Property Tax Good News: ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿ ಭರ್ಜರಿ ಬಂಪರ್: ಆಸ್ತಿ ತೆರಿಗೆ ಮೇಲೆ ಶೇ.5% ಡಿಸ್ಕೌಂಟ್!
Property Tax Good News: ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಬೆಂಗಳೂರಿನ ಎಲ್ಲಾ ಆಸ್ತಿದಾರರಿಗೆ ಆಸ್ತಿ ತೆರಿಗೆ ಪಾವತಿಯ ಮೇಲೆ ಬರೋಬ್ಬರಿ ಶೇ 5ರಷ್ಟು ಡಿಸ್ಕೌಂಟ್ (ರಿಯಾಯಿತಿ) ಘೋಷಿಸಲಾಗಿದೆ. ಬೆಂಗಳೂರಿನ ಆಸ್ತಿದಾರರು ಈ ರಿಯಾಯಿತಿಯನ್ನು ಬಳಸಿಕೊಳ್ಳುವುದು ಹೇಗೆ ಹಾಗೂ ಯಾವ ಅವಧಿಯ ಒಳಗಾಗಿ ಆಸ್ತಿ ತೆರಿಗೆ ಪಾವತಿ ಮಾಡುವುದರಿಂದ ಆಸ್ತಿ ತೆರಿಗೆಯ ಮೇಲೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ ಎನ್ನುವ ಸಂಪೂರ್ಣ ವಿವರವನ್ನು ನೋಡೋಣ.
ಬೆಂಗಳೂರಿನ ಆಸ್ತಿದಾರರಿಗೆ ನಿರೀಕ್ಷೆಯಂತೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರವು ಆಸ್ತಿ ತೆರಿಗೆ ಪಾವತಿಯ ಮೇಲೆ ಶೇ 5% ಡಿಸ್ಕೌಂಟ್ ಘೋಷಣೆ ಮಾಡಿದೆ. ಬಿಬಿಎಂಪಿಯು ಬೆಂಗಳೂರಿನಲ್ಲಿ ಆಸ್ತಿದಾರರರಿಂದ ಈ ಬಾರಿ ಭರ್ಜರಿ ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬರೋಬ್ಬರಿ 1,000 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಲಾಗಿದೆ. ಹೀಗಾಗಿ, ಈ ಬಾರಿ ಆಸ್ತಿ ತೆರಿಗೆಯ ಮೇಲೆ ರಿಯಾಯಿತಿ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.

ಸಾಮಾನ್ಯವಾಗಿ ಪ್ರತಿ ವರ್ಷವೂ ಬಿಬಿಎಂಪಿ ಹಾಗೂ ಸರ್ಕಾರ ಆಸ್ತಿ ತೆರಿಗೆಯ ಮೇಲೆ ರಿಯಾಯಿತಿಯನ್ನು ಘೋಷಣೆ ಮಾಡುತ್ತದೆ. ಆದರೆ, ಕಡಿಮೆ ಆಸ್ತಿ ತೆರಿಗೆ ಸಂಗ್ರಹವಾದಾಗ ಅಥವಾ ಆದಾಯ ಕೊರತೆ ಎದುರಾದಾಗ ಆಸ್ತಿ ತೆರಿಗೆಯ ಮೇಲೆ ರಿಯಾಯಿತಿ ಘೋಷಣೆ ಮಾಡುವ ಸಾಧ್ಯತೆಗಳು ವಿರಳ ಅಂತಲೇ ಹೇಳಬಹುದು. ಆದರೆ, ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿದಾರರಿಂದ 2024-25 ಆರ್ಥಿಕ ವರ್ಷದಲ್ಲಿ ಬರೋಬ್ಬರಿ 4,930 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇದರಿಂದ ಬಿಬಿಎಂಪಿಗೆ ಭರ್ಜರಿ ಆದಾಯ ಹರಿದು ಬಂದಂತೆ ಆಗಿದ್ದು, ಸಕಾಲಿಕ ಆಸ್ತಿ ತೆರಿಗೆ ಪಾವತಿ ಮಾಡಿದರೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿ ಭರ್ಜರಿ ಬಂಪರ್
ಬೆಂಗಳೂರಿನ ಆಸ್ತಿದಾರರಿಗೆ ರಾಜ್ಯ ಸರ್ಕಾರವು ಬಂಪರ್ ಗುಡ್‌ನ್ಯೂಸ್ ನೀಡಿದೆ. ಸಕಾಲಿಕ ಆಸ್ತಿ ತೆರಿಗೆ ಪಾವತಿಗೆ ಶೇ 5ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಬೆಂಗಳೂರಿನ ಆಸ್ತಿದಾರರು ಆಸ್ತಿತೆರಿಗೆಯನ್ನು ಇದೇ ತಿಂಗಳು ಏಪ್ರಿಲ್ 30ನೇ ತಾರೀಖಿನ ಒಳಗಾಗಿ ಪಾವತಿ ಮಾಡಿದರೆ ಆಸ್ತಿ ತೆರಿಗೆಯ ಮೇಲೆ ಶೇ 5ರಷ್ಟು ಡಿಸ್ಕೌಂಟ್ ಸಿಗಲಿದೆ.
2025 -2026ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ 30-04-2025ರ ಒಳಗಾಗಿ ಪಾವತಿ ಮಾಡಿದರೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ. ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ ಮೂಲಕ ಶೇ 5ರಷ್ಟು ಡಿಸ್ಕೌಂಟ್ ಪಡೆಯಿರಿ ಎಂದು ಹೇಳಲಾಗಿದೆ. ತಕ್ಷಣವೇ ಪಾವತಿಸಿ ಮತ್ತು ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ: ಇನ್ನು ನೀವು ಅತ್ಯಂತ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಬಿಬಿಎಂಪಿಯ ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ. http //bbmptax.karnataka.gov.in ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ನೀವು ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ.
ಆಸ್ತಿದಾರರಿಗೆ ಬಂಪರ್: ಇನ್ನು ಈ ಬಾರಿ ಬಿಬಿಎಂಪಿ ಕೊಟ್ಟಿರುವ ಆಫರ್ ಬಿಗ್ ಗುಡ್‌ನ್ಯೂಸ್ ಎಂದೇ ಪರಿಗಣಿಸಲಾಗಿದೆ. ಬಿಬಿಎಂಪಿಯು ಆಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹ ಮಾಡುವುದಕ್ಕೆ ಹಲವು ಕಠಿಣ ಕ್ರಮಗಳನ್ನು ಅನುಸರಿಸುತ್ತಿದೆ. ಇದೀಗ 2025-2026ನೇ ಸಾಲಿನ ಆಸ್ತಿ ತೆರಿಗೆಯನ್ನು ನೀವು ಈಗಾಲೇ ಪಾವತಿ ಮಾಡಿದರೆ ನಿಮಗೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ ಅಲ್ಲದೇ ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಸಂಕಷ್ಟಗಳೂ ತಪ್ಪಲಿದೆ. ಹೀಗಾಗಿ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ.












Click it and Unblock the Notifications