BMTC: ಬಸ್‌ನಲ್ಲಿ QR ಕೋಡ್ ವ್ಯವಸ್ಥೆಗೆ ಭರ್ಜರಿ ರೆಸ್ಪಾನ್ಸ್: ಕೋಟಿ ಕೋಟಿ ಆದಾಯ, ಅಂಕಿ-ಸಂಖ್ಯೆ
ಬೆಂಗಳೂರು, ಫೆಬ್ರವರಿ 19: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲ ಬಸ್ ನಿಗಮಗಳ ವ್ಯಾಪ್ತಿಯಲ್ಲಿ QR ಕೋಡ್ ವ್ಯವಸ್ಥೆ ಜಾರಿ ಮಾಡಿತ್ತು. ಡಿಜಿಟಲ್ ಪೇಮೆಂಟ್ ಸಿಸ್ಟಂ ಮೂಲಕ ಹಣ ಪಾವತಿಸುವ ವಿಧಾನ ಬಸ್‌ಗಳಲ್ಲಿ ಜಾರಿ ಬಂತು. ಸಾರಿಗೆ ಎಲ್ಲ ನಿಗಮದ ಬಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಆ ಪೈಕಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದರಿಂದ ಕೋಟಿ ಕೋಟಿ ಆದಾಯ ನಿಗಮಕ್ಕೆ ಬರುತ್ತಿದೆ.
ಹೌದು, ಬಿಎಂಟಿಸಿ ಬಸ್‌ಗಳಲ್ಲಿ ಕೋವಿಡ್ ನಂತರ ಈ ಕ್ಯೂಆರ್ ಕೋಡ್ ವ್ಯವಸ್ಥೆ ಪರಿಚಯಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ವ್ಯವಸ್ಥೆ ಬಳಸುವ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ. ಇತ್ತೀಚಿನ ದಿನಗಳಲ್ಲಿ ನಿತ್ಯ 01 ಕೋಟಿ ರೂಪಾಯಿ ಗಳಿಕೆ ಆಗುತ್ತಿದೆ. ಪ್ರಯಾಣಿಕರು ಚಿಲ್ಲರೆ ಸಮಸ್ಯೆಯ ಕಿರಿ ಕಿರಿ ತಪ್ಪಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ UPI, QR ಕೋಡ್ ಆಧಾರಿತ ಡಿಜಿಟಲ್ ಹಣ ಪಾವತಿಯನ್ನೆ ಅವಲಂಬಿಸಿದ್ದಾರೆ.

ರೂ.16 ಕೋಟಿ ರೂಪಾಯಿ ಆದಾಯ
ಇದೇ ಫೆಬ್ರವರಿ 1ರಿಂದ 16ರ ತನಕ ನಿತ್ಯ ಒಂದು ಕೋಟಿ ರೂಪಾಯಿಯಂತೆ 16 ಕೋಟಿ ರೂಪಾಯಿ ಆದಾಯ ಗಳಿಕೆ ಆಗುತ್ತಿದೆ. ಕಳೆದ ವರ್ಷ 2024ರಲ್ಲಿ ಈ ಡಿಜಿಟಲ್ ಪೇಮೆಂಟ್ ನಿಂದಲೇ ಬಿಎಂಟಿಸಿ ನಿಗಮಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಸಂಗ್ರಹವಾಗಿದೆ. ಎಲ್ಲ ಸರ್ಕಾರಿ ಬಸ್‌ಗಳಲ್ಲಿ ಹಂತ ಹಂತವಾಗಿ ಬಳಕೆ ಹೆಚ್ಚಿಸಿಕೊಂಡ ಈ ವ್ಯವಸ್ಥೆಯು ಆದಾಯ ಗಳಿಕೆಯಲ್ಲಿ, ಚಿಲ್ಲರೆ ಸಮಸ್ಯೆ, ಜಗಳ ತಪ್ಪಿಸುವಲ್ಲಿ ಪರಿಣಾಮಕಾರಿ ಉಪಕ್ರಮ ಎನ್ನಬಹುದು.
ಬಸ್ ದರ ಏರಿಕೆ ಬಳಿಕ ಕ್ಯೂಆರ್ ಕೋಡ್ ಬಳಕೆ ಹೆಚ್ಚಳ
ರಾಜ್ಯ ಸಾರಿಗೆ ಇಲಾಖೆಯು ಕಳೆದ ತಿಂಗಳು ಜನವರಿ 5ರಂದು ಎಲ್ಲ ಬಸ್‌ಗಳ ದರವನ್ನು ಶೇಕಡಾ 15ರಷ್ಟು ಏರಿಕೆ ಮಾಡಿತು. ಅದಾದಾಗಿನಿಂದ ಬಸ್‌ಗಳಲ್ಲಿ ಓಡಾಡುವ ಪ್ರಯಾಣಿಕರು ಈ ಕ್ಯೂಆರ್ ಕೋಡ್ ಬಳಸಿಯೇ ಟಿಕೆಟ್ ಶುಲ್ಕ ಪಾವತಿಸುತ್ತಿದ್ದಾರೆ. ಈ ಮೂಲಕ ಚಿಲ್ಲರೆ ಸಮಸ್ಯೆಯ ಗೊಡವೆಯೇ ತಪ್ಪಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ನಿಗಮಕ್ಕೆ ಅನುಕೂಲವಾಗಿದ್ದು, ನಿರ್ವಾಹಕರಿಗೆ ಸಂಭವನೀಯ ಚಿಲ್ಲರೆ ತಲೆ ಬಿಸಿ ತಪ್ಪಿಸಿದೆ.
ಇದರಿಂದಲೇ ಶೇಕಡಾ 35ರಷ್ಟು ಆದಾಯ
ವಾರ್ಷಿಕ ಒಟ್ಟು ಆದಾಯವೆಂದು ಪರಿಗಣಿಸಿದರೆ ಅದರಲ್ಲಿ ಶೇಕಡಾ 35ರಷ್ಟು ಆದಾಯ ಈ ಕ್ಯೂ ಆರ್ ಕೋಡ್‌ನಿಂದಲೇ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳು ಇವೆ.
ಸದ್ಯ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ನಂತರ ಬಿಎಂಟಿಸಿ ಬಸ್ ಹತ್ತುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯ 37 ಲಕ್ಷ ಜನ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರೆ, ಕಳೆದೊಂದು ವಾರದಲ್ಲಿ ನಿತ್ಯ ಸರಾಸರಿ ಒಂದು ಲಕ್ಷದಷ್ಟು ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಇದಲ್ಲದೇ ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ, ಕೆ.ಆರ್.ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಹೊಸ ಪ್ಲೀಟ್ ಬಸ್ ಬಿಡುಗಡೆ ಮಾಡಲಾಗುತ್ತಿದೆ.
ಇದರೊಂದಿಗೆ ನಮ್ಮ ಮೆಟ್ರೋ ಫಿಡರ್ ಬಸ್‌ಗಳನ್ನು ಬಿಎಂಟಿಸಿ ಬಿಡುಗಡೆ ಮಾಡುತ್ತಿದೆ. ಹೊಸ ಮಾರ್ಗಗಳಲ್ಲಿ ಬಸ್ ಸೇವೆ ಲಭ್ಯವಾಗಿದೆ.












Click it and Unblock the Notifications