ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ಸಂಚಾರ ರದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಯಲಹಂಕ- ಧರ್ಮಾವರಂ ರೈಲ್ವೆ ಮಾರ್ಗದಲ್ಲಿ ಇಂಟರ್‌ಲಾಕಿಂಗ್ ಕಾರ್ಯ ನಡೆಯುತ್ತಿರುವ ಕಾರಣ ಡಿಸೆಂಬರ್ 12ರಿಂದ 15ರವರೆಗೆ ಕೆಲವು ರೈಲುಗಳನ್ನು ರದ್ದುಪಡಿಸಲಾಗುತ್ತಿದೆ. ಇನ್ನು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗುತ್ತಿದೆ.

ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು

ಯಾವ್ಯಾವ ರೈಲುಗಳು ರದ್ದು: ಬೆಂಗಳೂರು ಕಂಟೋನ್ಮೆಂಟ್-ವಿಜಯವಾಡ ಪ್ಯಾಸೆಂಜರ್ . ವಿಜಯವಾಡ-ಬೆಂಗಳೂರು ಕಂಟೋನ್ಮೆಂಟ್ , ಬೆಂಗಳೂರು-ಹಿಂದೂಪುರ ಪ್ಯಾಸೆಂಜರ್, ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್, ಯಶವಂತಪುರ-ಕಾಚಿಗುಡ, ಕಾಚಿಗುಡ-ಯಶವಂತಪುರ ಮಾರ್ಗದ ರೈಲುಗಳು ರದ್ದಾಗಲಿವೆ.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18' ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ಇನ್ನು ಯಶವಂತಪುರ-ಮಚಲೀಪಟ್ಟಣ, ಮಚಲೀಪಟ್ಟಣ-ಯಶವಂತಪುರ, ಚೆನ್ನೈ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಎಕ್ಸ್‌ಪ್ರೆಸ್, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ-ಚೆನ್ನೈ ಸಂಚಾರ ಭಾಗಶಃ ರದ್ದಾಗಲಿದೆ.

Railway interruption in Yelahanka Dharmawaram lane

ಮಾರ್ಗ ಬದಲಾವಣೆ ಎಲ್ಲೆಲ್ಲಿ? ಅಹಮದಾಬಾದ್-ಯಶವಂತಪುರ ಎಕ್ಸ್‌ಪ್ರೆಸ್, ಬಾಗಲಕೋಟೆ-ಕೆಎಸ್‌ಆರ್ ಬೆಂಗಳೂರು, ಸಾಯಿನಗರ ಶಿರಡಿ-ಚೆನ್ನೈ, ಯಶವಂತಪುರ-ಗೋರಖ್‌ಪುರ್, ಕೊಯಮತ್ತೂರು-ರಾಜ್‌ಕೋಟ್‌, ತಿರುವನಂತಪುರಂ-ಛತ್ರಪತಿ ಶಿವಾಜಿ ಟರ್ಮಿನಲ್, ಲೋಕಮಾನ್ಯ ತಿಲಕ್ ಟರ್ಮಿನಲ್-ಕೊಯಮತ್ತೂರು, ಕೊಯಮತ್ತೂರು-ಲೋಕಮಾನ್ಯ ತಿಲಕ್ ಟರ್ಮಿನಲ್, ಕೆಎಸ್‌ಆರ್ ಬೆಂಗಳೂರು-ಅಜ್ಮಿರ್, ನಿಜಾಮುದ್ದೀನ್-ಕೊಯಮತ್ತೂರು, ನಿಜಾಮುದ್ದೀನ್-ಯಶವಂತಪುರ ಎಕ್ಸ್‌ಪ್ರೆಸ್, ಪುರಿ-ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ-ಪುರಿ ಬದಲಿ ಮಾರ್ಗದಲ್ಲಿ ಸಂಚರಿಸಲಿದೆ.

ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು

ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್ ಎಕ್ಸ್‌ಪ್ರೆಸ್ ರೈಲು ಡಿ.13, 14 ಹಾಗೂ 15ರಂದು ಕೆಎಸ್‌ಆರ್‌ನಿಂದ ಆರಂಭವಾಗಿ ಕೆಎಸ್‌ಆರ್ ಬೆಂಗಳೂರು ಹಿಂದೂಪುರ ನಡುವಿನ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

English summary
Because of some on going work there will be time interruption in Yalahanka dharmawaram railway route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X