Property: ಹಲವು ಷರತ್ತುಗಳೊಂದಿಗೆ ಚನ್ನರಾಯಪಟ್ಟಣ ಹೋಬಳಿಯ ಜಮೀನು ನೀಡಲು ರೈತರ ಒಪ್ಪಿಗೆ
Property: ಈ ಹಿಂದೆ ಕೆಐಎಡಿಬಿಗೆ ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯ ಜಮೀನು ನೀಡುವುದಿಲ್ಲ ಎಂದು ರೈತ ಹೋರಾಟಗಾರರು ಹೋರಾಟ ನಡೆಸುತ್ತಿದ್ದರು. ಆದರೆ, ಇದೀಗ ಇಂದು (ಜುಲೈ 12) ದಿಢೀರ್ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಜಮೀನು ನೀಡುವುದಾಗಿ ತಿಳಿಸಿದ್ದಾರೆ. ಹಾಗಾದ್ರೆ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರಿಗೆ ದೇವನಹಳ್ಳಿ ತಾಲ್ಲೂಕು, ಚನ್ನರಾಯಪ್ಪಟಣ ಹೋಬಳಿ ರೈತ ಹೋರಾಟ ಸಮಿತಿ ಪತ್ರ ಬರೆದಿದೆ. ಅದರಲ್ಲಿ ಚನ್ನರಾಯಪಟ್ಟಣ ಹೋಬಳಿ 1,777 ಹೆಕ್ಟೇರ್ ಜಮೀನು ನೀಡುವುದಕ್ಕೆ 13 ಗ್ರಾಮಗಳ ರೈತರ ಒಪ್ಪಿಗೆಯಿದೆ ಎಂಬುದಾಗಿ ತಿಳಿಸಿದ್ದಾರೆ.

ಆದರೆ, ರಾಜ್ಯ ಸರ್ಕಾರ ರೈತರ ಭೂಮಿಗೆ ಉತ್ತಮ ದರ ನಿಗದಿ ಮಾಡಬೇಕು. ಆ ಮೂಲಕ ಜಮೀನು ಖರೀದಿ ಮಾಡಬೇಕು ಎಂದು ಸಿಎಂ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಇನ್ನೂ ನಾಲ್ಕು ಷರತ್ತುಗಳನ್ನು ರೈತ ಹೋರಾಟ ಸಮಿತಿ ವಿಧಿಸಿದೆ. ಅದರಲ್ಲಿ ಮೊದಲನೇಯ ಷರತ್ತು ಪ್ರತಿ ಹೆಕ್ಟೇರ್‌ಗೆ 3.50 ಕೋಟಿಗಳ ದರ ನಿಗದಿ ಪಡಿಸಬೇಕು.
ಎರಡನೇಯದು ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಉದ್ಯೋಗ ನೀಡುವುದಾಗಿದೆ. ಮತ್ತೊಂದು ಯಾವುದೇ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತನೆ ಮಾಡಬಾರದು. ಇನ್ನೂ ಕೊನೆಯದಾಗಿ ಷರತ್ತಾಗಿ ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನ ಹಳದಿ ವಲಯವನ್ನಾಗಿ ಪರಿವರ್ತನೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.












Click it and Unblock the Notifications