ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಂಗಳಲ್ಲೇ ಆರ್ ಅಂಡ್‌ ಡಿ ನೀತಿ: ಸಿಎಂ ಬಸವರಾಜ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಜೂ. 7: ನೂತನ ಆರ್ ಅಂಡ್ ಡಿ ನೀತಿಯನ್ನು ಸರ್ಕಾರ ರೂಪಿಸುತ್ತಿದೆ. ಒಂದು ತಿಂಗಳ ಅವಧಿಯಲ್ಲೇ ಆರ್ ಅಂಡ್ ಡಿ ನೀತಿ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ತಜ್ಞ, ಪದ್ಮಭೂಷಣ ಡಾ. ಎಚ್.ನರಸಿಂಹಯ್ಯ 102ನೇ ಜನ್ಮದಿನಾಚರಣೆ ಅಂಗವಾಗಿ ರೋಬೋಟಿಕ್ಸ್ ಮತ್ತು ಕೃತಕ ಬುದ್ದಿಮತ್ತೆ ಪ್ರಯೋಗಾಲವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.

ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆ: ಜೂ.20ಕ್ಕೆ ಪ್ರಧಾನಿ ಶಂಕುಸ್ಥಾಪನೆ- ಸಿಎಂ ಬೊಮ್ಮಾಯಿಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆ: ಜೂ.20ಕ್ಕೆ ಪ್ರಧಾನಿ ಶಂಕುಸ್ಥಾಪನೆ- ಸಿಎಂ ಬೊಮ್ಮಾಯಿ

ಡಾ. ಎಚ್.ನರಸಿಂಹಯ್ಯ ಆತ್ಮಕಥನ 'ಪಾಥ್ ಆಫ್ ಸ್ಟ್ರಗಲ್' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು, "ಗ್ಯಾರೇಜ್‌ನಿಂದ ಹಿಡಿದು ದೊಡ್ಡ ಸಂಸ್ಥೆಗಳಲ್ಲಿ ನಡೆಯುವ ಸಂಶೋಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಹೊಸ ವಿಚಾರ, ಜ್ಞಾನ ಯಾರಿಗೆ ಬೇಕಾದರೂ ಬರಬಹುದು. ವೈಯಕ್ತಿಕವಾಗಿಯೂ ಸಂಶೋಧನೆ ಮಾಡುವವರಿಗೆ ಪ್ರೋತ್ಸಾಹ ನೀಡಲಾಗುವುದು. ನೀತಿಯ ಸಂಪೂರ್ಣ ಉಪಯೋಗವನ್ನು ನ್ಯಾಷನಲ್ ಶಿಕ್ಷಣ ಸಂಸ್ಥೆ ಪಡೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ 52,000 ಕೋಟಿ ರೂ.ಹೂಡಲು ಒಪ್ಪಂದ ಮಾಡಿಕೊಂಡ ಆಕ್ಮೆ ಕ್ಲೀನ್ ಟೆಕ್ ಸಲ್ಯುಷನ್ ಮಂಗಳೂರಿನಲ್ಲಿ 52,000 ಕೋಟಿ ರೂ.ಹೂಡಲು ಒಪ್ಪಂದ ಮಾಡಿಕೊಂಡ ಆಕ್ಮೆ ಕ್ಲೀನ್ ಟೆಕ್ ಸಲ್ಯುಷನ್

ತಾರ್ಕಿಕ ಚಿಂತನೆ ಬರಬೇಕು: ಬೊಮ್ಮಾಯಿ

ತಾರ್ಕಿಕ ಚಿಂತನೆ ಬರಬೇಕು: ಬೊಮ್ಮಾಯಿ

ಮಕ್ಕಳು ವಿಷಯದ ಬಗ್ಗೆ ಯಾಕೆ, ಏನು, ಎಲ್ಲಿ ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಆಗ ತಾರ್ಕಿಕ ಚಿಂತನೆ ಬೆಳೆಯುತ್ತದೆ. ತಾರ್ಕಿಕ ಚಿಂತನೆ ಬಂದರೆ ಯಾವುದನ್ನೂ ಬಾಯಿಪಾಠ ಮಾಡುವ ಅವಶ್ಯಕತೆ ಇಲ್ಲ. ಪ್ರಶ್ನೆ ಕೇಳುವ ಅಧಿಕಾರ ಮಕ್ಕಳದ್ದು. ಮಕ್ಕಳ ಕುತೂಹಲವನ್ನು ಉಳಿಸಬೇಕು. ಕುತೂಹಲ ಸಂಶೋಧನೆಗೆ ದಾರಿ. ಈ ಮೂಲವನ್ನಿಟ್ಟುಕೊಂಡು ಕಲಿಕೆಯಾಗಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ

ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ

ನೂತನ ಶಿಕ್ಷಣ ನೀತಿಯಲ್ಲಿ ಹೇಳಿರುವುದನ್ನು ನ್ಯಾಷನಲ್ ಶಿಕ್ಷಣ ಸಂಸ್ಥೆ ಜಾರಿಗೆ ತರುತ್ತಿದೆ. ನೂತನ ಶಿಕ್ಷಣ ನೀತಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತಂದಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಯೋಗಶೀಲತೆಯನ್ನು ತಂದಿರುವ ಶಿಕ್ಷಣ ನೀತಿ ವಿಜ್ಞಾನಕ್ಕೆ ಮಹತ್ವವನ್ನು ನೀಡಿದೆ. ಸರ್ಕಾರದ ವತಿಯಿಂದ ಪ್ರತಿ ಶಾಲೆಗೆ 50 ಲಕ್ಷ ರೂ.ಗಳ ಮೌಲ್ಯದ ಅಟಲ್ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ಸಂಶೋಧನೆಗೆ ಇದರಿಂದ ಅವಕಾಶ ದೊರೆಯಲಿದೆ. ಕರ್ನಾಟಕದಲ್ಲಿ ಈಗಾಗಲೇ ಅಂತಹ ನೂರಾರು ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿರುವ ಈ ಸಂಸ್ಥೆಗೆ ಮುಂದೆ ಬಹಳ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ ಎಂದರು.

ಮೂಢ ನಂಬಿಕೆಗಳ ವಿರುದ್ಧ ಹೋರಾಟ

ಮೂಢ ನಂಬಿಕೆಗಳ ವಿರುದ್ಧ ಹೋರಾಟ

ಈ ದೇಶದ ಸನಾತನ ಮೌಲ್ಯಗಳನ್ನು ಉಳಿಸಿಕೊಂಡು, ಆಧುನಿಕ ಭಾರತ ನಿರ್ಮಾಣ ಮಾಡುವ ಕೆಲಸವನ್ನು ನರಸಿಂಹಯ್ಯನವರು ಮಾಡಿದರು. ವೈಜ್ಞಾನಿಕ ಮನೋಭಾವ, ವಿಚಾರವಾದಿಯಾಗಿದ್ದ ಅವರು ಮೂಢ ನಂಬಿಕೆಗಳ ವಿರುದ್ಧ ಹೋರಾಡಿದವರು. ಮೂಢನಂಬಿಕೆ ಯಾವ ರೀತಿ ನಮ್ಮ ಬದುಕಿನ ದಾರಿ ತಪ್ಪಿಸಿದೆ ಎಂದು ನಿರೂಪಿಸಿದರು. 70 ರ ದಶಕಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಭಾನಾಮತಿ ವಿರುದ್ಧ ದೊಡ್ಡ ದನಿಯಾಗಿ ಹೋರಾಟ ಮಾಡಿ, ಜನರಿಗೆ ಧೈರ್ಯ ತುಂಬಿ, ರೈತರ, ಬಡವರ ಬದುಕಿನಲ್ಲಿ ನೆಮ್ಮದಿಯನ್ನು ತದುಕೊಟ್ಟವರು ಎಂದರು.

ಭವ್ಯವಾದ ವಿದ್ಯಾಮಂದಿರ ಸ್ಥಾಪನೆ

ಭವ್ಯವಾದ ವಿದ್ಯಾಮಂದಿರ ಸ್ಥಾಪನೆ

ಹಲವಾರು ವಿಚಾರಗಳಲ್ಲಿ ಅವರ ನಿಲುವುಗಳು ಅಂದಿನ ಸಮಾಜವನ್ನು ಮೂಢನಂಬಿಕೆಯಿಂದ ದೂರ ಮಾಡಿ ಕರ್ನಾಟವನ್ನು ವೈಜ್ಞಾನಿಕವಾಗಿ ಚಿಂತಿಸುವ ಸಮಾಜವನ್ನಾಗಿ ಪರಿವರ್ತನೆ ಮಾಡಿದ್ದು ನರಸಿಂಹಯ್ಯನವರು. ಕೇವಲ ಮಾತಿನಲ್ಲಿ ಅಲ್ಲದೆ, ಕೃತಿಯಲ್ಲಿಯೂ ಮಹಾನ್ ವ್ಯಕ್ತಿಯಾಗಿದ್ದರಿಂದ ಭವ್ಯವಾದ ವಿದ್ಯಾಮಂದಿರ ಬೆಂಗಳೂರಿನಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿ ವಿದ್ಯಾಭ್ಯಾಸ ಮಾಡುವವರೆಲ್ಲರೂ ಪುಣ್ಯಶಾಲಿಗಳು ಎಂದರು. ಡಾ.ಎ.ಎಚ್. ರಾಮರಾವ್ ಅವರು ಸಂಸ್ಥೆಯನ್ನು ದಕ್ಷತೆಯಿಂದ ಎ. ನರಸಿಂಹಯ್ಯನವರ ದಾರಿಯಲ್ಲಿ ದಕ್ಷತೆಯಿಂದ ನಡೆಸುತ್ತಿದಾರೆ. ಇಡೀ ದೇಶಕ್ಕೇ ಮಾದರಿಯಾಗಿ ಈ ಸಂಸ್ಥೆ ನಿಂತಿದೆ. ಕರ್ನಾಟಕಕ್ಕೆ ಇದು ಹೆಮ್ಮೆ. ರೋಬೊಟಿಕ್ಸ್ ಮತ್ತು ಕೃತಕ ಬುದ್ದಿಮತ್ತೆಯ ಬಳಕೆ ಮಾಡುವ ಅವಕಾಶವನ್ನು ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಿದೆ ಎಂದರು.

English summary
The Karnataka government is formulating a new R&D policy said Chief Minister Basavaraja Bommai. R&D policy would come out in a month's time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X