧ್ಯಮಗಳಿಗೆ 13 ಪ್ರಶ್ನೆಗಳು

By ರಾಮಕೃಷ್ಣ ಹೆಗಡೆ ಕಲ್ಲಬ್ಬೆ
|
Google Oneindia Kannada News

ಬೆಂಗಳೂರು, ಸೆ. 29: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಸಿಐಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣದ ಜೊತೆಗೆ ಮಿಕ್ಕ ಕೇಸುಗಳ ತನಿಖೆಯೂ ಭರದಿಂದ ಸಾಗಿದೆ. ಈ ನಡುವೆ ಸಾಮಾಜಿಕ ಜಾಲ ತಾಣ ಬಳಸಿ ಮಠದ ಭಕ್ತರು ಮಾಧ್ಯಮಗಳಿಗೆ ಪ್ರಶ್ನೆಗಳನ್ನು ಹಾಕಿದ್ದಾರೆ.

ಪ್ರೀತಿಯ ಪತ್ರಿಕಾ ವರದಿಗಾರರಿಗೂ ಮತ್ತು ಮಾಧ್ಯಮ ಮಿತ್ರರಿಗೆ
ಒಂದು ಸವಿನಯ ವಿನಂತಿ: ನೀವು ದಯವಿಟ್ಟು ಈ ಕೆಳಗಿನ ಪ್ರಶ್ನೆಗಳನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಉತ್ತರಿಸಿಕೊಂಡು, ಆಮೇಲೆ ನಿಮ್ಮ ಅಭಿಪ್ರಾಯ (unbiased opinion) ಹೇಳಬೇಕೆಂದು ಕೋರುತ್ತೇವೆ ಎಂಬ ಒಕ್ಕಣೆಯಿದೆ. [ಮಹಿಳಾ ಆಯೋಗಕ್ಕೆ ಮಠದ 12 ಪ್ರಶ್ನೆಗಳು]

ಬಹುತೇಕ ಪ್ರಶ್ನೆಗಳು ಮಠದ ಉಗಮ, ಆಗಮ, ನಿಗಮ, ಗೋಚಾರ, ಗ್ರಹಚಾರ, ಶಿಷ್ಟಾಚಾರ, ಆಚಾರದ ಬಗ್ಗೆ ಇವೆ. ಕೊನೆಗೆ ಈ ಪ್ರಶ್ನೆಗಳಿಗೆ ಉತ್ತರಿಸಿಕೊಂಡರೆ ಸಾಕು, ಅಪರಾದ ನಡೆದಿದೆಯೇ ಅಥವಾ ಇದು ಮಿಥ್ಯಾರೋಪವೇ ಎಂದು ನಿಮಗೆ ತಂತಾನೇ ಮನವರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗಿದೆ. [ಸ್ವಾಮೀಜಿಗಳ ವಿರುದ್ಧ ಆರೋಪ ಪಟ್ಟಿ ವಿವರ]

ಇನ್ನು ಒಂದೇ ಒಂದು ವಿಷಯವನ್ನು ನಿಮಗೆ ಮನವರಿಕೆ ಮಾಡಿಕೊಳ್ಳಬೇಕು. ಏನೊಂದೂ ವಿಚಲಿತರಾಗದೆ, ನಮ್ಮ ಶ್ರೀ ಶ್ರೀಯವರ ದಿನಚರಿ ಒಂದೇ ಒಂದು ದಿನ ಕೂಡ ಏರು ಪೇರಾಗಿಲ್ಲ. ಸಾವಿರ ಸಾವಿರ ಭಕ್ತರು ಬಂದು, ಶ್ರೀ ಶ್ರೀ ಯವರಲ್ಲಿ ನಿವೇದಿಸಿ, ಅವರ ತೊಂದರೆಗೆ ಪರಿಹಾರ ಕಂಡುಕೊಂಡು ಹೋಗುತ್ತಿರುವುದನ್ನು ನೋಡುತ್ತಿದ್ದರೆ ಎಂಥವರಿಗೂ ಆಶ್ಚರ್ಯವಾಗದೆ ಇರಲಿಕ್ಕಿಲ್ಲ. ಸತ್ಯ ಧರ್ಮ ಪಾಲನೆ ಮಾಡಿದರಿಗೆ ಮಾತ್ರ ಇದು ಸಾಧ್ಯ. ಸಾಮಾನ್ಯರಿಗೆ ಅಸಾಧ್ಯ.

ಮೊದಲ ನಾಲ್ಕು ಪ್ರಶ್ನೆಗಳು, ಮಠ ಹಾಗೂ ಗುರುಗಳ ಬಗ್ಗೆ

ಮೊದಲ ನಾಲ್ಕು ಪ್ರಶ್ನೆಗಳು, ಮಠ ಹಾಗೂ ಗುರುಗಳ ಬಗ್ಗೆ

1. ಶ್ರೀ ರಾಮಚಂದ್ರಪುರ ಮಠದ ವಿಶೇಷ ಏನು, ಯಾರು ಸ್ತಾಪಿಸಿದರು?
2. ಮಠಕ್ಕೆ ಎಷ್ಟು ವರ್ಷದ ಇತಿಹಾಸ ಇದೆ, ಇಲ್ಲಿ ಗುರುಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?
3. ಮಠದ ಶಿಷ್ಟಾಚಾರವೇನು, ಗುರುಗಳಾದವರ ದಿನಚರಿ ಏನು? ಅವರ ಸುತ್ತಾ ಮುತ್ತಾ ಯಾರು ಇರುತ್ತಾರೆ? ಏಕಾಂತವಾಗಿರಲು ಸಾಧ್ಯವೇ? ಎಷ್ಟು ಕಠಿಣವಾದ ಅನುಷ್ಟಾನಗಳಿರುತ್ತವೆ?
4. ಮಠದ ಗುರುಗಳ ಕೆಲಸವೇನು? ಅವರ ಪರಿವಾರದ ಕೆಲಸವೇನು?
ಗುರುಗಳು ದಿನವೆಲ್ಲಾ ಏನು ಮಾಡುತ್ತಿರುತ್ತಾರೆ? ಯಾರಿಗಾಗಿ ಈ ಕೆಲಸವನ್ನೆಲ್ಲಾ ಮಾಡುತ್ತಿರುತ್ತಾರೆ?

ಏನೂ ಕೆಲಸ ಮಾಡದೆ ಜನಪ್ರಿಯರಾಗಲು ಸಾದ್ಯವೇ

ಏನೂ ಕೆಲಸ ಮಾಡದೆ ಜನಪ್ರಿಯರಾಗಲು ಸಾದ್ಯವೇ

5 ರಾಘವೇಶ್ವರ ಭಾರತೀ ಸ್ವಾಮಿಜಿಯವರು ಪೀಠ ಅಲಂಕರಿಸಿದ ಮೇಲೆ, ಅವರು ಸಮಾಜಕ್ಕೆ ಎಷ್ಟು ಒಳಿತು ಮಾಡಿದರು, ಅವರು ಸಮಾಜಕ್ಕೆ ಏನೆಲ್ಲಾ ಕೊಟ್ಟಿರು?
6. ಶ್ರೀ ಮಠ ಹೇಗೆ ಕಾರ್ಯ ನಿರ್ವಹಿಸುತ್ತದೆ?
7. ಕೇವಲ, ಕೆಲವೇ ಕೆಲವು ವರ್ಷದಲ್ಲಿ, ಪ್ರಸ್ತುತ ಶ್ರೀ ಶ್ರೀಯವರು ಲಕ್ಷ ಲಕ್ಷ ಭಕ್ತರನ್ನು ಹೇಗೆ ಗಳಿಸಿದರು? ಅವರು ಹೇಗೆ7 ಜನಪ್ರಿಯವಾದರು? ಅವರ ಜನಪ್ರಿಯತೆಗೆ ಕಾರಣಗಳೇನು? ಅವರು ಏನೂ ಕೆಲಸ ಮಾಡದೆ ಜನಪ್ರಿಯರಾಗಲು ಸಾದ್ಯವೇ?

ಬುದ್ಧಿವಂತರು, ಯುವ ಸಮುದಾಯ ಏಕೆ ಭಕ್ತರಾದರು?

ಬುದ್ಧಿವಂತರು, ಯುವ ಸಮುದಾಯ ಏಕೆ ಭಕ್ತರಾದರು?

8. ಎಣಿಸಲಸಾಧ್ಯದಷ್ಟು ಯುವಕರು ಮತ್ತು ನುರಿತ ಟೆಕ್ಕಿಸ್, ಶ್ರೀ ಶ್ರೀ ಮಠಕ್ಕೆ ಈ ಒಂದು ವರ್ಷದಲ್ಲಿ ಹೇಗೆ ಬಂದರು? ಎಲ್ಲಿಂದ ಬಂದರು? ಮೊದಲೆಲ್ಲಿದರಿವರು?
9. ಶ್ರೀ ಶ್ರೀ ಯವರಿಂದ ಎಷ್ಟು ಭಕ್ತರಿಗೆ ಒಳ್ಳೆಯದಾಗಿದೆ? ಶ್ರೀ ಶ್ರೀ ಯವರಿಂದ ಇವರೆಲ್ಲಾ ಏನು ಪಡೆದುಕೊಂಡರು?
10. ಈ ಒಂದು ವರ್ಷದಿಂದಿಚೆಗೆ ಅಪವಾದ ಬಂದಮೇಲೆ, ಶ್ರೀ ಶ್ರೀಯವರ ಭಕ್ತರ ಸಂಖ್ಯೆ ಜಾಸ್ತಿ ಯಾಗಿದೆಯೋ ಅಥವಾ ಇಳಿಮುಖ ವಾಗಿದೆಯೋ?

ಮಹಿಳೆಯರು ಇಲ್ಲಿಗೆ ಯೋಚಿಸದೆ ಬರುತ್ತಿದ್ದಾರೆಯೇ?

ಮಹಿಳೆಯರು ಇಲ್ಲಿಗೆ ಯೋಚಿಸದೆ ಬರುತ್ತಿದ್ದಾರೆಯೇ?

11. ಇಲ್ಲಿಗೆ ಬರುವ ಸಾವಿರ ಸಾವಿರ ಭಕ್ತರೆಲ್ಲಾ ವಿವೇಚಿಸದೇ ಬರುತ್ತಿದ್ದಾರೆನು? ಅದರಲ್ಲೂ, ಇಲ್ಲಿಗೆ ಬರುತ್ತಿರುವ ಮಹಿಳೆಯರು ಮತ್ತು ಯುವತಿಯರೆಲ್ಲಾ ಯೋಚಿಸದೆ ಬರುತ್ತಿದ್ದಾರೇನು?
12. ಗಾಯಕಿ ಮತ್ತು ಅವರ ಕುಟುಂಬದವರು ಏನು ಕೆಲಸ ನಿರ್ವಹಿಸುತ್ತಿದ್ದರು? ಯಾಕೆ ಬಿಟ್ಟು ಹೋದರು ಮತ್ತು ಬಿಟ್ಟು ಹೋದವರು, ಯಾಕೆ ಮರಳಿ ಬಂದು ಇನ್ನೊಮ್ಮೆ ಬಿಟ್ಟು ಹೋದರು? ಏನಕ್ಕಾಗಿ ಅವರು ಮರಳಿ ಬಂದಿದ್ದರು?

ರಾಮಕಥಾ ಎಂದರೇನು?ನಿರಪರಾಧಿಗೆ ಚಿತ್ರ ಹಿಂಸೆ ಏಕೆ?

ರಾಮಕಥಾ ಎಂದರೇನು?ನಿರಪರಾಧಿಗೆ ಚಿತ್ರ ಹಿಂಸೆ ಏಕೆ?

13. ರಾಮಕಥಾ ಎಂದರೇನು? ಎಷ್ಟು ಕಲಾವಿದರು ಭಾಗವಹಿಸುತ್ತಿದ್ದರು? ಕಲಾವಿದರೆಲ್ಲಾ ಜೊತೆಯಲ್ಲೇ ಇರುತ್ತಿದ್ದರೋ ಅಥವಾ ಬೇರೆ ಬೇರೆ ಕಡೆಯಲ್ಲಿ ಇರುತ್ತಿದ್ದರೋ?

ಒಮ್ಮೆ, ಒಂದು ಕ್ಷಣ ಯೋಚಿಸಿ, ನಿರಪರಾಧಿಯಾಗಿ, ಎಷ್ಟು ಚಿತ್ರ ಹಿಂಸೆ ಮತ್ತು ನೋವನ್ನು ನಮ್ಮ ಶ್ರೀ ಶ್ರೀಯವರು ಕಳೆದ ಒಂದು ವರುಷದಿಂದ ಅನುಭವಿಸುತ್ತಿರಬೇಕೆಂದು. ಮೊದಲು ಶ್ರೀ ಮಠ ಹೇಗೆ ನಡೆದುಕೊಂಡು ಬಂದಿದೆಯೂ ಹಾಗೆ ಈಗ ಕೂಡಾ. ಇದನ್ನು ಖಚಿತ ಪಡಿಸಿಕೊಳ್ಳಲು, ಒಮ್ಮೆ ಬಂದು ನೋಡಿ ನಮ್ಮ ಶ್ರೀ ಶ್ರೀ ಮಠಕ್ಕೆ. ಆಮೇಲೆ, ನೀವು, ನಮ್ಮಿಂದ ಏನೂ ವಿವರಣೆ ಕೇಳುವುದಿಲ್ಲ.

English summary
Raghaveshwara Bharathi Swamiji's devotees have took social networking site Facebook and posted 13 questions to all the Media houses in Karnataka. Raghaveshwara Seer hasn't changed his daily routine and his devottees will stand by him said the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X