ಎಚ್ ಎಎಲ್ ನೌಕರರ ಸಂಘ ರಾಹುಲ್ ಭೇಟಿಗೆ ಸಿದ್ಧವಿಲ್ಲ: ಸಂಸದ ಮೋಹನ್

ಬೆಂಗಳೂರು, ಅಕ್ಟೋಬರ್ 12: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್) ನೌಕರರ ಸಂಘ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲು ನಿರಾಕರಿಸಿದೆ. ದೇಶದ ರಕ್ಷಣಾ ವಿಷಯವನ್ನು ಮತ್ತು ಸಂಸ್ಥೆಗಳನ್ನು, ತಮ್ಮ ಕೀಳು ಲಾಭಕ್ಕಾಗಿ ರಾಜಕೀಯಗೊಳಿಸುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರ ಪ್ರಯತ್ನಕ್ಕೆ ಇದರಿಂದ ಮುಖಭಂಗವಾಗಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದ್ದಾರೆ.

ಇವರ ರಾಜಕೀಯ ದಾಳಗಳಾಗಲು ಎಚ್.ಎ.ಎಲ್ ನೌಕರರು ನಿರಾಕರಿಸಿರುವಾಗ ರಾಹುಲ್ ಗಾಂಧಿ ಅವರು ನಾಳೆ ಯಾರನ್ನು ಭೇಟಿ ಆಗಲಿದ್ದಾರೆ? ಈ ವಿಷಯ ರಾಜಕೀಯಗೊಳಿಸುವುದನ್ನು ಎಚ್.ಎ.ಎಲ್ ನೌಕರರು ಬಯಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Rahul Gandhi must realise HAL employees snub and stay away from politicising

ದೇಶದ ಹೆಮ್ಮೆ ಆಗಿರುವ ಎಚ್.ಎ.ಎಲ್ ಸಂಸ್ಥೆಗೆ ವಿಷವನ್ನು ಬೆರೆಸುವಂತಹ ಕೆಟ್ಟ ಮತ್ತು ಅಪಾಯಕಾರಿ ಪ್ರಯತ್ನವನ್ನು ರಾಹುಲ್ ಗಾಂಧಿ ಕೈಬಿಡಲಿ. ಎಚ್.ಎ.ಎಲ್ ಅನ್ನು ತನ್ನಷ್ಟಕ್ಕೆ ಇರಲು ಬಿಡಲಿ ಎನ್ನುವ ನೌಕರರ ಸಂದೇಶ ರಾಹುಲ್ ಗಾಂಧಿ ಅವರಿಗೆ ತಲುಪಲಿದೆ ಎಂದು ನಾನು ಆಶಿಸುತ್ತೇನೆ ಎಂಬುದನ್ನು ಬಿಜೆಪಿ ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+