ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕ್ರಾಂತಿಗೆ ತರಕಾರಿ, ಸೊಪ್ಪು, ಬೆಲೆ ಹೆಚ್ಚಳದ ಬಿಸಿ

|
Google Oneindia Kannada News

ಬೆಂಗಳೂರು, ಜನವರಿ 8: ತರಕಾರಿ, ಸೊಪ್ಪು, ತೆಂಗಿನ ಕಾಯಿ ಬೆಲೆ ಕಳೆದ ಒದು ವಾರದಿಂದ ಹೆಚ್ಚಾಗುತ್ತಿದೆ. ಸಂಕ್ರಾಂತಿಯನ್ನು ವಿಜೃಂಭಣೆಯಾಗಿ ಆಚರಿಸ ಹೊರಟವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಒಂದು ತೆಂಗಿನ ಕಾಯಿ ಬೆಲೆ 22-25 ರೂ ಇದ್ದಿದ್ದು ಇದೀಗ 28 ರೂ ವರೆಗೆ ತಲುಪಿದೆ. ಚಳಿಯಿಂದಾಗಿ ಟೊಮೆಟೋ ಬೆಳೆ ಸರಿಯಾಗಿ ಬಾರದಿರುವ ಕಾರಣ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ, ಮೈಸೂರು ಭಾಗದಿಂದ ಬರುತ್ತಿದ್ದ ಟೊಮೆಟೋ ಸರಬರಾಜು ಕೂಡ ಕಡಿಮೆಯಾಗಿದೆ.

ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ

ಚಳಿಗಾಲ ಆರಂಭಕ್ಕೂ ಮುನ್ನ 200-250 ಲೋಡ್‌ಗಳಷ್ಟು ಸರಬರಾಜಾಗುತ್ತಿತ್ತು, ಈಗ ಕೇವಲ 50-60ರಷ್ಟು ಸರಬರಾಜಾಗುತ್ತಿದೆ. ಬಾಕ್ಸ್‌ಗೆ 200-250 ಇದ್ದ ಬೆಲೆ ಇದೀಗ 400-600ರಷ್ಟು ಅಧಿಕಗೊಂಡಿದೆ.

Prices of winter vegetables rise as Fog, smog hit supplies

ಶೀತಗಾಳಿಗೆ ತರಕಾರಿ ಇಳುವರಿ ಕುಸಿದಿದೆ. ಇದು ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಹುರುಳಿಕಾಯಿ, ಬೆಂಡಿಕಾಯಿ, ಹೀರೆಕಾಯಿ, ಸಗಟು 15-25 ರೂ ಇತ್ತು, ಈಗ 30-40 ರೂ ಆಗಿದೆ. ಟೊಮೆಟೋ ಸಗಟು 16-18 ರೂ ಇದ್ದಿದ್ದು 25 ರೂ ದಾಟಿದೆ. ಹಿಂದಿನ ಬೆಲೆಗೆ ಹೋಲಿಸಿದರೆ ಶೇ.30ರಷ್ಟು ತರಕರಿ ಬೆಲೆ ಅಧಿಕವಾಗಿದೆ.

ಗಣೇಶ ಚತುರ್ಥಿ: ಹೂವು-ಹಣ್ಣು ಪೆಟ್ರೋಲ್ ನಷ್ಟೇ ದುಬಾರಿ ಗಣೇಶ ಚತುರ್ಥಿ: ಹೂವು-ಹಣ್ಣು ಪೆಟ್ರೋಲ್ ನಷ್ಟೇ ದುಬಾರಿ

ಇನ್ನು ಸಂಕ್ರಾಂತಿ ಸಮೀಪಿಸುತ್ತಿದ್ದು, ಹೂವಿನ ಬೆಲೆಯೂ ಅಧಿಕವಾಗುವ ನಿರೀಕ್ಷೆ ಇದೆ, ಬೇಳೆ, ದಿನಸಿ ಪದಾರ್ಥಗಳು ಸ್ಥಿರವಾಗಿದೆ.

English summary
Vegetable prices in Bengaluru rocketed as the smog coupled with fog hindered their supply from other places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X