ಬೆಂಗಳೂರಿನ 'ಒಳಾಂಗಣ ಗಾರ್ಡನ್' ಪ್ರೇಮಿಗಳಿಗೊಂದು ಆಹ್ವಾನ!

ಬೆಂಗಳೂರು, ಏಪ್ರಿಲ್ 26: ಎಕ್ಸ್ ಕ್ಲೂಸಿವ್ ಟೆರೇರಿಯಂ(ಭೂಚರಾಲಯ) ಕಾರ್ಯಾಗಾರ 'ದಿ ಶಿ ಸೆಷನ್' ಏಪ್ರಿಲ್ 28, 2018ರಂದು ಜಯನಗರ ಮಳಿಗೆಯಲ್ಲಿ ಬೆಂಗಳೂರಿನ ಎಲ್ಲಾ ಒಳಾಂಗಣ ಗಾರ್ಡನ್ ಪ್ರೇಮಿಗಳಿಗೊಂದು ಪ್ರೊಜೆಕ್ಟ್ ಈವ್ ಮುಕ್ತ ಆಹ್ವಾನ ನೀಡುತ್ತಿದೆ.

ತಜ್ಞರು ನಡೆಸಿಕೊಡುವ ಎಕ್ಸ್ ಕ್ಲೂಸಿವ್ ಟೆರೇರಿಯಂ (ಭೂಚರಾಲಯ) ಕಾರ್ಯಾಗಾರದಲ್ಲಿ ನೀವು ಪಾಲ್ಗೊಳ್ಳಿ. ಕಣ್ಸೆಳೆಯುವ ಭೂಚರಾಲಯದೊಂದಿಗೆ ನಿಮ್ಮ ಒಳಾಂಗಣಕ್ಕೆ ತುಸು ಹಸಿರು ಸೇರಿಸಿ!

ಟೆರೇರಿಯಂ ಎಂಬುದು ಒಂದು ಆವರಣ ಹೊಂದಿರುವ, ಒಳಾಂಗಣ ಗಾರ್ಡನ್ ಆಗಿರುತ್ತದೆ, ಸಾಮಾನ್ಯವಾಗಿ ಸಣ್ಣದಾಗಿರುತ್ತದೆ ಮತ್ತು ಗಾಜಿನಿಂದ ಮಾಡಲ್ಪಟ್ಟಿರುತ್ತದೆ ಹಾಗಾಗಿ ನಿಮ್ಮ ಸಸ್ಯಗಳ ಸಂಗ್ರಹವನ್ನು ನೀವು ನೋಡಬಹುದಾಗಿರುತ್ತದೆ.

ಭೂಚರಾಲಯಗಳು ಆಮ್ಲಜನಕ ಬೂಸ್ಟರ್ ಆಗಿರುವುದಷ್ಟೇ ಅಲ್ಲ, ರಚಿಸಲು ಸುಲಭ ಮತ್ತು ವೈವಿಧ್ಯಮಯ ಗಾತ್ರಗಳಲ್ಲಿ ತಯಾರಿಸಬಹುದಾಗಿರುತ್ತದೆ. ನಿಮ್ಮದೇ ಸುಂದರ ಮತ್ತು ಯಶಸ್ವಿ ಗಾಜಿನ ಭೂಚರಾಲಯ ರಚಿಸುವುದು ಹೇಗೆಂದು ಮಾರ್ಗದರ್ಶನದೊಂದಿಗೆ ಹಂತ ಹಂತವಾಗಿ ಕಲಿಯಿರಿ.

Project Eve is conducting an exclusive Terrarium workshop

ನಿಮ್ಮ ಸ್ವಂತ ಭೂಚರಾಲಯ (ಟೆರೇರಿಯಂ) ಆರಂಭಿಸಲು ಉತ್ಸುಕರಾಗಿದ್ದೀರಾ! ಪ್ರೊಜೆಕ್ಟ್ ಈವ್‍ಗೆ ಭೇಟಿ ನೀಡಿ

ದಿನಾಂಕ: ಶನಿವಾರ, ಏಪ್ರಿಲ್ 28, 2018

ಸಮಯ: ಸಂಜೆ 3.

ಸ್ಥಳ: ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು

ಪ್ರಾಜೆಕ್ಟ್ ಈವ್: ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.

ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಮಹಿಳೆಯರು ತಮ್ಮನ್ನು ತಾವು ಸಂಭ್ರಮಿಸಿಕೊಳ್ಳಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಹೀಗಾಗಿ, ಈ ಇಡೀ ಮಳಿಗೆಯಲ್ಲಿ ಅದಕ್ಕೆ ತಕ್ಕ ಗಮನ ಕೊಡಲಾಗಿದೆ. ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು!

ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‍ಗಳು, ಚಾರ್ಜಿಂಗ್ ಡಾಕೆಟ್‍ಗಳು ಮತ್ತು ಎಕ್ಸ್ ಪ್ರೆಸ್ ಚೆಕ್ ಔಟ್ ನ ಸೌಲಭ್ಯಗಳೂ ಇಲ್ಲಿ ಲಭ್ಯ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+