ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮಕೃಷ್ಣ ಮಕ್ಕಳ ಆಟದ ಮೈದಾನ ಉಳಿಸಲು ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಮಾರ್ಚ್ 31: ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಉಳಿಸಬೇಕೆಂದು ಸಾರ್ವಜನಿಕರು ಮತ್ತು ಮಕ್ಕಳು ಏ.2ರಂದು ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ನಂದಿನಿ ಲೇಔಟ್ ನಲ್ಲಿರುವ ರಾಮಕೃಷ್ಣ ನಗರದಲ್ಲಿರುವ ಆಟದ ಮೈದಾನವನ್ನು ಸುಮಾರು 20 ವರ್ಷಗಳಿಂದ ಸುತ್ತಮುತ್ತಲಿನ ಸರ್ಕಾರಿ ಶಾಲೆ ಮಕ್ಕಳು ಹಾಗೂ ಸಾರ್ವಜನಿಕರು, ನಿವಾಸಿಗಳು ಉಪಯೋಗಿಸುತ್ತಿದ್ದಾರೆ.

ರೋಹಿಣಿ ಸಿಂಧೂರಿ ವರ್ಗಾವಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ರೋಹಿಣಿ ಸಿಂಧೂರಿ ವರ್ಗಾವಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಇತ್ತೀಚೆಗೆ ಬಿಡಿಎ ವತಿಯಿಂದ ಇದು ಸಿಎ ನಿವೇಶನವೆಂದು ವಿಂಗಡಿಸಿ ಮೂರು ಸಂಘ ಸಂಸ್ಥೆಗಳಾದ ಚಿತ್ರದುರ್ಗದ ಲೋಕಸಭಾ ಸದಸ್ಯ ಬಿ.ಎನ್. ಚಂದ್ರಪ್ಪ ಅವರಿಗೆ ಸೇರಿದ ತುಂಗಾಭದ್ರಾ ವಿದ್ಯಾ ಸಂಸ್ಥೆ, ತುಮಕೂರಿನ ಹಾಲು ಉತ್ಪಾದಕ ಒಕ್ಕೂಟ, ಮಹಾಲಕ್ಷ್ಮೀ ಲೇಔಟ್ ನ ಬ್ರಾಹ್ಮಣಸಭಾ ಇವರುಗಳಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿದ್ದಾರೆ ಎಂದು ಕರ್ನಾಟಕ ಸಂಗೊಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.

Protest to save Ramakrishna nagara play ground

ರಾಮಕೃಷ್ಣ ನಗರದ ಮಕ್ಕಳ ಆಟದ ಮೈದಾನವು ಸುಮಾರು 20ವರ್ಷಗಳಿಂದ ಬಳಕೆಯಾಗುತ್ತಿದ್ದು, ಅದನ್ನು ಉಳಿಸಿ ಅಭಿವೃದ್ಧಿಪಡಿಸಬೇಕು ಸಿಎ ನಿವೇಶನಗಳಾಗಿ ಮೂರು ಸಂಸ್ಥೆಗಳಿಗೆ ಹಂಚಿಕೆಯಾಗಿರುವ ನಿವೇಶನವನ್ನು ಬಿಡಿಎ ಅಭಿವೃದ್ಧಿಪಡಿಸಬೇಕು ಮಕ್ಕಳ ಆಟದ ಮೈದಾನವನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕು ಎಂದು ಬಿಡಿಯೆಗೆ ಒತ್ತಾಯಿಸುವುದಾಗಿ ತಿಳಿಸಿದರು.

English summary
Bengaluru citizens decided to stage protest aganist handed over Ramakrishna nagara play ground to third party. BDA has decided to convert playground as CA sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X