Pushpa 2: ಡಾ. ರಾಜ್‌ಕುಮಾರ್‌ಗೆ ಹೋಲಿಕೆ ಮಾಡಿ ಪುಷ್ಪ - 2 ಪೋಸ್ಟ್: ಕನ್ನಡಿಗರ ಆಕ್ರೋಶ!
Pushpa 2 Controversy: ಡಾ. ರಾಜ್‌ಕುಮಾರ್ ಕನ್ನಡದ ಕಣ್ಮಣಿ ಹಾಗೂ ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಖ್ಯಾತಿ ಗಳಿಸಿರುವ ಅವರ ಬಗ್ಗೆ ಕನ್ನಡಿಗರಲ್ಲಿ ಅಪಾರವಾದ ಅಭಿಮಾನವಿದೆ. ಅವರು ನಿರ್ಮಿಸಿರುವ ಹಲವು ದಾಖಲೆಗಳನ್ನು ಕನ್ನಡ ಚಿತ್ರರಂಗವಷ್ಟೇ ಅಲ್ಲ ಇಡೀ ದೇಶದ ಹಲವು ಚಿತ್ರರಂಗಗಳ ನಟರಿಂದ ಮುರಿಯಲು ಸಾಧ್ಯವಾಗಿಲ್ಲ. ಆದರೆ, ಪುಷ್ಪ ಸಿನಿಮಾ ತಂಡವು ಪುಷ್ಪ -2 ಪ್ರಮೋಷನ್ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ಅವರ ಪುಷ್ಪ - 2 (Pushpa 2: The Rule) ಸಿನಿಮಾದ ಒಂದು ಅಂಶವನ್ನು ನಟಸಾರ್ವಭೌಮ ರಾಜ್‌ಕುಮಾರ್ ಅವರೊಂದಿಗೆ ಹೋಲಿಕೆ ಮಾಡಿ ಪೋಸ್ಟ್ ಮಾಡಿದ್ದು, ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದೆ ಎಂದು ಹಲವು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ತಮಿಳು, ತೆಲುಗು ಹಾಗೂ ಹಿಂದಿಯ ಸಿನಿಮಾಗಳು ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಬಿಡುಗಡೆಯಾಗುವುದು ಹಾಗೂ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವುದು ಹೊಸ ವಿಷಯವೇನು ಅಲ್ಲ. ಪರಭಾಷೆಯ ಸಿನಿಮಾಗಳು ಬೆಂಗಳೂರಲ್ಲಿ ಬಿಡುಗಡೆಯಾಗಿ ಕನ್ನಡದ ಸಿನಿಮಾಗಳಿಗೆ ಪೈಪೋಟಿ ಕೊಡುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕನ್ನಡದ ನಟ ಹಾಗೂ ನಟಿಯರು ಸಹ ಇದರಲ್ಲಿ ನಟಿಸಿದ್ದಾರೆ.

ರಿಷಬ್ ಶೆಟ್ಟಿ ಸರಣಿ ಎರಡು ತೆಲುಗು ಸಿನಿಮಾದಲ್ಲಿ ರಾಜ್‌ಬಿ ಶೆಟ್ಟಿ ಅವರು ಮಲಯಾಳಂ ಸಿನಿಮಾರಂಗದಲ್ಲಿ ನಟಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಇನ್ನು ಉಪೇಂದ್ರ, ಸುದೀಪ್ ಹಾಗೂ ಯಶ್ ಸೇರಿದಂತೆ ಹಲವು ಕನ್ನಡ ನಟರು ಈ ವಿಷಯದಲ್ಲಿ ಈಗಾಗಲೇ ಹೊಸ ದಾಖಲೆಗಳನ್ನೇ ಸೃಷ್ಟಿಸಿದ್ದಾರೆ. ಆದರೆ, ಯಾವುದೇ ಕನ್ನಡದ ನಟ ಹಾಗೂ ಚಿತ್ರರಂಗ ಆ ಭಾಷೆಯ ಮೇರು ನಟರಿಗೆ ಹೋಲಿಕೆ ಮಾಡಿಕೊಂಡು ಪೋಸ್ಟ್ ಮಾಡಿಲ್ಲ.
ಈ ರೀತಿಯ ವಿವಾದವನ್ನು ಸೃಷ್ಟಿ ಮಾಡಿಲ್ಲ. ಆದರೆ, ಪುಷ್ಪ - 2 ಸಿನಿಮಾ ತಂಡ ಇಂತಹ ಅವಾಂತರವೊಂದಕ್ಕೆ ಕೈ ಹಾಕಿ ಕನ್ನಡಿಗರಿಂದ ಬೈಸಿಕೊಳ್ಳುತ್ತಿದೆ. ಅಲ್ಲು ಅರ್ಜುನ್ ಅವರಿಗೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. ಅವರ ನಟಿಸುವ ಸಿನಿಮಾಗಳು ಇಲ್ಲಿ ಹೌಸ್‌ಫುಲ್ ಆಗುವುದಿದೆ. ಅಲ್ಲದೇ ಪುಷ್ಪ ಸಿನಿಮಾಗೂ ಸಿಕ್ಕಾಪಟ್ಟೆ ಕ್ರೇಜ್ ಇದೆ. ಈಗಾಗಲೇ ಚಿತ್ರಮಂದಿಗಳಲ್ಲಿ ಫಿಲ್ಮ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಭಾರೀ ಸೋಷಿಯಲ್ ಮೀಡಿಯಾದಲ್ಲಂತೂ ಇದರ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಆದರೆ, ಈ ನಡುವೆಯೇ ಕನ್ನಡಿಗರನ್ನು ಕೆಣಕುವ ಪೋಸ್ಟ್ ಮಾಡಿದೆ.
ಪುಷ್ಪ ಹಾಗೂ ಪುಷ್ಪ -2 ನಲ್ಲಿ ನಟಿಯಾಗಿರುವುದು ಕನ್ನಡದ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಶ್ರೀಲೀಲಾ ಅವರು ಪುಷ್ಪ - 2 ಸಿನಿಮಾದಲ್ಲಿ ಐಟಂ ಸಾಂಗ್‌ನಲ್ಲಿ ಮಿಂಚಿದ್ದಾರೆ. ಆದರೆ, ಕನ್ನಡಿಗರೇ ಮಿಂಚಿರುವ ಸಿನಿಮಾದ ಪ್ರಮೋಷನ ವೇಳೆ ಈ ರೀತಿ ಆಗಿರುವುದು ಕನ್ನಡಿಗರಲ್ಲಿ ಬೇಸರ ಮೂಡಿಸಿದೆ.

ಪುಷ್ಪ-2 ಸಿನಿಮಾ ಪೋಸ್ಟ್ ವಿವಾದವೇನು ?
ಪುಪ್ಪ - 2 ಸಿನಿಮಾದ ಪ್ರಮೋಷನ್ ಜೋರಾಗಿದೆ. ಭಾರತದ ಅತ್ಯಂತ ದೊಡ್ಡ ಸಿನಿಮಾ (ಪುಷ್ಪ - 2) ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿದೆ. ಡಾ. ರಾಜ್‌ಕುಮಾರ್ ಅವರ ನಂತರ ಬೆಂಗಳೂರಿನ ಮೆಜೆಸ್ಟಿಕ್‌ನ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಮೊಟ್ಟ ಮೊದಲ ಸಿನಿಮಾ ಪುಷ್ಪ - 2 ಎನ್ನುವ ಪೋಸ್ಟ್ ಮಾಡಲಾಗಿದೆ.
ಕನ್ನಡಿಗರ ವಿರೋಧ: ಪುಷ್ಪ -2 ಸಿನಿಮಾದ ಪ್ರಮೋಷ ವೇಳೆ ಮಾಡಿರುವ ಈ ಪೋಸ್ಟ್‌ಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಯಾವುದೊ ತೆಲುಗು ಸಿನಿಮಾ ನಮ್ಮ ಡಾ.ರಾಜ್ ಕುಮಾರ್ ಅವರ ಸಿನಿಮಾಗೆ ಹೋಲಿಕೆ ಮಾಡಿ ಪೋಸ್ಟ್ ಹಾಕಲಾಗಿದೆ. ಕರ್ನಾಟಕದಲ್ಲಿ ನಾವು ಹೇಳಿದ್ದೆ ಎಲ್ಲಾ ಅನ್ನೋ ರೀತಿ ಕನ್ನಡಿಗರ ಸ್ವಾಭಿಮಾನ ಕೆಣಕಿರುವ ಇವರಿಗೆ ಏನು ಮಾಡಬೇಕು ಕನ್ನಡಿಗರೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ Kgf ಗಿಂತ ಜಾಸ್ತಿ ಗಳಿಕೆ ಮಾಡ್ತೀವಿ ಅನ್ನೋ ಚಾಲೆಂಜ್ ಮಾಡುವ ಮೂಲಕ ಅಲ್ಲಿ ಭಗೀರ ಚಿತ್ರಕ್ಕೆ ಶೋ ಕೊಡದೆ ಎತ್ತಂಗಡಿ ಇಲ್ಲಿ ಈ ದುರಹಂಕಾರ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಯಾವುದೊ ತೆಲುಗು ಸಿನಿಮಾ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) November 30, 2024
ನಮ್ಮ ಡಾ.ರಾಜ್ ಕುಮಾರ್ ರ ಸಿನಿಮಾಗೆ
ಹೋಲಿಸಿ ಪೋಸ್ಟ್ ಹಾಕಿ
ಕರ್ನಾಟಕದಲ್ಲಿ ನಾವು ಹೇಳಿದ್ದೆ ಎಲ್ಲಾ ಅನ್ನೋ ರೀತಿ ಕನ್ನಡಿಗರ ಸ್ವಾಭಿಮಾನ ಕೆಣಕಿರೋ ಇವರಿಗೆ ಏನು ಮಾಡಬೇಕು ಕನ್ನಡಿಗರೇ?
Kgf ಗಿಂತ ಜಾಸ್ತಿ ಗಳಿಕೆ ಮಾಡ್ತೀವಿ ಅನ್ನೋ ಚಾಲೆಂಜ್
ಅಲ್ಲಿ ಭಗೀರ ಚಿತ್ರಕ್ಕೆ ಶೋ ಕೊಡದೆ ಎತ್ತಂಗಡಿ
ಇಲ್ಲಿ ಈ ದುರಹಂಕಾರ.😡 pic.twitter.com/COX6oyuYvC
ಪೋಸ್ಟ್ ಡಿಲೀಟ್ ಆದರೆ ವೈರಲ್
ಕರ್ನಾಟಕದಲ್ಲಿ ಪುಪ್ಪ -2 ಸಿನಿಮಾದ ಪೋಸ್ಟ್‌ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಆದರೆ, ಈ ಪೋಸ್ಟ್ ಡಿಲೀಟ್ ಆದರೂ ಇದರ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದ್ದು. ಕರ್ನಾಟಕದಲ್ಲಿ ಕನ್ನಡ ಹಾಗೂ ಕನ್ನಡಿಗರೇ ಸಾರ್ವಭೌಮ ಎಂದು ಕನ್ನಡಿಗರು ಪೋಸ್ಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications