ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಶಾಲೆಯಿಂದ ಕಾಣೆಯಾಗಿದ್ದ ಅಪ್ರಾಪ್ತೆಯರು ಪತ್ತೆ: ಬಾಲಕಿಯರ ರೋಚಕ ಜರ್ನಿ- ಲವ್ ಕಹಾನಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಒಂದೇ ಶಾಲೆಯ ಮೂವರು ಬಾಲಕಿಯರು ಕಾಣೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. 20 ದಿನದ ಬಳಿಕ ಕೊನೆಗೂ ಪುಲಕೇಶಿನಗರ ಪೊಲೀಸರು ತಮಿಳುನಾಡಿನ ಚೆನ್ನೈನಲ್ಲಿ ಪತ್ತೆಹಚ್ಚಿ ಬಾಲಕಿಯರನ್ನು ನಗರಕ್ಕೆ ಕರೆತಂದಿದ್ದಾರೆ. ಬಾಲಕಿಯರ ರೋಚಕ ಪ್ರಯಾಣ ಮತ್ತು ಪ್ರೇಮಕತೆಯ ವಿವರ ಇಲ್ಲಿದೆ.

ತಮಿಳುನಾಡಿಗೆ ತೆರಳಿದ್ದ ಮೂವರು ಬಾಲಕಿಯರ ಪೈಕಿ ಇಬ್ಬರು‌ ಪ್ರೀತಿಸಿ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದರು ಎಂಬ ವಿಚಾರ ಗೊತ್ತಾಗಿದೆ. ಪುಲಕೇಶಿನಗರ‌ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಮೂವರು ವಿದ್ಯಾರ್ಥಿಯರು ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಶಾಲಾ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರೆ ಮತ್ತೋರ್ವ ಬಾಲಕಿ ಮನೆಯಿಂದಲೇ ಶಾಲೆಗೆ ತೆರಳುತ್ತಿದ್ದರು. 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ತಂದೆ-ತಾಯಿ ಇರಲಿಲ್ಲ.

ಇನ್ನು 9 ನೇ ತರಗತಿ ಓದುತ್ತಿದ್ದ ಮತ್ತೋರ್ವ ಬಾಲಕಿಗೆ ತಾಯಿ ಇರಲಿಲ್ಲ. ಇಬ್ಬರು ಸಹ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರು‌. ಇಬ್ಬರು ನಡುವೆ ಕಾಲಕ್ರಮೇಣ ಪ್ರೀತಿ ಮೊಳಕೆ ಹೊಡೆದಿತ್ತು. ಕಾಣೆಯಾಗಿದ್ದ ಮೂರನೇ ಬಾಲಕಿಗೆ ಓದುವ ವಿಷಯವಾಗಿ ಪೋಷಕರು ಬೈದು ಬೈದಿದ್ದರು‌‌. ಮೂವರು ಬಾಲಕಿಯರು ಮಾತನಾಡಿಕೊಂಡು ಊರು ಬಿಡಲು ನಿರ್ಧರಿಸಿದ್ದರು. ಒಂದೇ ಶಾಲೆಯಲ್ಲಿ ಓದುತ್ತಿದ್ದ ಮೂವರು ಬಾಲಕಿಯರ ಕಣ್ಮರೆ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ತಮಿಳುನಾಡಿನಲ್ಲಿ ಬಾಲಕಿಯರು ಸಿಕ್ಕಿದ್ದು ಮರಳಿ ಗೂಡಿಗೆ ಸೇರಿದ್ದಾರೆ.

ಗೆಳತಿಯರಿಂದ 21 ಸಾವಿರ ಸಂಗ್ರಹಿ

ಗೆಳತಿಯರಿಂದ 21 ಸಾವಿರ ಸಂಗ್ರಹಿ

ಅಪ್ರಾಪ್ತ ಬಾಲಕಿಯರು ಮನೆ ಬಿಡಲು ತೀರ್ಮಾನವನ್ನು ಮಾಡಿದ್ದರು. ಮನೆಯಲ್ಲಿ ಕಷ್ಟವಿದೆ ಎಂದು ಸ್ನೇಹಿತೆಯರು ಹಾಗೂ‌ ಪರಿಚಯಸ್ಥರಿಂದ ಸುಮಾರು 21 ಸಾವಿರ ರೂಪಾಯಿ ಹಣ ಸಂಗ್ರಹಿಸಿದ್ದರು. ವ್ಯವಸ್ಥಿತ ಸಂಚಿನಂತೆ ಇದೇ ತಿಂಗಳು 6ರಂದು ಮಧ್ಯಾಹ್ನ ಹಾಸ್ಟೆಲ್ ವಾರ್ಡನ್ ಹಾಗೂ ಸೆಕ್ಯೂರಿಟಿ ಕಣ್ತಪ್ಪಿಸಿ ಲಗೇಜ್ ಸಮೇತ ತೊರೆದಿದ್ದರು. ಮಾರ್ಗ ಮಧ್ಯೆ ಮತ್ತೋರ್ವ ಬಾಲಕಿ ಕೂಡಿಕೊಂಡು ಆಟೋ ಮೂಲಕ ಸೇವಾನಗರಕ್ಕೆ ತೆರಳಿದ್ದರು. ಅಂಗಡಿಯಲ್ಲಿ ಬಟ್ಟೆ ಖರೀದಿಸಿ ಕಂಟ್ಮೋನೆಂಟ್ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ವೇಲಾಂಗಣಿ ತೆರಳಲು ತೀರ್ಮಾನಿಸಿದ್ದ ಬಾಲಕಿಯರು ಗೊತ್ತಿಲ್ಲದೆ ಚೆನ್ನೈ ರೈಲು ಹತ್ತಿ ಸೆ.7ರಂದು ಇಳಿದಿದ್ದಾರೆ.

ಬೆಂಗಳೂರಿಗೆ ರೈಲು ಹತ್ತಿಸಿದ ಚನ್ನೈ ಪೊಲೀಸರು

ಬೆಂಗಳೂರಿಗೆ ರೈಲು ಹತ್ತಿಸಿದ ಚನ್ನೈ ಪೊಲೀಸರು

ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಸಂಜೆವರೆಗೂ ಕಾಲ ಕಳೆದಿದ್ದಾರೆ. ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಬಾಲಕಿಯರನ್ನು ಕಂಡ ರೈಲ್ವೇ‌‌ ಪೊಲೀಸರು‌ ಪ್ರಶ್ನಿಸಿದ್ದಾರೆ. ವಿಚಾರ ತಿಳಿದುಕೊಂಡು ಮತ್ತೆ ಬೆಂಗಳೂರು ರೈಲಿಗೆ ಹತ್ತಿಸಿದ್ದಾರೆ.
ಮತ್ತೊಂದೆಡೆ ಮಕ್ಕಳು ಕಾಣೆಯಾಗಿರುವುದಾಗಿ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್ ಕಿರಣ್ ನೇತೃತ್ವದ ತಂಡ ವೇಲಾಂಗಣಿ ತೆರಳಿ ಶೋಧ ನಡೆಸುತಿತ್ತು‌‌. ರೈಲಿನಲ್ಲಿ ಕಂಟ್ಮೋನೆಂಟ್ ರೈಲು ನಿಲ್ದಾಣಕ್ಕೆ ಬಂದ ಬಾಲಕಿಯರು ಪೊಲೀಸರು ಕಾಣೆಯಾಗಿರುವ ತಮ್ಮ ಭಾವಚಿತ್ರಗಳನ್ನು ಅಂಟಿಸಿದ್ದ ಪ್ರಕಟಣೆ ಗಮನಿಸಿದ್ದಾರೆ.‌ ಇದರಿಂದ ಅಲರ್ಟ್ ಆದ ಬಾಲಕಿಯರು ಮತ್ತೆ ಚೆನ್ನೈ ತೆರಳಲು ನಿರ್ಧರಿಸಿ ಗೊತ್ತಿಲ್ಲದೆ ದೆಹಲಿ ರೈಲಿಗೆ ಹತ್ತಿದ್ದಾರೆ. ಮಾರ್ಗಮಧ್ಯೆ ಮಾರ್ಗ ಬದಲಾಯಿಸಿ ಹೇಗೋ ಚೆನ್ನೈ ಸೇರಿದ್ದಾರೆ.

ಬಾಲಕಿಯೊಬ್ಬಲು ನೌಕರಿಗೆ ಸೇರಿದ್ದಳು

ಬಾಲಕಿಯೊಬ್ಬಲು ನೌಕರಿಗೆ ಸೇರಿದ್ದಳು

ಚೆನ್ನೈನಲ್ಲಿ ಬಾಲಕಿಯರು ಆಟೋ ಚಾಲಕನ ಬಳಿ ಹೋಗಿ ನಾವು ಅನಾಥೆಯರು. ಹಾಸ್ಟೆಲ್‌ನಲ್ಲಿ ನಮಗೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ತಮಿಳಿನಲ್ಲಿ ಮಾತನಾಡಿದ್ದಾರೆ.‌ ನಿಜವೆಂದು ಆಟೋ ಚಾಲಕ ತಮ್ಮ ಮನೆ ಹತ್ತಿರ ಮನೆ ಮಾಡಿಕೊಟ್ಟಿದ್ದಾನೆ. ಇದಕ್ಕೂ ಮುನ್ನ‌ ತೆಗೆದುಕೊಂಡು ಬಂದಿದ್ದ 20 ಸಾವಿರ ಹಣವನ್ನು ಕಳೆದುಕೊಂಡಿದ್ದರು. ಉಳಿದ ಅಲ್ಪ ಸ್ವಲ್ಪ ಹಣದಲ್ಲೇ ಮೊಬೈಲ್ ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಣೆಯಾಗಿ ಕಳೆದ 20 ದಿನ ಕಳೆದರೂ ಬಾಲಕಿಯರು ಇರುವಿಕೆ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ‌. ಈ‌ ನಡುವೆ ಪೈಕಿ ಓರ್ವ ಬಾಲಕಿಯು ಕೆಲಸಕ್ಕೆ ಹೋಗುತ್ತಿದ್ದರು. ಮತ್ತೊರ್ವ ಬಾಲಕಿಯು ಹುಡುಗನ ರೀತಿಯಲ್ಲಿ ಓಡಾಡುತ್ತಿದ್ದಳು. ಮುಂದೆ ಮದುವೆಯಾಗಲು ಇಬ್ಬರು ಬಾಲಕಿಯರು ಸಿದ್ದತೆ ನಡೆಸಿಕೊಂಡಿದ್ದರು. ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

ಅಪ್ಪನಿಗೆ ಕೊಟ್ಟ ಮಿಸ್ಡ್ ಕಾಲ್‌ ಸುಳಿವು

ಅಪ್ಪನಿಗೆ ಕೊಟ್ಟ ಮಿಸ್ಡ್ ಕಾಲ್‌ ಸುಳಿವು

ಬಾಲಕಿಯರು ಯಾರಿಗಾದರು ಪೋನ್ ಮಾಡಬೇಕಾದರೆ ಸ್ಥಳೀಯ ಕಾಯಿನ್ ಬೂತ್ ನಿಂದ ಕರೆ ಮಾಡಿ ಮಾತನಾಡುತ್ತಿದ್ದರು. ಸತತವಾಗಿ‌ ಶೋಧ ನಡೆಸಿದರೂ ಬಾಲಕಿಯರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಖರೀದಿಸಿದ್ದ ಹೊಸ ಮೊಬೈಲ್ ನಲ್ಲಿ ತಂದೆಗೆ ಬಾಲಕಿಯು ಮಿಸ್ ಕಾಲ್ ಕೊಟ್ಟಿದ್ದರು. ಮತ್ತೆ ಕರೆ ಮಾಡಿದರೂ ಮಾತನಾಡಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದರು‌. ಕೂಡಲೇ ಕಾರ್ಯಪ್ರವೃತ್ತರಾಗಿ ಚೆನ್ನೈಗೆ ತೆರಳಿ ಬಾಲಕಿಯರನ್ನು ಪತ್ತೆ ಹಚ್ಚಿ ನಗರಕ್ಕೆ‌ ಕರೆತಂದಿದ್ದಾರೆ. ಬಾಲಕಿಯ ಪೋಷಕರು ಹೈಕೋರ್ಟ್ ಗೆ ಹೇಬಿಯಸ್ ಅರ್ಜಿ ಹಾಕಿದ್ದರ ಹಿನ್ನೆಲೆಯಲ್ಲಿ ವಿಚಾರಣೆ ಮುಗಿಸಿ ಇಂದು ಮೂವರನ್ನು ಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ಪೊಲೀಸ್‌ ಮೂಲಗಳಿಂದ ತಳಿದುಬಂದಿದೆ.

English summary
Three girls from the same school were missing and there was a cause for concern. After 20 days, the Pulakeshinagar police finally found them in Chennai, Tamil Nadu and brought the girls to the city. Here is the details of the girls' exciting journey and love story, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X