• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಗೀಗುಡ್ಡದ ಆಂಜನೇಯ ಸ್ವಾಮಿಗೆ ಸುವರ್ಣ ಮಹೋತ್ಸವದ ಸಂಭ್ರಮ

|

ಬೆಂಗಳೂರು, ನ 13: ರಾಜಧಾನಿಯ ಪ್ರಸಿದ್ದ ದೇವಾಲಯಗಳಲ್ಲೊಂದಾದ ಜಯನಗರ 9ನೇ ಬ್ಲಾಕ್ ನಲ್ಲಿರುವ ರಾಗೀಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ.

50ನೇ ವರ್ಷದ ಪ್ರಯುಕ್ತ ಮತ್ತು ವಾರ್ಷಿಕವಾಗಿ ಅದ್ದೂರಿಯಾಗಿ ನಡೆಯುವ ಹನುಮಜ್ಜಯಂತಿಯ ಜೊತೆಗೆ ಈ ಬಾರಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್ ಹನ್ನೆರಡನೇ ತಾರೀಕಿನಿಂದ ಡಿಸೆಂಬರ್ 23ನೇ ತಾರೀಕಿನವರೆಗೆ ಹನುಮಜ್ಜಯಂತಿ ಕಾರ್ಯಕ್ರಮಗಳು ನಡೆಯಲಿದೆ. (ರಾಗೀಗುಡ್ಡ ದೇವಸ್ಥಾನದಿಂದ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ)

23.12.2018 ರಿಂದ 30.12.2018ನೇ ತಾರೀಕನವರೆಗೆ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಅವಧಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಯಜುರ್ವೇದಸಂಹಿತ ಸ್ವಾಹಾಕಾರ ಯಾಗ, ರಾಮಾಯಣ ಪಾರಾಯಣ, ರಾಮ ತಾರಕ ಹೋಮ ಮುಂತಾದ ಹೋಮ ಹವನಾದಿಗಳು ನಡೆಯಲಿದೆ.

ಇದಲ್ಲದೇ, ರುದ್ರ ಕ್ರಮಾರ್ಚನೆ, ವೇದಾರ್ಥ ಪ್ರವಚನ, ಚತುರ್ವೇದ ಸ್ವಸ್ತಿ ನೀರಾಜನ, ಶ್ರೀರಾಮನಾಮ ಕೋಟಿ ಲೇಖನ ಯಜ್ಞ, ಜೊತೆಗೆ ಕಾರ್ಯಕ್ರಮದ ಕೊನೆಯ ದಿನದಂದು ಪ್ರಭಾತ್ ಕಲಾವಿದರಿಂದ 'ಶ್ರೀರಾಮ ಪ್ರತೀಕ್ಷ' ನೃತ್ಯ ಕಾರ್ಯಕ್ರಮ ನಡೆಯಲಿದೆ. (ಆರ್ಥಿಕವಾಗಿ ಕೈಲಾಗದವರ ಕೈಹಿಡಿಯುವ ರಾಗೀಗುಡ್ಡ ಟ್ರಸ್ಟ್)

ಡಿಸೆಂಬರ್ ಹನ್ನೆರಡರಂದು ಅಷ್ಟದ್ರವ್ಯ ನಾಳಿಕೇರ ಮಹಾಗಣಪತಿ ಹೋಮದೊಂದಿಗೆ ಹನುಮಜ್ಜಯಂತಿ ಕಾರ್ಯಕ್ರಮ ಆರಂಭವಾಗಲಿದೆ. 12.12.2018 ರಿಂದ 23.12.2018ರ ವರೆಗೆ ನಡೆಯುವ ಪ್ರಮುಖ ಕಾರ್ಯಕ್ರಮಗಳ ವಿವರ ಇಂತಿದೆ:

16.12.2018 - ಶ್ರೀ ಚಂಡಿಕಾ ಹೋಮ

17.12.2018 - ಶ್ರೀ ಧನ್ವಂತರಿ ಹೋಮ

18.12.2018 - ಶ್ರೀ ಲಲಿತಾ ಸಹಸ್ರನಾಮ ಹೋಮ

19.12.2018 - ಪವಮಾನ ಹೋಮ

20.12.2018 - ಹನುಮಜ್ಜಯಂತಿ

ಗುಡ್ಡದ ಮೇಲಿನ ಮೂಲ ಆಂಜನೇಯ ಹಾಗೂ ಪ್ರವೇಶದ್ವಾರದ ಗಣೇಶ ವಿಗ್ರಹಗಳಷ್ಟೇ ಇದ್ದ ರಾಗಿಗುಡ್ಡದ ಆಂಜನೇಯಸ್ವಾಮಿ ದೇವಸ್ಥಾನ, ಕಾಲಾಂತರದಲ್ಲಿ ಸೀತೆ, ಲಕ್ಷ್ಮಣರೊಡಗೂಡಿದ ಶ್ರೀರಾಮ, ದಕ್ಷಿಣೇಶ್ವರ, ಶ್ರೀ ರಾಜರಾಜೇಶ್ವರಿ, ಮಹಾ ಗಣಪತಿ, ನವಗ್ರಹಗಳ ದೇವಾಲಯಗಳ ಸಮುಚ್ಛಯವಾಯಿತು.

ಶುಚಿತ್ವದ ವಿಚಾರದಲ್ಲಿ ರಾಜಧಾನಿಯ ದೇವಾಲಯಗಳ ಪೈಕಿ ಮಂಚೂಣಿಯಲ್ಲಿ ಬರುವ ರಾಗೀಗುಡ್ಡ ದೇವಾಲಯ, ಕೈಲಾಗದವರಿಗೆಂದು ವಿದ್ಯುಚ್ಛಾಲಿತ ಲಿಫ್ಟ್ ವ್ಯವಸ್ಥೆಯನ್ನು ಕೂಡಾ ಬಂದಿದೆ. ಆಸ್ತಿಕರ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರವಾಗಿರುವ ರಾಗೀಗುಡ್ಡ ದೇವಾಲಯ ನಿತ್ಯ ಅನ್ನ ದಾಸೋಹ ಕಾರ್ಯಕ್ರಮವನ್ನೂ ನಡೆಸುತ್ತಿದೆ.

English summary
Bengaluru, Ragigudda Prasanna Anjaneya Swamy temple Golden Jubilee celebration and Hanuma Jayanthi programme from Dec 12 to Dec 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X