• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹ್ಯಾಟ್ರಿಕ್ ಜಯ ದಾಖಲಿಸಿದ ಪಿಸಿ ಮೋಹನ್ ರೈಲ್ವೆ ಸಚಿವರಾಗಲಿ!

|

ಕರ್ನಾಟಕದಲ್ಲಿ ಅಭೂತಪೂರ್ವ ಜಯ ದಾಖಲಿಸಿದ ಭಾರತೀಯ ಜನತಾ ಪಕ್ಷದ ನಾಯಕರಿಗೆ ಬಿಜೆಪಿ ಹೈಕಮಾಂಡ್ ನಿಂದ ಈ ಬಾರಿ ಭರ್ಜರಿ ಉಡುಗೊರೆ ಕಾದಿದೆ ಎಂಬ ಮಾತುಗಳು ಕೇಳಿ ಬಂದಿದೆ. ಕೇಂದ್ರದಿಂದ ಪುನಃ ರಾಜ್ಯಕ್ಕೆ ಮರಳಿದ ಬಿಎಸ್ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಳ್ಳುವುದರಿಂದ ಹಿಡಿದು ಅನೇಕ ಬದಲಾವಣೆಗಳು ಕರ್ನಾಟಕ ಬಿಜೆಪಿಯಲ್ಲಿ ಕಾಣಬಹುದು.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಈ ನಡುವೆ ರಾಜ್ಯದ ಸಂಸದರ ಪೈಕಿ ಮೂರು ಬಾರಿ, ನಾಲ್ಕು ಬಾರಿ ಗೆಲುವು ಸಾಧಿಸಿದವರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಶುರುವಾಗಲಿದೆ.

ಕೆಜೆ ಜಾರ್ಜ್ ರಿಂದ ಸಬ್ ಅರ್ಬನ್ ರೈಲಿಗೆ ಚಾಲನೆ

ಈ ನಿಟ್ಟಿನಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಸಾಧಿಸಿದ ಪಿಸಿ ಮೋಹನ್ ಅವರಿಗೆ ಕೇಂದ್ರ ರೈಲ್ವೆ ಸಚಿವ ಸ್ಥಾನ ನೀಡುವಂತೆ ಕ್ಷೇತ್ರ ಜನತೆ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಅಭಿಯಾನ ಆರಂಭಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ಬೆಂಗಳೂರಿಗೆ ಪೂರ್ಣಪ್ರಮಾಣದಲ್ಲಿ ಸಬ್ ಅರ್ಬನ್ ರೈಲು ತರಲು ಪಿಸಿ ಮೋಹನ್ ಅವರಿಂದ ಸಾಧ್ಯ. ಈ ಹಿಂದೆ ಅನಂತ್ ಕುಮಾರ್ ಅವರ ಜತೆಗೂಡಿ ಪಿಸಿ ಮೋಹನ್ ಅವರು ಈ ಬಗ್ಗೆ ದನಿಯೆತ್ತಿದ್ದರು. ಈಗ ಕ್ಷೇತ್ರಕ್ಕೆ ಹಾಗೂ ಇಡೀ ಬೆಂಗ್ಳೂರಿಗೆ ಇದ್ರಿಂದ ಅನುಕೂಲವಾಗಲಿದೆ ಎಂದು ಅಭಿಯಾನದ ಮೂಲಕ ಕೋರಲಾಗಿದೆ.

ಬೆಂಗಳೂರಿನ ಹೊರವಲಯಕ್ಕೂ ಅನುಕೂಲಕರ

ಬೆಂಗಳೂರಿನ ಹೊರವಲಯಕ್ಕೂ ಅನುಕೂಲಕರ

ಮುಖ್ಯವಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಸಬ್ ಅರ್ಬನ್ ರೈಲು ಅಗತ್ಯವಿದ್ದು, ಹೊರವರ್ತುಲ ರಸ್ತೆಗಳಲ್ಲಿರುವ ಪ್ರಮುಖ ಬಡಾವಣೆಗಳಿಗೂ ನಗರದ ಒಳ ವಲಯಕ್ಕೂ ಸಂಪರ್ಕ ಒದಗಿಸಲು ಇದು ಅವಶ್ಯಕ

ಬೆಂಗಳೂರಿನ ನಗರವ್ಯಾಪ್ತಿಯ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಒದಗಿಸಲು ಮೆಟ್ರೋ ರೈಲಿನ ವಿವಿಧ ಹಂತಗಳಿವೆ. ಆದರೆ, ಬೆಂಗಳೂರು ಸುತ್ತಲಿನ 50 ಕಿ.ಮೀ.ಗೂ ಅಧಿಕ ವ್ಯಾಪ್ತಿಯಲ್ಲಿರುವ ಉಪ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಅಗತ್ಯವಿದೆ. ಹೀಗಾಗಿ ಸಬ್ ಅರ್ಬನ್ (ಕಮ್ಯೂಟರ್) ರೈಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ, ಪ್ರಸ್ತುತ ಯೋಜನೆಯಂತೆ ಮಂಡ್ಯ, ತುಮಕೂರಿಗೂ ರೈಲು ಸಂಪರ್ಕ ಸಿಗಲಿದೆ.

ನಾಗರೀಕ ಸಮಿತಿಯಿಂದ ನಿರಂತರ ಒತ್ತಾಯ

ನಾಗರೀಕ ಸಮಿತಿಯಿಂದ ನಿರಂತರ ಒತ್ತಾಯ

ವಿಜಯನಗರದಿಂದ ವೈಟ್ ಫೀಲ್ಡ್ ನಿಂದ ಬಿಎಂಟಿಸಿ ಮೂಲಕ ಹೋಗುವುದಕ್ಕಿಂತ ರೈಲಿನಲ್ಲಿ 35 ನಿಮಿಷಗಳ ನಗರ ರೈಲ್ವೆ ನಿಲ್ದಾಣದಿಂದ ವೈಟ್ ಫೀಲ್ಡ್ ಗೆ ಕ್ರಮಿಸಬಹುದು. ಸರಿ ಸುಮಾರು 25,000ಕ್ಕೂ ಅಧಿಕ ಮಂದಿ ಲೋಕಲ್ ರೈಲು ಬಳಕೆದಾರರಂತೆ ಗುರುತಿಸಿಕೊಂಡಿದ್ದಾರೆ. ಈ ವ್ಯವಸ್ಥೆಯಲ್ಲಿ ಸಬ್ ಅರ್ಬನ್ ರೈಲು ಪರಿಚಯಿಸಿದರೆ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ನಾಗರಿಕ ಸಮಿತಿಯ ಮಹೇಶ್ ಎಂ ವಿವರಿಸಿದ್ದಾರೆ.

ಎಲ್ಲಾ ಸರ್ಕಾರಗಳಿಂದಲೂ ಯೋಜನೆ ಬಗ್ಗೆ ತಾತ್ಸಾರ

ಎಲ್ಲಾ ಸರ್ಕಾರಗಳಿಂದಲೂ ಯೋಜನೆ ಬಗ್ಗೆ ತಾತ್ಸಾರ

ಬೆಂಗಳೂರಿನಲ್ಲಿನ ರೈಲು ನಿಲ್ದಾಣಗಳ ಮೂಲಕ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಒಟ್ಟು 204 ಕಿ.ಮೀ. ಉದ್ದದ 15 ಮಾರ್ಗಗಳು ಇದರಲ್ಲಿ ಬರಲಿವೆ. ಯೋಜನೆಯ ವೆಚ್ಚ 8.5 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.ರಾಜ್ಯ ಭೂ ಸಾರಿಗೆ ನಿರ್ದೇಶನಾಲಯದ ಪ್ರಸ್ತಾವನೆಯಂತೆ ಯೋಜನೆಗೆ ರಾಜ್ಯ ಸರ್ಕಾರ 2013ರಲ್ಲೇ ಅನುಮೋದನೆ ನೀಡಲಾಗಿದೆ.ಆದರೆ, ಯೋಜನೆ ಮಂಜೂರಾತಿ ಮಾಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

ನಗರದ ವಾಹನ ದಟ್ಟಣೆಗೆ ಪರಿಹಾರ

ಬೆಂಗಳೂರು ನಗರದ ವಾಹನ ದಟ್ಟಣೆಯನ್ನು ಸಬ್ ಅರ್ಬನ್ ರೈಲಿನ ಮೂಲಕ ಪರಿಹರಿಸಬಹುದು. ಸಬ್ ಅರ್ಬನ್ ರೈಲಿಗೆ ಎಲಿವೇಟೆಡ್ ರೈಲ್ವೇ ಸಂಪರ್ಕ ಜಾಲವನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿಯ ಹಣ ಉಳಿತಾಯವಾಗಲಿದೆ. ಜತೆಗೆ ಸಮಯವೂ ಉಳಿತಾಯವಾಗಲಿದೆ. ಸಬ್ ಅರ್ಬನ್ ರೈಲ್ವೇಯ 160ಕಿಲೋಮೀಟರ್ ಗಳಲ್ಲಿ 68 ಕಿಲೋಮೀಟರ್ ನ್ನು ಎಲೆವೇಟೆಡ್ ಮಾಡಲು ನಿರ್ಧರಿಸಲಾಗಿದೆ. ಸಬ್ ಅರ್ಬನ್ ರೈಲಿನಲ್ಲಿ ಪ್ರತಿದಿನ 25-30 ಲಕ್ಷ ಜನರು ಪ್ರಯಾಣಿಸಬಹುದಾಗಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಪಿಸಿ ಮೋಹನ್ ಗೆ ಶುಭಹಾರೈಸಿದ ನಾಗರಿಕರು

ಪಿಸಿ ಮೋಹನ್ ಗೆ ಶುಭಹಾರೈಸಿದ ನಾಗರಿಕರು, ಬಹುಕಾಲದ ಬೇಡಿಕೆಗಳತ್ತ ಗಮನ ಹರಿಸುವಂತೆ ಕೇಳಿಕೊಂಡಿದ್ದಾರೆ.

English summary
Bangalore Central Lok Sabha Constituency voters blessed PC Mohan does Hat trick victory. Now, public demand Modi to give him Union Railway Minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X