• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ: ವಾಹನ ಮಾರ್ಗ ಬದಲಾವಣೆ

|

ಬೆಂಗಳೂರು, ಸೆಪ್ಟೆಂಬರ್ 11 : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್‌ ಬಂಧನ ಖಂಡಿಸಿ ಬುಧವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಬಸನವಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಸ್ವಾತಂತ್ರ್ಯ ಉದ್ಯಾನದ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ವಿಶ್ವ ಒಕ್ಕಲಿಗರ ಒಕ್ಕೂಟದಡಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಿವೆ.

ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ : ಬಿಜೆಪಿ ನಾಯಕರು ಹೇಳಿದ್ದೇನು?

ಈ ಪ್ರತಿಭಟನೆಯಲ್ಲಿ ಸುಮಾರು 35 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ಪ್ರತಿಭಟನೆ ನಡೆಯಲಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

ಡಿಕೆಶಿಗೆ ಸಂಕಷ್ಟ ತಂದ ಅರಮನೆ ಮೈದಾನದ ಜಮೀನು ಖರೀದಿ

ಪ್ರತಿಭಟನೆ ನಡೆಸುವವರಿಗೆ ಬೆಂಗಳೂರು ಪೊಲೀಸರು ಷರತ್ತುಗಳನ್ನು ಹಾಕಿದ್ದಾರೆ. ಸಂಚಾರಿ ಪೊಲೀಸರು ವಾಹನಗಳ ಸಂಚಾರದ ದೃಷ್ಟಿಯಿಂದ ಮಾರ್ಗಗಳನ್ನು ಬದಲಾವಣೆ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾಗೆ ಇ.ಡಿ ಸಮನ್ಸ್

* ಮೆಜೆಸ್ಟಿಕ್‌ನಿಂದ ಮಾರ್ಕೆಟ್‌ ಕಡೆಗೆ ಹೋಗಲು ಎನ್‌. ಆರ್. ಜಂಕ್ಷನ್, ದೇವಾಂಗ ಜಂಕ್ಷನ್, ಸುಬ್ಬಯ್ಯ ವೃತ್ತ, ಪೂರ್ಣಿಯಾ ಜಂಕ್ಷನ್, ಊರ್ವಶಿ, ಲಾಲ್ ಭಾಗ್ ಮುಖ್ಯದ್ವಾರ, ಲಾಲ್ ಭಾಗ್ ಪಶ್ಚಿಮ ದ್ವಾರ, ಜೆ. ಸಿ. ರಸ್ತೆ ಟೌನ್ ಹಾಲ್ ಮೂಲಕ ಸಾಗಬೇಕು.

* ರಿಚ್‌ಮಂಡ್ ವೃತ್ತದಿಂದ ಬರುವವರು ಹಡ್ಸನ್ ವೃತ್ತ, ದೇವಾಂಗ ಜಂಕ್ಷನ್, ಸುಬ್ಬಯ್ಯ ವೃತ್ತ, ಲಾಲ್‌ ಭಾಗ್ ಪಶ್ಚಿಮದ್ವಾರ, ಜೆ. ಸಿ. ರಸ್ತೆ ಮುಖಾಂತರ ಪುರಭವನದ ಮಂದೆ ಹೋಗಬಹುದು.

* ರಿಚ್‌ ಮಂಡ್ ಸರ್ಕಲ್‌ನಿಂದ ಮೆಜೆಸ್ಟಿಕ್‌ಗೆ ಹೋಗಲು ಹಡ್ಸನ್ ವೃತ್ತ, ಪಿ. ಎಸ್. ಜಂಕ್ಷನ್, ಪೊಲೀಸ್ ಕಾರ್ನರ್, ಕಬ್ಬನ್ ಉದ್ಯಾನ ಒಳಭಾಗ, ಫಿಶ್ ಕ್ಯಾಂಟೀನ್, ಕೆ. ಆರ್. ವೃತ್ತ, ಹಳೆ ಅಂಚೇ ಕಛೇರಿ ರಸ್ತೆ ಮೂಲಕ ಹೋಗಬೇಕು.

* ಕ್ವೀನ್ಸ್ ರಸ್ತೆಯಿಂದ ಬರುವ ವಾಹನ ಸವಾರರು ಸಿ. ಟಿ. ಓ ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತ, ಅಂಬೇಡ್ಕರ್ ಬೀದಿ, ಕೆ. ಆರ್. ವೃತ್ತ, ಹಳೇ ಅಂಚೆ ಕಛೇರಿ ರಸ್ತೆ ಮೂಲಕ ಸಾಗಬಹುದು.

* ಮೆಜೆಸ್ಟಿಕ್‌ನಿಂದ ಶಾಂತಿನಗರ, ಮಾರ್ಕೆಟ್, ಹೊಸೂರು ರಸ್ತೆಗೆ ಹೋಗುವವರು ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ಮೇಲು ಸೇತುವೆ ಮತ್ತು ಕೆಳ ಸೇತುವೆ, ಹಳೇ ಜೆಡಿಎಸ್ ಕಚೇರಿ, ರೇಸ್‌ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ಸಿಐಡಿ ಮಹಾರಾಣಿ ಮೇಲು ಸೇತುವೆ, ಕೆ. ಆರ್. ವೃತ್ತದ ಮೂಲಕ ಹೋಗಬೇಕು.

* ಮೆಜೆಸ್ಟಿಕ್‌ನಿಂದ ಎಚ್‌ಎಎಲ್, ಕೆ. ಆರ್. ಪುರಂ ಕಡೆಗೆ ಹೋಗಲು ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ಮೇಲು ಸೇತುವೆ ಮತ್ತು ಕೆಳ ಸೇತುವೆ, ರೇಸ್‌ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ರಾಜಭವನ ಜಂಕ್ಷನ್, ಅಲಿ ಆಸ್ಕರ್ ರಸ್ತೆ, ಕಾಫಿ ಬೋರ್ಡ್, ಇನ್‌ಫೆಂಟ್ರಿ ರಸ್ತೆ ಮೂಲಕ ಮುಂದೆ ಸಾಗಬಹುದು.

English summary
Bengaluru traffic police diverted vehicle movement due to protest against arrest of Congress leader D.K.Shivakumar in money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X