ಕರ್ನಾಟಕದಲ್ಲಿ ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ಹಿಂದಿ ಕಲಿ ಎಂದ ರೈಲ್ವೆ ಸಿಬ್ಬಂದಿ!

ಕರ್ನಾಟಕದ ಬ್ಯಾಂಕ್‌ಗಳಲ್ಲಿ ಹಾಗೂ ರೈಲ್ವೆ ಕೌಂಟರ್‌ಗಳ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡುವುದು. ಕನ್ನಡಿಗರು ಸಹ ಹಿಂದಿ ಕಲಿಯಬೇಕು ಅಂತ ಹೇಳಿ ದರ್ಪ ಮೆರೆಯುವುದು ಕನ್ನಡಿಗರ ವಿರೋಧದ ನಡುವೆಯೂ ಮುಂದುವರಿದಿದೆ. ಇದೀಗ ರೈಲ್ವೆ ಸಿಬ್ಬಂದಿಯೊಬ್ಬರು ಕನ್ನಡಿಗರಿಗೆ ಹಿಂದಿ ಸಿಕೋ, ಬಿಸ್ ದೇದೊ ಅಂತ (20 ರೂಪಾಯಿ ಕೊಡಿ, ಹಿಂದಿ ಕಲಿಯಿರಿ) ಅಂತ ಹೇಳಿರುವುದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಕರ್ನಾಟಕದಲ್ಲಿ ರೈಲ್ವೆ ಟಿಕೆಟ್ ಪಡೆಯುವುದಕ್ಕೆ ನಾವ್ಯಾಕೆ ಹಿಂದಿ ಇಲ್ಲ ಉರ್ದು ಕಲಿಯಬೇಕು ಅಂತ ಕನ್ನಡಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ರೈಲ್ವೆ ಸಿಬ್ಬಂದಿ ಕನ್ನಡ ಮಾತನಾಡಲು ಅಲ್ಪಸ್ವಲ್ಪ ಬಂದರೂ, ಇದನ್ನು ಪ್ರಶ್ನಿಸಿದ ಕನ್ನಡಿಗರಿಗೆ ಹಿಂದಿಯಲ್ಲಿ ಅವನಿಗೆ ಸುಮ್ನನಿರೋಕೆ ಹೇಳಿ ಅಂತ ಹೇಳಿರುವುದು ವಿಡಿಯೋದಲ್ಲಿದೆ.

ಬೀಸ್ ರೂಪಾಯಿ ದೆದೋ, ಹಿಂದಿ ಸಿಕೋ (20 ರೂಪಾಯಿ ಕೊಡಿ, ಹಿಂದಿ ಕಲಿಯಿರಿ) ಎಂದು ಹೇಳಿದ ರೈಲ್ವೆ ಸಿಬ್ಬಂದಿಯೊಬ್ಬರಿಗೆ ಕನ್ನಡಿಗರೊಬ್ಬರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ರೈಲ್ವೆ ಟಿಕೆಟ್ ತೆಗೆದುಕೊಳ್ಳುವುದಕ್ಕೆ ನಾವು ಹಿಂದಿ ಇಲ್ಲು ಉರ್ದು ಯಾಕೆ ಕಲಿಯಬೇಕು ಅಂತ ಪ್ರಶ್ನೆ ಮಾಡಿದ್ದಾರೆ. ಕನ್ನಡಿಗರೊಬ್ಬರು ರೈಲ್ವೆ ನಿಲ್ದಾಣದ ಟಿಕೆಟ್ ಕೊಡುವ ಜಾಗಕ್ಕೆ (Ticket counter)ಗೆ ಹೋಗಿ ಮಾಲೂರಿಗೆ ಟಿಕೆಟ್ ಕೊಡಿ ಅಂತ ಕೇಳಿದ್ದು, ರೈಲ್ವೆ ಸಿಬ್ಬಂದಿ ಹಿಂದಿಯಲ್ಲೇ ಮಾತನಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿ ವಿಡಿಯೋ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯಿಂದ ಮೊಬೈಲ್‌ ಕಸಿದುಕೊಳ್ಳಲು ಮುಂದಾಗಿರುವುದು ಹಾಗೂ ಅವನಿಗೆ ಸುಮ್ಮನಿರೋಕೆ ಹೇಳಿ ಅಂತ ಹಿಂದಿಯಲ್ಲಿ ಪಕ್ಕದ ಸಿಬ್ಬಂದಿಗೆ ಹೇಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ.

Railway staff told to learn Hindi to buy railway tickets in Karnataka

ಕನ್ನಡ ಬಂದರೂ ಮಾತನಾಡಿಲ್ಲ: ಇನ್ನು ರೈಲು ಟಿಕೆಟ್ ತೆಗೆದುಕೊಳ್ಳಲು ಹೋದವರು ಗರಂ ಆಗಿರುವುದು ರೈಲ್ವೆ ಸಿಬ್ಬಂದಿ ಅಲ್ಪಸ್ವಲ್ಪ ಕನ್ನಡ ಬಂದರೂ ಕನ್ನಡ ಮಾತನಾಡದೆ ಇರುವುದಕ್ಕೆ. ಅಲ್ಲದೇ ಇದನ್ನು ಪ್ರಶ್ನೆ ಮಾಡಿದ ಕನ್ನಡಿಗರಿಗೆ ನೀನು ಹಿಂದಿ ಕಲಿ ಅಂತ ಹೇಳಿದ್ದಾನೆ ಎಂದು ವಿಡಿಯೋ ಮಾಡಿದವರು ಆರೋಪಿಸಿದ್ದಾರೆ. ಈ ವಿಷಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡಿಗ ದೇವರಾಜ್ ಎನ್ನುವವರು ಈ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕನ್ನಡನಾಡಿನ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಕನ್ನಡಿಗರು ಹಿಂದಿ/ಉರ್ದು ಕಲಿಯಬೇಕಂತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿಡಿಯೋದಲ್ಲಿ ಏನಿದೆ: ರೈಲ್ವೆ ನಿಲ್ದಾಣದ ಟಿಕೆಟ್‌ ವಿತರಿಸುವ ಜಾಗದಲ್ಲಿ ರೈಲ್ವೆ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡಿ, ಹಿಂದಿ ಕಲಿಯಿರಿ ಎಂದು ಹೇಳಿದ್ದಾರೆ ಎಂದು ಹೇಳಲಾಗಿದ್ದು, ಈ ಮಾತು ಹೇಳುತ್ತಿದ್ದಂತೆ ವಿಡಿಯೋ ಆನ್‌ಮಾಡಿ ಈಗ ಹೇಳು ಅಂತ ಕೇಳಿದ್ದಾರೆ. ಅದಕ್ಕೆ ಬಾ ಇಲ್ಲಿ ಅಂತ ಹಿಂದಿಯಲ್ಲೇ ಹೇಳಿ ಮೊಬೈಲ್‌ ಕಸಿದುಕೊಳ್ಳಲು ಮುಂದಾಗಿದ್ದಾನೆ. ಮಾಲೂರಿಗೆ ಟಿಕೆಟ್‌ ಕೊಡಿ ಅಂತ ವಿಡಿಯೋ ಆನ್‌ ಮಾಡಿದ ಮೇಲೆ ಕೇಳಿದಾಗ ಅಲ್ಪಸ್ವಲ್ಪ ಕನ್ನಡದಲ್ಲಿ ಮಾತನಾಡಿದ್ದಾರೆ. ಟಿಕೆಟ್‌ ಕೊಡ್ತಿದ್ದಿನಲ್ಲ ಅಂತ ಕೈ ಬೆರಳು ತೋರಿಸಿ ಹಿಂದಿಯಲ್ಲೇ ಹೇಳಿದ್ದಾರೆ.

ಪಕ್ಕದ ಕೌಂಟರ್‌ನಲ್ಲಿದ್ದವರೊಬ್ಬರು ನೀವು ಇಲ್ಲಿ ಬನ್ನಿ ಸರ್‌ ನಾನು ಟಿಕೆಟ್‌ ಕೊಡ್ತೀನಿ ಅಂತ ಹೇಳಿದ್ದು, ಅದಕ್ಕೆ ವಿಡಿಯೋ ಮಾಡಿಕೊಂಡವರು. ಸಿಕೊ ಎಂದರೇನು ಮೇಡಂ ಅಂತ ಪ್ರಶ್ನೆ ಮಾಡಿದ್ದಾರೆ. ಕಲಿಯಿರಿ ಅಂತ ಎಂದು ಅವರು ಹೇಳಿದ್ದು, ನಾವು ಕರ್ನಾಟಕದಲ್ಲಿ ಟಿಕೆಟ್‌ ತೆಗೆದುಕೊಳ್ಳೋಕೆ ಹಿಂದಿ ಕಲಿಯಬೇಕಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಅವರು ಈಗ ಕನ್ನಡ ಕಲಿಯುತ್ತಿದ್ದಾರೆ ಎಂದು ಮತ್ತೊಬ್ಬ ಸಿಬ್ಬಂದಿ ಹೇಳಿದ್ದಾರೆ.

ವಿ. ಸೋಮಣ್ಣ ವಿರುದ್ಧವೂ ಆಕ್ರೋಶ

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಸಹ ಜನ ಈ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಸುಷ್ಮಾ ಅಯ್ಯಂಗಾರ್ ಅವರು, ನಿಮ್ಮ ಮೂಗು ಕೆಳಗಡೆನೇ ಇಷ್ಟು ದುರಂಹಂಕಾರದಲ್ಲಿ ಕನ್ನಡಿಗರನ್ನ ಹೀಯಾಳಿಸಿ ಮಾತಾಡ್ತಾರೆ. ನೀವು ನೋಡಿದರೆ ಎಲ್ಲ ಸಿಬ್ಬಂದ್ದಿ ಕನ್ನಡ ಕಲಿಯಬೇಕು ಅಂತ ಹೇಳಿದ್ದೀರಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+