ಪ್ರೊ. ಸಿ.ಎನ್.ಆರ್.ರಾವ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ
ಬೆಂಗಳೂರು, ಸೆ. 24: ಭಾರತ ರತ್ನ, ಹಿರಿಯ ವಿಜ್ಞಾನಿ, ಹೆಮ್ಮೆಯ ಕನ್ನಡಿಗ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಅಮೆರಿಕದ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.
ಅಮೆರಿಕದ ಮೆಟಿರಿಯಲ್ ರಿಸರ್ಚ್ ಸೊಸೈಟಿಯು ಮೆಟಿರಿಯಲ್ ರಿಸರ್ಚ್ (ವಸ್ತುಗಳ ಸಂಶೋಧನೆ) ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ವಿಜ್ಞಾನಿಗಳಿಗೆ ನೀಡುವ 'ವಾನ್ ಹಿಪ್ಪಲ್' ಪ್ರಶಸ್ತಿ ನೀಡಲಾಗುತ್ತದೆ. ಪ್ರೊ.ಸಿ.ಎನ್.ಆರ್.ರಾವ್ ಅವರು ಪ್ರಶಸ್ತಿ ಪಡೆಯುತ್ತಿರುವ ಏಷ್ಯಾದ ಖಂಡದ ಮೊದಲ ವಿಜ್ಞಾನಿಯಾಗಿದ್ದಾರೆ.

ನ್ಯಾನೋ ವಸ್ತುಗಳು, ಗ್ರಾಫೈನ್, ಸೂಪರ್ ಕಂಡೆಕ್ಟಿವಿ, 2ಡಿ ದ್ರವ್ಯಗಳು ಇನ್ನಿತರ ವಿಷಯಗಳ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿ ಪ್ರೊ.ರಾವ್ ಅವರಿಗೆ ಈ ಗೌರವ ಸಂದಾಯವಾಗುತ್ತಿದೆ.
ನವೆಂಬರ್ 29ರಂದು ಬೋಸ್ಟನ್ ನಲ್ಲಿ ನಡೆಯುವ ಮೆಟಿರಿಯಲ್ಸ್ ರಿಸರ್ಚ್ ಸೊಸೈಟಿ ಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿಯು ನಗದು ಬಹುಮಾನ, ಪ್ರಶಸ್ತಿ ಫಲಕ, ಡಿಪ್ಲೋಮಾ ಪತ್ರವನ್ನು ಒಳಗೊಂಡಿರುತ್ತದೆ.












Click it and Unblock the Notifications