ಪಿಎಸ್‌ಐ ಅಕ್ರಮ: ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಮೇ 05: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆೆ ಸಂಬಂಧಿಸಿದಂತೆ ಕಾಂಗ್ರೆಸ್ ಸಚಿವ ಡಾ.ಅಶ್ವಥ್ ನಾರಾಯಣ್ ವಿರುದ್ದ ರಣಕಹಳೆ ಮೊಳಗಿಸಿದೆ. ಸಚಿವ ಅಶ್ವಥ್ ನಾರಾಯಣ ವಿರುದ್ದ ಕ್ರಮ ಕೈಗೊಳ್ಳುವಂತೆ ಮಲ್ಲೇಶ್ವರಂ ಆಟದ ಮೈದಾನ ಶಾಸಕರ ಕಚೇರಿಯವೆರೆಗೆ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಈ ವೇಳೆ ಪ್ರತಿಭಟನಾ ರ್ಯಾಲಿ ಹೊರಡುತ್ತಿದ್ದಂತೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿ

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿ

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಚಿವರ ಸಹೋದರ ಸತೀಶ್ ಎಂಬುವವರು ಭಾಗಿಯಾಗಿದ್ದಾರೆ. ಸಚಿವ ಅಶ್ವಥ್ ನಾರಾಯಣರವರು ಪರೋಕ್ಷವಾಗಿ ಪಿಎಸ್‌ಐ ನೇಮಕಾತಿಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಇದರಿಂದಾಗಿ ಅಶ್ವಥ್ ನಾರಾಯಣ್ ವಿರುದ್ದವಾಗಿ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ನೂರರ ಕಾರ್ಯಕರ್ತರು ಮಲ್ಲೇಶ್ವರಂನ ಆಟದ ಮೈದಾನದಲ್ಲಿ ಪ್ರತಿಭಟನೆಯನ್ನು ನಡೆಸಿದರು ಆ ಬಳಿಕ ಮಲ್ಲೇಶ್ವರಂ ನಲ್ಲಿರುವ ಡಾ. ಅಶ್ವಥ್ ನಾರಾಯಣರವರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರಂ ಆಟದ ಮೈದಾನದಿಂದ ಹೊರ ಬರ್ತಿದ್ದಂತೆ. ಕಾಂಗ್ರೆಸ್ ಕಾರ್ಯರ್ತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರ ಜೊತೆಗೂ ಮಾತಿನ ಚಕಮಕಿ ಜೋರಾಗಿ ನಡೆಯಿತು. ಆ ಬಳಿಕ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು.

ಸಚಿವ ಸ್ಥಾನದಿಂದ ಕೈ ಬಿಡುವಂತೆ ಆಗ್ರಹ

ಸಚಿವ ಸ್ಥಾನದಿಂದ ಕೈ ಬಿಡುವಂತೆ ಆಗ್ರಹ

ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವರಾಗಿರು ಡಾ. ಅಶ್ವಥ್ ನಾರಾಯಣ ಅವರ ಸಹೋದರನನ್ನು ಸಿಐಡಿ ಅಧಿಕಾರಿಗಳು ಕರೆೆಸಿಕೊಂಡಿದ್ದರು. ಸಚಿವರು ತಮ್ಮ ಪ್ರಭಾವವನನ್ನು ಬಳಸಿ ಮಾಗಡಿ ಮೂಲದ ಅಭ್ಯರ್ಥಿಯನ್ನು ಬಿಡಿಸಿದ್ದಾರೆ ಆ ಮೂಲಕ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಡಾ. ಅಶ್ವಥ್ ನಾರಾಯಣ್ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

ಡಿಕೆಶಿ ವರ್ಸಸ್ ಅಶ್ವಥ್ ನಾರಾಯಣ್

ಡಿಕೆಶಿ ವರ್ಸಸ್ ಅಶ್ವಥ್ ನಾರಾಯಣ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಚಿವ ಡಾ. ಅಶ್ವಥ್ ನಾರಾಯಣ ನಡುವೆ ಜಂಗೀಕುಸ್ತಿ ಜೋರಾಗಿಯೇ ನಡೆಯುತ್ತಿದೆ. ರಾಮನಗರದ ಕಾರ್ಯಕ್ರಮದಲ್ಲಿ ಡಿಕೆ ಸುರೇಶ್ ಮತ್ತು ಅಶ್ವಥ್ ನಾರಾಯಣ ನಡುವೆ ವಾಗ್ಯುದ್ಧವೇ ನಡೆದಿತ್ತು. ಸಿಎಂ ಎದುರೇ ಗಂಡಸ್ತನ ಸವಾಲನ್ನು ಎಸೆದುಕೊಂಡಿದ್ದರು. ಆಗ ಡಿಕೆ ಶಿವಕುಮಾರ್ ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಸಮರ ಏರ್ಪಟ್ಟಿತ್ತು. ಆಗಿನಿಂದಲೇ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅಶ್ವಥ್ ನಾರಾಯಣ್ ಮತ್ತು ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯತ್ತಿತ್ತು.

ಅಶ್ವಥ್ ನಾರಾಯಣ ರವರ ಸಹೋದರ

ಅಶ್ವಥ್ ನಾರಾಯಣ ರವರ ಸಹೋದರ

ಪಿಎಸ್ ಐ ಅಕ್ರಮಕ್ಕೆ ಸಂಬಂಧಿಸಿದಂತೆ ಡಾ. ಅಶ್ವಥ್ ನಾರಾಯಣ ರವರ ಸಹೋದರ ಸತೀಶ್ ಹೆಸರು ಕೇಳಿಬಂದಿತ್ತು. ಆ ಬಳಿಕ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಅಭ್ಯರ್ಥಿಯಿಂದ 80 ಲಕ್ಷ ಹಣವನ್ನು ಪಡೆದಿದ್ದಾರೆ ಎಂಬ ಆರೋಪದ ಜೊತೆಗೆ ದರ್ಶನ್ ಗೌಡ ಎಂಬ ಅಭ್ಯರ್ಥಿಯನ್ನು ವಿಚಾರಣೆಗೆ ಕರೆದು ಬಿಟ್ಟು ಕಳುಹಿಸಿದ್ದರು. ಈ ಅಭ್ಯರ್ಥಿಯನ್ನು ಬಿಡುವುದಕ್ಕೆ ಸಚಿವ ಡಾ. ಅಶ್ವಥ್ ನಾರಾಯಣ್ ರವರು ತಮ್ಮ ಪ್ರಭಾವವನ್ನು ಬಳಸಿದ್ದಾರೆ ಎಂಬು ಆರೋಪ ಕೇಳಿಬಂದಿದೆ. ಇದೇ ಬ್ರಹಾಸ್ತ್ರವನ್ನು ಇಟ್ಟುಕೊಂಡು ಡಿಕೆಶಿ ಡಾ. ಅಶ್ವಥ್ ನಾರಾಯಣ ವಿರುದ್ದ ಪರೋಕ್ಷವಾಗಿ ಹರಿಹಾಯ್ದಿದ್ದರು.

ಡಾ. ಅಶ್ವಥ್ ನಾರಾಯಣ ರವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ ಡಿಕೆಶಿ ವಿರುದ್ದವೇ ಹರಿಹಾಯ್ದಿದ್ದರು. ಇದಕ್ಕೆ ಡಿಕೆಶಿ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದೀಗ ಕಾಂಗ್ರೆಸ್ ಅಶ್ವಥ್ ನಾರಾಯಣರವರ ಪದಚ್ಯುತಿಗೆ ಆಗ್ರಹಿಸುವ ವರೆಗೂ ಡಿಕೆಶಿ ವರ್ಸಸ್ ಅಶ್ವಥ್ ನಾರಾಯಣ್ ಜಟಾಪಟಿ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+