• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಕಡಿಮೆ ಹೂಡಿಕೆ ಮಾಡಿದವರಿಗೆ ಲಾಟರಿ !

|
Google Oneindia Kannada News

ಬೆಂಗಳೂರು, ಮಾರ್ಚ್ 12 : ಐಎಂಎ ಬೋಗಸ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಗುಡ್ ನ್ಯೂಸ್ ! ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಹಣ ಕಳೆದುಕೊಂಡಿರುವ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಶೀಘ್ರದಲ್ಲಿಯೇ ಹಣ ವಾಪಸು ಬರಲಿದೆ. ಐಎಂಎ ಸಮೂಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರ ಖಾತೆಗೆ ಹಣ ಪಾವತಿಸುವ ಕಾರ್ಯಕ್ಕೆ ಸಕ್ಷಮ ಪ್ರಾಧಿಕಾರ ಮುಂದಾಗಿದೆ. ಹಣ ಕಳೆದುಕೊಂಡವರಿಗೆ ಎಷ್ಟು ಹಣ ಬರಲಿದೆ ? ಯಾವಾಗ ಬರಲಿದೆ ಎಂಬುದರ ಸಮಗ್ರ ವಿವರ ಇಲ್ಲಿದೆ.

ತಲಾ 50 ಸಾವಿರ ಖಾತೆಗೆ

ತಲಾ 50 ಸಾವಿರ ಖಾತೆಗೆ

ಐಎಂಎ ಸಕ್ಷಮ ಪ್ರಾಧಿಕಾರ ಎಂಎಎ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರ ಖಾತೆಗೆ ಪ್ರಾರಂಭಿಕ ಹಂತದಲ್ಲಿ ತಲಾ 50 ಸಾವಿರ ರೂ. ಹಣ ಬೀಳಲಿದೆ. ಒಂದು ಕೋಟಿ ಕಳೆದುಕೊಂಡಿದ್ದರೂ ಮೊದಲ ಹಂತದಲ್ಲಿ ಕೇವಲ 50 ಐವತ್ತು ಸಾವಿರ ಮೊತ್ತಕ್ಕಿಂತ ಕಡಿಮೆ ಮೊತ್ತ ಹೂಡಿಕೆ ಮಾಡಿದ್ದಲ್ಲಿ, ಅವರಿಗೆ ಪೂರ್ಣ ಪ್ರಮಾಣದ ಹಣ ಸಿಗಲಿದೆ. ಹತ್ತು ಲಕ್ಷ ಮತ್ತು ಹದಿನೈದು ಲಕ್ಷ, ಕೋಟಿ ಕಳೆದುಕೊಂಡವರಿಗೆ ಕೂಡ ಮೊದಲ ಹಂತದಲ್ಲಿ ಕೇವಲ 50 ಸಾವಿರ ರೂಪಾಯಿ ಮೊದಲ ಹಂತದಲ್ಲಿ ಖಾತೆಗೆ ಬೀಳಲಿದೆ. ಐವತ್ತು ಸಾವಿರಕ್ಕೂ ಕಡಿಮೆ ಹೂಡಿಕೆ ಮಾಡಿದವರಿಗೆ ಪೂರ್ಣ ಪ್ರಮಾಣದ ಹಣ ಸಿಗಲಿದೆ ಎಂಬುದು ವಿಶೇಷ. ಇನ್ನು ಹೂಡಿಕೆದಾರರಿಗೆ ಹಣ ನೀಡುವ ಸಂಬಂಧ ಸಕ್ಷಮ ಪ್ರಾಧಿಕಾರದ ಕಾರ್ಯಕ್ಕೆ ಹೈಕೋರ್ಟ್‌ ಗ್ರೀನ್ ಸಿಗ್ನಲ್ ನೀಡಿದೆ.

ಐಎಂಎ ವಂಚನೆ : ಹಾಕಿದ್ದು ಇಷ್ಟು! ಬರೋದು ಎಷ್ಟು? ನೀವೇ ಲೆಕ್ಕ ಹಾಕಿಐಎಂಎ ವಂಚನೆ : ಹಾಕಿದ್ದು ಇಷ್ಟು! ಬರೋದು ಎಷ್ಟು? ನೀವೇ ಲೆಕ್ಕ ಹಾಕಿ

ಇನ್ನೊಂದು ತಿಂಗಳಲ್ಲಿ ಖಾತೆಗೆ ಹಣ

ಇನ್ನೊಂದು ತಿಂಗಳಲ್ಲಿ ಖಾತೆಗೆ ಹಣ

ಐಎಂಎ ವಂಚನೆ ಪ್ರಕರಣ ಸಂಬಂಧ ಹೂಡಿಕೆದಾರರಿಗೆ ಮೊದಲ ಹಂತದಲ್ಲಿ ಐವತ್ತು ಸಾವಿರ ರೂಪಾಯಿ ಪಾವತಿಸುವ ಸಂಬಂಧ ಸಕ್ಷಮ ಪ್ರಾಧಿಕಾರ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಇತ್ಯರ್ಥ ವಾಗಿದ್ದು, ಇನ್ನೊಂದು ತಿಂಗಳಲ್ಲಿ ಹೂಡಿಕೆದಾರರ ಖಾತೆಗೆ ನೇರವಾಗಿ ಹಣ ಬೀಳಲಿದೆ. ಈಗಾಗಲೇ ಹಣ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ವಂಚನೆ ಸಂಬಂಧ ಯಾರು ಹಣ ಕಳೆದುಕೊಂಡು ಅರ್ಜಿ ಸಲ್ಲಿಸಿದ್ದಾರೋ ಅಂತಹವರ ಖಾತೆಗೆ ಮಾತ್ರ ಹಣ ಬರಲಿದೆ. ಇನ್ನು 2021 ಜನವರಿಗೆ ಅರ್ಜಿ ಸಲ್ಲಿಕೆಗೆ ಕೊನೆ ಕಾಲಾವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸುವ ಕಾಲಾವಕಾಶ ಮುಗಿದಿದೆ. ಇನ್ನೇನಿದ್ದರೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬೀಳಲಿದೆ ಎಂದು ಐಎಂಎ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಎಷ್ಟು ಮಂದಿಗೆ ಬರಲಿದೆ

ಎಷ್ಟು ಮಂದಿಗೆ ಬರಲಿದೆ

ರಾಜ್ಯದಲ್ಲಿ ಐಎಂಎನಲ್ಲಿ ಕೇವಲ ಜನ ಸಾಮಾನ್ಯರು ಮಾತ್ರ ಹೂಡಿಕೆ ಮಾಡಿಲ್ಲ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಸಾವಿರಾರು ಜನ ಹೂಡಿಕೆ ಮಾಡಿದ್ದರು. ಆದರೆ, ಪರಿಹಾರ ಕೋರಿ ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುವುದು ಈವರೆಗೆ 58, 856 ಮಂದಿ ಮಾತ್ರ. ಇದರಲ್ಲಿ ಈಗಾಗಲೇ ಕೆಲವರಿಗೆ ಹೂಡಿಕೆ ಮಾಡಿ ಪರಿಹಾರ ಪಡೆದಿದ್ದಾರೆ. ಅಂತಹವರಿಗೆ ಸಕ್ಷಮ ಪ್ರಾಧಿಕಾರದಿಂದ ಹಣ ಸಿಗುವುದು ಅನುಮಾನ. ಯಾರು ಹೂಡಿಕ ಮಾಡಿ ಹಣ ಕಳೆದುಕೊಂಡಿದ್ದಾರೋ ಅಂತಹವರಿಗೆ ಮೊದಲ ಕಂತಿನಲ್ಲಿ ಐವತ್ತು ಸಾವಿರ ರೂಪಾಯಿ ಹಣ ಬ್ಯಾಂಕ್ ಖಾತೆಗೆ ಬೀಳಲಿದೆ. ಇದರಲ್ಲೂ ಈಗಾಗಲೇ ಐಎಂಎನಿಂದ ಹಣ ವಾಪಸು ಮಾಡಿದಲ್ಲಿ ಅಂತಹವರಿಗೆ ಹಣ ಹಾಕುವುದಿಲ್ಲ. ಅದರ ಪ್ರಕಾರ 11 ಸಾವಿರ ಮಂದಿಗೆ ಐವತ್ತು ಸಾವಿರ ರೂ. ಬೀಳಲಿದೆ ಎಂದು ಹೇಳಲಾಗುತ್ತಿದೆ.

  ಬ್ಯಾಂಕ್‌ ಕೆಲಸಗಳಿದ್ದರೆ ಇಂದೇ ಮುಗಿಸಿ, ನಾಳೆಯಿಂದ 4 ದಿನ ಬ್ಯಾಂಕ್‌ ಬಂದ್..! | Oneindia Kannada
  ಸಿಗುವ ಪರಿಹಾರ ಎಷ್ಟು

  ಸಿಗುವ ಪರಿಹಾರ ಎಷ್ಟು

  ಇನ್ನು ಐಎಂಎ ವಂಚನೆ ಸಂಬಂಧ ಸಕ್ಷಮ ಪ್ರಾಧಿಕಾರದ ದಾಖಲೆಗಳ ಪ್ರಕಾರ, ಐಎಂಎ ಮತ್ತು ಅಂಗ ಸಂಸ್ಥೆಗಳಲ್ಲಿ ಬರೋಬ್ಬರಿ 2900 ರೂ. ಹೂಡಿಕೆ ಮಾಡಲಾಗಿತ್ತು. ಅದರಲ್ಲಿ ರಿಟರ್ಸ್ ರೂಪದಲ್ಲಿ ಐಎಂಎ ಸಂಸ್ಥೆ 1500 ಕೋಟಿ ರೂ. ವಾಪಸು ನೀಡಿದೆ. ಉಳಿದ 1400 ಕೋಟಿ ರೂ. ಹಣ ಹೂಡಿಕೆದಾರರಿಗೆ ನೀಡಬೇಕಾಗಿರುತ್ತದೆ. ಆದರೆ ವಾಸ್ತವದಲ್ಲಿ ಸರ್ಕಾರ 475 ಕೋಟಿ ರೂ. ಮೊತ್ತದ ಸ್ಥಿರ ಮತ್ತು ಚರಾಸ್ತಿಯನ್ನು ರಾಜ್ಯ ಸರ್ಕಾರ ಮುಟ್ಟು ಗೋಲು ಹಾಕಿಕೊಂಡಿದೆ. ಒಟ್ಟಾರೆ ಸರಾಸರಿ ಐದು ನೂರು ಕೋಟಿಯಾದರೂ ಸಹ ಹೂಡಿಕೆ ದಾರರಿಗೆ ಹೂಡಿಕೆ ಮಾಡಿದ ಮೊತ್ತದಲ್ಲಿ ಶೇ. 30 ರಷ್ಟು ಸಿಗಬಹುದು ಎಂದು ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ ಕೇವಲ 50 ಸಾವಿರ ನೀಡುತ್ತಿದ್ದು, ಉಳಿದ ಮೊತ್ತವನ್ನು ಎರಡನೇ ಹಂತದಲ್ಲಿ ಪಾವತಿಯಾಗಲಿದೆ.

  English summary
  There is a Process to resolve the eligible claims of IMA depositors by special officers finalized.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X