ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Rains : ಚಳಿ ಸಹಿತ ಮಳೆ: ಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆ

|
Google Oneindia Kannada News

ಬೆಂಗಳೂರು ನವೆಂಬರ್ 26: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟದಲ್ಲಿ ಮುಂದಿನ ಮೂರು ದಿನ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕಳೆದ ಕೆಲದ ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಮುಂದಿನ ಮೂರು ದಿನಗಳವರೆಗೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ನವೆಂಬರ್ 28ರವರೆಗೆ ಕರ್ನಾಟಕದ ಹಲವೆಡೆ ಮಳೆರಾಯ ತಂಪೆರೆಯಲಿದ್ದಾನೆ. ಈಗಾಗಲೇ ಮುಂಜಾನೆ ಹಾಗೂ ಸಂಜೆ ವೇಳೆ ಅಧಿಕ ಚಳಿ ಶುರುವಾಗಿದೆ. ಇದರ ಮಧ್ಯೆ ಮುಂದಿನ ಮೂರು ದಿನ ಹಗುರದಿಂದ ಸಾಮಾನ್ಯ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರು ಸೇರಿದಂತೆ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಹಾವೇರಿ ಮತ್ತು ವಿಜಯಪುರ ಇತರ ಜಿಲ್ಲೆಗಳಲ್ಲಿ ಮಳೆ ಬೀಳುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.

Rain in Bengaluru

ಇನ್ನೂ ಕರಾವಳಿಯ ಹಾಸನ, ಕೊಡಗು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಇತರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ.

ಪ್ರಮುಖ ನಗರಗಳ ತಾಮಪಾನ:

ಹಾಸನ: 28-18, ಚಾಮರಾಜನಗರ: 28-19
ಚಿಕ್ಕಬಳ್ಳಾಪುರ: 26-17, ಕೋಲಾರ: 26-18
ಬೆಂಗಳೂರು: 27-18, ಮಂಗಳೂರು: 31-24
ಶಿವಮೊಗ್ಗ: 31-19, ಬೆಳಗಾವಿ: 31-19
ಮೈಸೂರು: 29-19, ಮಂಡ್ಯ: 29-19
ಮಡಿಕೇರಿ: 26-16, ರಾಮನಗರ: 29-19
ಹುಬ್ಬಳ್ಳಿ: 32-20, ಚಿತ್ರದುರ್ಗ: 30-19
ಹಾವೇರಿ: 32-20, ಬಳ್ಳಾರಿ: 32-21
ಗದಗ: 31-20, ಕೊಪ್ಪಳ: 31-21

English summary
There is a possibility of rain in Karnataka for the next three days due to depression in the Bay of Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X