ನಾಡಗೀತೆಗೆ ಅಪಮಾನ: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ಚಕ್ರತೀರ್ಥನನ್ನು ಕಿತ್ತೆಸೆಯಲು ಆಗ್ರಹ
ಬೆಂಗಳೂರು, ಜೂ, 08: ರೋಹಿತ್ ಚಕ್ರತೀರ್ಥ. ಈ ಹೆಸರಿನ ಜೊತೆ ವಿವಾದಗಳೂ ಚಕ್ರದಂತೆ ಸುತ್ತುತ್ತಲೇ ಇದೆ. ರೋಹಿತ್ ಚಕ್ರತೀರ್ಥನ ಪಠ್ಯಪುಸ್ತಕ ಮರುಪರಿಷ್ಕರಣೆಯ ಅಧ್ಯಕ್ಷತೆ ವಹಿಸಿ ಪರಿಷ್ಕರಣೆ ಮಾಡಿದ ಪಠ್ಯವೂ ವಿವಾದಕ್ಕೆ ಸಿಲುಕಿತು. ನಾಡಗೀತೆಯನ್ನು ತಿರುಚಿದ ವಿವಾದ ಭುಗಿಲೆದ್ದಿತು. ಸಾಹಿತಿಗಳು, ಮಠಾಧೀಶರು ತಿರುಗಿಬಿದ್ದರು. ಇದರಿಂದ ಶಾಲಾ ಮರು ಪರಿಷ್ಕರಣೆ ಪಠ್ಯಪುಸ್ತಕ ಸಮಿತಿಯನ್ನು ವಿಸರ್ಜಿಸಲಾಯ್ತು. ಪಿಯು ಪಠ್ಯಪುಸ್ತಕ ಸಮಿತಿಯಿಂದಲೂ ಗೇಟ್ ಪಾಸ್ ನೀಡಲಾಯ್ತು. ಆದರೆ, ರೋಹಿತ್ ಚಕ್ರತೀರ್ಥ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಮುಂದುವರೆದಿರುವುದು ಕನ್ನಡ ಪರ ಹೋರಾಟಗಾರರ ಕಣ್ಣು ಕೆಂಪಾಗಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೈಬಿಡಲು ಆಗ್ರಹ ಕೇಳಿಬಂದಿದೆ
ರೋಹಿತ್ ಚಕ್ರತೀರ್ಥರ ವಿರುದ್ಧ ಆಕೋಶ ಹೆಚ್ಚಾದ ಹಿನ್ನೆಲೆಯಲ್ಲಿ ಶಾಲಾ ಪಠ್ಯಪುಸ್ತಕ ಸಮಿತಿ ವಿಸರ್ಜಿಸಿಲಾಯಿತು. ಪಿಯು ಪಠ್ಯಪುಸ್ತಕದಿಂದ ಕೈಬಿಡಲಾಯಿತು. ರೋಹಿತ್ ಚಕ್ರತೀರ್ಥ ಕುವೆಂಪು ಮತ್ತು ನಾಡಗೀತೆಯನ್ನು ಅವಮಾನಿಸಿದ್ದಾರೆ. ಬಸವಣ್ಣ, ಅಂಬೇಡ್ಕರ್ ಗೆ ಅವಮಾನ ಮಾಡಲಾಗಿದೆ ಎಂಬ ಜನಾಕ್ರೋಶಕ್ಕೆ ಮಣಿದು ಸರ್ಕಾರ ರೋಹಿತ್ ಚಕ್ರತೀರ್ಥನಿಗೆ ಕೊಕ್ ನೀಡಿದೆ. ಕನ್ನಡಿಗರ ಮನಸ್ಸಿಗೆ ನೋವನ್ನುಂಟು ಮಾಡಿದ ರೋಹಿತ್ ಚಕ್ರತೀರ್ಥರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಮುಂದುವರೆಸಲಾಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ರೋಹಿತ್ ಚಕ್ರತೀರ್ಥರನ್ನು ಕೈ ಬಿಡಬೇಕು ಎಂಬ ಕೂಗು ಕೇಳಿಬರ್ತಿದೆ.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ
ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಟಿ.ಎಸ್. ನಾಗಾಭರಣ ಅಧ್ಯಕ್ಷರಾಗಿದ್ದಾರೆ. ಅಧಿಕಾರೇತರ ಸದಸ್ಯರಾಗಿ ಅಬ್ದುಲ್ ರೆಹಮಾನ್ ಪಾಷ, ರೋಹಿತ್ ಚಕ್ರತೀರ್ಥ, ಡಾ. ಗುಬ್ಬಿಗೂಡು ರಮೇಶ್, ಸುರೇಶ್ ಬಡಿಗೇರ್, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಡಾ. ಸಿಎ ಕಿಶೋರ್‌ರವರಿದ್ದಾರೆ. ನಾಡಗೀತೆಗೆ ಅಪಮಾನಗೈದರು ಎಂಬ ಅಪವಾದದ ಮೇಲೆ ಪಠ್ಯಪುಸ್ತಕ ಸಮಿತಿಯಿಂದ ತೆಗದಿದ್ದದ್ದ ರೋಹಿತ್ ಚಕ್ರತೀರ್ಥ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಸಲ್ಲುವ ವ್ಯಕ್ತಿಯೇ ಎಂಬ ಚರ್ಚೆ ಪ್ರಾರಂಭವಾಗಿದೆ.
ಅಧ್ಯಕ್ಷ ಮತ್ತು ಸದಸ್ಯತ್ವದ ಅವಧಿ ಮೂರು ವರ್ಷ
ಕರ್ನಾಟಕ ಸರ್ಕಾರವೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ಮತ್ತು ಇತರ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಿದೆ. ಕನ್ನಡ ಬಗ್ಗೆ ಚಿಂತನೆಯನ್ನು ಮಾಡುವವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎನ್ನಲಾಗುವ ಈ ಸ್ಥಾನಮಾನಕ್ಕೆ ನಿರ್ಧಿಷ್ಠ ಅರ್ಹತೆಯ ಮಾನದಂಡಗಳೇನು ಇಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಧಿ ಮೂರುವ ವರ್ಷಗಳಾಗಿದ್ದು ಅಕ್ಟೋಬರ್ 2022ಕ್ಕೆ ಕೊನೆಯಾಗಲಿದೆ. ಅಧ್ಯಕ್ಷರ ಅವಧಿ ಜೊತೆಯಲ್ಲೇ ಸದಸ್ಯರ ಅವಧಿಯೂ ಮುಗಿಯಲಿದೆ. ಅದಕ್ಕೂ ಮುನ್ನವೇ ರೋಹಿತ್ ಚಕ್ರತೀರ್ಥರ ಹೆಸರನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಕೈಬಿಡುತ್ತಾ ಅನ್ನೋ ಪ್ರಶ್ನೆಗಳು ಮೂಡುತ್ತಿವೆ.

ಕನ್ನಡ ಪರ ಸಂಘಟನೆ ಮುಖಂಡರು ಹೇಳುವುದೇನು..?
""ರೋಹಿತ್ ಚಕ್ರತೀರ್ಥ ಕನ್ನಡ ವಿರೋಧಿ, ಕನ್ನಡ ಧ್ವಜಕ್ಕೆ ಅವಮಾನ ಮಾಡಿದಾತ, ನಾಡಗೀತೆಯನ್ನು ತಿರುಚಿ ಕುವೆಂಪುರವರಿಗೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ, ಬಸವಣ್ಣರವರಿಗೆ ಅವಮಾನ ಮಾಡಿದವನು. ಆತ ಕನ್ನಡ ಅನ್ನೋ ಹೆಸರು ಬರುವ ಯಾವುದೇ ಜಾಗದಲ್ಲೂ ಇರಬಾರದು. ಬಿಜೆಪಿಯವರಿಗೆ ಪ್ರೀತಿಯಿದ್ದರೆ ದೆಹಲಿಯಲ್ಲಿ ಕರೆದುಕೂರಿಸಿಕೊಳ್ಳಲಿ. ರೋಹಿತ್ ಚಕ್ರತೀರ್ಥರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ಕೈಬಿಡಬೇಕೆಂದು ಆಗ್ರಹಿಸುತ್ತೇನೆ'' ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡರಿದ ಹೋರಾಟದ ಎಚ್ಚರಿಕೆ
""ಕನ್ನಡ ಅಭಿವೃದ್ದಿ ಪ್ರಾಧಿಕಾರದಂದಹ ಕನ್ನಡದ ಮೇರು ಪ್ರಾಧಿಕಾರದಲ್ಲಿ ರೋಹಿತ್ ಚಕ್ರತೀರ್ಥರಂಥವರು ಇರಬಾರದು. ಟಿ.ಎ ನಾಗಾಭರಣರವರ ಬಳಿಯಲ್ಲಿ ಕೂಡ ಈ ವಿಚಾರ ಮಾತನಾಡುತ್ತಿದ್ದೇನೆ. ಕನ್ನಡ ನಾಡಗೀತೆಗೆ , ಕನ್ನಡ ಮೇರು ಕವಿಗಳಿಗೆ ಅಪಮಾನವನ್ನು ಮಾಡದಂತವರನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ಕಿತ್ತೊಗೆಯಬೇಕು. ಸರ್ಕಾರ ರೋಹಿತ್ ಚಕ್ರತೀರ್ಥರನ್ನು ತೆಗೆಯದಿದ್ದರೇ ವಿಧಾನಸೌಧದ ಮುಂದೆಯೇ ಕುಳಿತು ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು'' ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ ನಾರಾಯಾಣಗೌಡ ನೀಡಿದ್ದಾರೆ.












Click it and Unblock the Notifications