ಬೆಂಗಳೂರಲ್ಲಿ ಮಳೆ: ವಾಟ್ಸಪ್‌ನಿಂದ ಬೆಸ್ಕಾಂಗೆ ದೂರು ಕೊಡುವುದು ಹೇಗೆ?
ಬೆಂಗಳೂರು, ಮೇ 08: ಬೆಂಗಳೂರು ನಗರದಲ್ಲಿ ಹಿಂಗಾರು ಮಳೆಯ ಅರ್ಭಟ ಜೋರಾಗಿದೆ. ಮಳೆ, ಗಾಳಿಯಿಂದಾಗಿ ಮರಗಳು ಧರೆಗುರುಳಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜನರು ಬೆಸ್ಕಾಂ ಸಹಾಯವಾಣಿ 1912ಕ್ಕೆ ನೂರಾರು ದೂರುಗಳನ್ನು ಸಲ್ಲಿಸಿದ್ದಾರೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಸಹಾಯವಾಣಿಗೆ ಅನೇಕ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ 1912 ಸಂಪರ್ಕಿಸುವುದು ಅಷ್ಟು ಬೇಗ ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೂರು ನೀಡುವ ಕುರಿತು ಬೆಸ್ಕಾಂ ಪ್ರಕಟಣೆಯೊಂದನ್ನು ಹೊರಡಿಸಿದೆ.

ವಾಟ್ಸಪ್ ಮೂಲಕ ದೂರು ನೀಡಿ: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ, ಮಳೆಗೆ ವಿದ್ಯುತ್ ಕಂಬಗಳು ಮುರಿದು, ವಿದ್ಯುತ್ ಮೂಲ ಸೌಕರ್ಯಗಳು ಹಾನಿಗೊಳಗಾದ ಬಗ್ಗೆ ಬೆಸ್ಕಾಂ ಸಹಾಯವಾಣಿ 1912ಗೆ ಹಲವು ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಬೆಸ್ಕಾಂ ಹೇಳಿದೆ.
ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಈ ಕಳಕಂಡ ಪಯಾರ್ಯ ವಾಟ್ಸ್‌ಆಪ್ ಸಂಖ್ಯೆಗಳನ್ನು ನೀಡಲಾಗಿದೆ.
ವಾಟ್ಸಪ್ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ ಎಂದು ಬೆಸ್ಕಾಂ ಹೇಳಿದೆ.
ಜನರು ವಿದ್ಯುತ್ ಸಮಸ್ಯೆ ಬಗ್ಗೆ ಎಸ್‌ಎಂಎಸ್‌ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಜಿಲ್ಲಾವಾರು ವಾಟ್ಸಪ್ ಸಂಖ್ಯೆಗಳು
* ಬೆಂಗಳೂರು ಪೂರ್ವ- 8277884013
* ಬೆಂಗಳೂರು ಪಶ್ಚಿಮ- 8277884012
* ಬೆಂಗಳೂರು ಉತ್ತರ- 8277884014
* ಬೆಂಗಳೂರು ದಕ್ಷಿಣ- 8277884011
* ಕೋಲಾರ- 8277884015
* ಚಿಕ್ಕಬಳ್ಳಾಪುರ- 8277884016
* ಬೆಂಗಳೂರು ಗ್ರಾಮಾಂತರ- 8277884017
* ರಾಮನಗರ- 8277884018
* ತುಮಕೂರು- 8277884019
* ಚಿತ್ರದುರ್ಗ- 8277884020
* ದಾವಣಗೆರೆ- 8277884021
ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸಪ್ ಸಂಖ್ಯೆ 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸಪ್ಸಂಖ್ಯೆ 9449844640 ಸಂಪರ್ಕಿಸಬಹುದಾಗಿದೆ.
ಮೊಬೈಲ್ ಸಂಖ್ಯೆಗಳು (ಕೇವಲ ಎಸ್ಎಂಎಸ್ ಗಳಿಗೆ ಮಾತ್ರ). 9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118, 9480816119.
ಮೂರು ದಿನಗಳಿಂದ ಬೆಂಗಳೂರು ನಗರದಲ್ಲಿ ಮಳೆ ಸುರಿಯುತ್ತಿದೆ. ಹಿಂಗಾರು ಮಳೆಯ ಆರ್ಭಟ, ಗಾಳಿಗೆ ಮರಗಳು ಧರೆಗೆ ಉರುಳಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಸಂಪರ್ಕ ಕಡಿತಗೊಳ್ಳುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ಇನ್ನೊಂದು ವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಮರಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಬೆಸ್ಕಾಂ, ಬಿಬಿಎಂಪಿ ಈ ಸಂದರ್ಭದಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕಿದೆ. ಬಿಬಿಎಂಪಿ ಈಗಾಗಲೇ ಸಹಾಯವಾಣಿಯನ್ನು ಆರಂಭಿಸಿದ್ದು, ಮರ ಬಿದ್ದ ಮಾಹಿತಿ ನೀಡಿ ಎಂದು ಮನವಿ ಮಾಡಿದೆ.
ಬಿಬಿಎಂಪಿ ಗಸ್ತು ಸೇವೆ ಆರಂಭಿಸಿದೆ. ಮಳೆಯಿಂದಾಗಿ ಮರಗಳು ಬಿದ್ದು ಅದು ಇಬ್ಬರು ತೆರವುಗೊಳಿಸುವ ರೀತಿಯಲ್ಲಿ ಇದ್ದರೆ ಸ್ಥಳೀಯರ ಸಹಾಯದಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ. ವಿದ್ಯುತ್ ಕಂಬ, ತಂತಿಗಳು ಹಾನಿಯಾಗಿದ್ದರೆ ಬೆಸ್ಕಾಂಗೆ ಮಾಹಿತಿ ನೀಡಲಾಗುತ್ತದೆ.












Click it and Unblock the Notifications