ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಹಲವೆಡೆ ಗುಡುಗು, ಗಾಳಿ ಸಹಿತ ಆಲಿಕಲ್ಲು ಮಳೆ

|
Google Oneindia Kannada News

ಬೆಂಗಳೂರು, ಮೇ 1: ಉತ್ತರ ಭಾರತದಲ್ಲಿ ತಾಪಮಾನ ಭಾರೀ ಏರಿಕೆ ಕಾಣುತ್ತಿದೆ. ಈ ನಡುವೆ ದಕ್ಷಿಣ ಭಾರತದ ಹಲವಾರು ನಗರಗಳಲ್ಲಿ ಮಳೆ ಸುರಿಯುತ್ತಿದೆ. ಬೆಂಗಳೂರಿನ ಹಲವೆಡೆ ಇಂದು ಭಾರೀ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.

ಇನ್ನು ಮೂರು ದಿನಗಳ ಕಾಲ ಕರ್ನಾಟಕದ ರಾಜಧಾನಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಬೆಂಗಳೂರು ನಿವಾಸಿಗಳು ಭಾರೀ ಮಳೆ ಮತ್ತು ಬೇಸಿಗೆಯ ಸೆಖೆ ಎರಡನ್ನು ಕೂಡಾ ಅನುಭವಿಸುವಂತಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ನಗರದಲ್ಲಿ ನಿರಂತರ ವಿದ್ಯುತ್ ಕಡಿತಗೊಂಡಿದ್ದು ಪರಿಸ್ಥಿತಿ ಹದಗೆಟ್ಟಿದೆ. ಗರಿಷ್ಠ ತಾಪಮಾನವು 35.2 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಮೂಲಕ ಬೆಂಗಳೂರಿನಲ್ಲಿ ಈ ವರ್ಷದ ಅತೀ ಹೆಚ್ಚು ತಾಪಮಾನ ದಾಖಲಾದ ದಿನಗಳ ಬಳಿಕ ಬೆಂಗಳೂರಿನಲ್ಲಿ ಮಳೆ ಸುರಿಯಲು ಆರಂಭವಾಗಿದೆ.

ಬೆಂಗಳೂರಿನಲ್ಲಿ ಭಾನುವಾರ ಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆಯಾಗಿದೆ. ಫ್ರೇಜರ್ ಟೌನ್, ಶಿವಾಜಿನಗರ, ಚಂದ್ರಾ ಲೇಔಟ್, ವಿಜಯನಗರ, ಹೊಸಹಳ್ಳಿ ಸೇರಿದಂತೆ ನಗರದ ಹಲವೆಡೆ ಚಳಿಯ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಿದೆ.

ಈ ಏಪ್ರಿಲ್‌ನಲ್ಲಿ ಏಳು ವರ್ಷಗಳಲ್ಲೇ ಅತ್ಯಂತ ಹೆಚ್ಚು ಮಳೆ

ಈ ವರ್ಷ, ಏಪ್ರಿಲ್‌ನಲ್ಲಿ ಬೆಂಗಳೂರು ಸುಮಾರು ಏಳು ವರ್ಷಗಳಲ್ಲೇ ಅತ್ಯಂತ ಹೆಚ್ಚು ಮಳೆ ಕಂಡಿದೆ. ಬೆಂಗಳೂರಿನಲ್ಲಿ ಏಪ್ರಿಲ್ 2021 ರಲ್ಲಿ 118.2 ಮಿಮೀ, ಏಪ್ರಿಲ್ 2020 ರಲ್ಲಿ 121.1 ಮಿಮೀ, ಮತ್ತು ಏಪ್ರಿಲ್ 2019 ರಲ್ಲಿ ಕೇವಲ 17.8 ಮಿಮೀ ಮಳೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ 2015ರ ಏಪ್ರಿಲ್‌ನಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗಿದೆ. 2015ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ 226.5 ಮಿಮೀ ಮಳೆ ಸುರಿದಿದೆ. ಆದರೆ 2001 ರಲ್ಲಿ ಮಳೆ ಪ್ರಮಾಣದಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ. ಬೆಂಗಳೂರಿನ 2001 ರಲ್ಲಿ ನಗರದಲ್ಲಿ ಏಪ್ರಿಲ್‌ನಲ್ಲಿ 323.8 ಮಿಮೀ ಮಳೆಯಾಗಿದೆ.

Bengaluru Rains: Several Areas received heavy rains and a hailstorm today; Normal Life Disrupted

ಬೆಂಗಳೂರಿನಲ್ಲಿ ಆಲಿ ಕಲ್ಲು ಮಳೆ

ನಗರದ ಹಲವಾರು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಈ ಬಗ್ಗೆ ನಗರದ ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಮಡಿವಾಳ, ಕೋರಮಂಗಲ, ಸರ್ಜಾಪುರ, ಮೆಜೆಸ್ಟಿಕ್, ಮೈಸೂರು ಬ್ಯಾಂಕ್, ಕಾರ್ಪೋರೇಷನ್, ಶಾಂತಿನಗರ, ಕಬ್ಬನ್ ಪಾರ್ಕ್, ಎಂಜಿ ರೋಡ್ ಬಳಿ ಆಲಿಕಲ್ಲು ಸಹಿತ ಮಳೆಯಾಗಿದೆ.

Recommended Video

ಧೋನಿ ನಾಯಕತ್ವಕ್ಕೆ ಕಂಬ್ಯಾಕ್ ಮಾಡಿದ್ಮೇಲೆ ಬದಲಾಯ್ತು CSK ಅದೃಷ್ಟ | Oneindia Kannada

English summary
Bengaluru Rains: Several Areas received heavy rains and a hailstorm today; Normal Life Disrupted, traffic hit, flood like situation in many of the roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X