ರಾಜಕೀಯ ಅಧಿಕಾರಕ್ಕಾಗಿ "ಮೇರೇ ಕೋ ಬನಾನೇ ವಾಲೆ" ಎನ್ನುವ ಅನಿವಾರ್ಯತೆ ನನಗಿಲ್ಲ: ವಿಪಕ್ಷ ನಾಯಕ

ಬೆಂಗಳೂರು: ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅಧಿಕಾರದ ಮೆಟ್ಟಿಲು ಹತ್ತಲು ಅಥವಾ ಸ್ಥಾನಮಾನ ಗಿಟ್ಟಿಸಿಕೊಳ್ಳಲು "ಮೇರೇ ಕೋ ಬನಾನೇ ವಾಲೆ" (ನನ್ನನ್ನು ಸೃಷ್ಟಿಸಿದವು/ಬೆಳೆಸಿದವರು) ಎಂದು ಒಂದು ಕುಟುಂಬವನ್ನು ಆಜೀವ ಪರ್ಯಂತ ಓಲೈಸುವ ಅನಿವಾರ್ಯತೆ ನನಗಿಲ್ಲ. ನಾನು RSSನಿಂದ ಬಂದವನು ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು RSS ಕುರಿತು ಕಿಡಿ ಕಾರಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿರುಗೇಟು ನೀಡಿದ್ದಾರೆ.

ಸೋಮವಾರ ಎಕ್ಸ್‌ನಲ್ಲಿ ರೊಬೋಟ್ ಸಿನಿಮಾದ ವಿಡಿಯೋ ಕ್ಲಿಪ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರ ಹೇಳಿಕೆಯ ವಿಡಿಯೋ‌ ಪೋಸ್ಟ್ ಮಾಡಿ ಕಿಡಿ ಕಾರಿದ್ದಾರೆ. ಅದರಲ್ಲಿ ಮಿ. "ಪ್ರಿಯಾಂಕಾ" ಖರ್ಗೆ ಅವರೇ, ನಾನು ಆರ್‌ಎಸ್‌ಎಸ್‌ನ ಸ್ವಯಂಸೇವಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನನ್ನ ವೈಯಕ್ತಿಕ ಬದುಕಿನಲ್ಲೂ, ಸಾರ್ವಜನಿಕ ಜೀವನದಲ್ಲೂ ಸಂಘ ಕಲಿಸಿಕೊಟ್ಟ ಸಂಸ್ಕಾರ, ಬಿತ್ತಿದ ರಾಷ್ಟ್ರಪ್ರೇಮ ಮತ್ತು ಮೈಗೂಡಿಸಿದ ವೈಚಾರಿಕತೆ ನನ್ನ ವ್ಯಕ್ತಿತ್ವದ ಮೇಲೆ ಅಳಿಸಲಾಗದ ಪ್ರಭಾವ ಬೀರಿವೆ. ಇದನ್ನು ಹೇಳಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ; ಬದಲಾಗಿ, ಅತ್ಯಂತ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

R Ashoka

ಅಷ್ಟೇ ಅಲ್ಲ, ನನ್ನ ಮಕ್ಕಳಿಗೆ ಮತ್ತೊಂದು ಕುಟುಂಬದ ಮಕ್ಕಳ ಹೆಸರಿಟ್ಟು, ಆ ಕುಟುಂಬದ ಮೇಲಿನ ನನ್ನ ನಿಷ್ಠೆಯನ್ನು ಸಾಬೀತುಪಡಿಸಿಕೊಳ್ಳುವ ಮುಲಾಜು ಕೂಡ ನನಗಿಲ್ಲ. ಸಂಘದ ಮೇಲಿನ ನನ್ನ ಅಭಿಮಾನ ನನ್ನ ವೈಚಾರಿಕ ಬದ್ಧತೆ. ನಿಮ್ಮ ರಾಜಕೀಯ ನಿಷ್ಠೆಯಂತೆ ಅದು ಅಧಿಕಾರಕ್ಕಾಗಿ ಮಾಡಿಕೊಂಡ ರಾಜಿಯಾಗಲಿ, ವ್ಯಕ್ತಿಪೂಜೆಯ ಪ್ರದರ್ಶನವಾಗಲಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ನಿಮ್ಮಂಥ ಟ್ರೋಲ್ ಗಿರಾಕಿ!

ಈ ಎರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಪ್ರಬುದ್ಧತೆ, ಮುತ್ಸದ್ದಿತನ ಮತ್ತು ಸ್ವಂತ ವ್ಯಕ್ತಿತ್ವ ಬೇಕು. ದುರದೃಷ್ಟವಶಾತ್, ನಿಮ್ಮಂಥ ಟ್ರೋಲ್ ಗಿರಾಕಿಗಳಿಂದ ಅಂಥದ್ದನ್ನು ನಿರೀಕ್ಷಿಸುವುದೇ ಅಸಾಧ್ಯ ಬಿಡಿ ಎಂದು ಟಾಂಗ್ ಕೊಟ್ಟಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಆರ್. ಅಶೋಕ್ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ತಮ್ಮನ್ನು "ಮೇರೇ ಕೋ ಬನಾನೇ ವಾಲೆ" (ನನ್ನನ್ನು ಬೆಳೆಸಿದವರು) ಶ್ರೀಮತಿ ಸೋನಿಯಾ ಗಾಂಧಿ ಅವರು ಎಂದು ಕೈ ಮಾಡಿ ಕಲಾಪದಲ್ಲಿ ಹೇಳುವ ವಿಡಿಯೋ ಹಂಚಿಕೊಂಡಿದ್ದಾರೆ. ಅಂದರೆ ಗಾಂಧಿ ಕುಟುಂಬ, ಸೋನಿಯಾ ಗಾಂಧಿ ಅವರಿಂದ ತಾವು ಎಂಬಂತೆ ಹೇಳಿದ್ದಾರೆ ಎನ್ನಲಾಗಿದೆ.

ಇದಕ್ಕೆ ನಟ ರಜನಿ ಕಾಂತ್ ಅವರ 'ರೋಬೊಟ್' ಸಿನಿಮಾದಲ್ಲಿ ವೇದಿಕೆ ಮೇಲೆ ರೋಬೋಟ್‌ಗೆ ಭಗವಾನ್ ಕುರಿತು ಪ್ರಶ್ನಿಸಲಾಗುತ್ತದೆ. ಆಗ ರೊಬೋಟ್ ತನ್ನ ಪಾಲಿಗೆ ಭಗವಂತ ತನ್ನನ್ನು ನಿರ್ಮಿಸಿದ ರಜನಿಕಾಂತ್, ಅವರೇ ಎಲ್ಲ ಎಂಬಂತೆ ಅವರತ್ತ ಕೈ ಮಾಡಿ ತೋರಿಸುವ ವಿಡಿಯೋ ಲಿಂಕ್ ಮಾಡಿ ಅದನ್ನು ಹಂಚಿಕೊಳ್ಳುವ ಮೂಲಕ ಆರ್. ಅಶೋಕ್ ತಿರುಗೇಟು ಕೊಟ್ಟಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಆರ್‌ಎಸ್‌ ಎಸ್‌ ಗೆ ಈವರೆಗೆ ಅಮೆರಿಕಾದಿಂದ ದೇಣಿಗೆ ಸಂಗ್ರಹಿಸುತ್ತದೆ. ಆ ವಿಷಯ ಆರ್.ಅಶೋಕ್ ಅವರಿಗೆ ಗೊತ್ತಿಲ್ಲದಂತೆ ಕಾಣುತ್ತದೆ. ಇದೀಗ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವ ಉದ್ದೇಶ ಸಂಘ ಹೊಂದಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್ ಮಾಡಿದ್ದರು. ಹಾಗೆಯೇ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎಂಬ ಮೋಹನ್ ಭಾಗವತ್ ಹೇಳಿಕೆ ನೆನಪಿಸಿದ್ದ ಖರ್ಗೆ, ಇದರ ಹಿಂದಿನ ಅರ್ಥ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವ ಉದ್ದೇಶವೇ?
ಪಾಕಿಸ್ತಾನದ ಬಗ್ಗೆ ಪ್ರೀತಿ ಹೊಂದಿರುವುದು ಸಂಘ ಹೊರತು ಕಾಂಗ್ರೆಸ್ ಅಲ್ಲ.. ಎಂದು ತಿವಿದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+