ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಜನಸ್ಪಂದನ ಕಾರ್ಯಕ್ರಮಕ್ಕೆ ಸೆ. 10ಕ್ಕೆ ಸಂಪೂರ್ಣ ಸಜ್ಜು

|
Google Oneindia Kannada News

ದೊಡ್ಡಬಳ್ಳಾಪುರ, ಸೆಪ್ಟೆಂಬರ್ 09: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲೂ ದೊಡ್ಡಬಳ್ಳಾಪುರ ಸಜ್ಜಾಗಿ ನಿಂತಿದೆ. ಸೆಪ್ಟೆಂಬರ್ 10ಕ್ಕೆ ನಡೆಯಲಿರುವ ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಮತ್ತು ರಾಜ್ಯ ನಾಯಕ ಜೊತೆೆ ಲಕ್ಷಾಂತರ ಕಾರ್ಯಕರ್ತರು ಸೇರುವ ನಿರೀಕ್ಷೆಯನ್ನು ಹೊಂದಿದ್ದು ಸಕಲ ರೀತಿಯಲ್ಲೂ ಸಜ್ಜಾಗಿದೆ. ಆರೋಗ್ಯ ಸಚಿವ ಕೆ. ಸುಧಾಕರ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಮುಖ್ಯರಸ್ತೆಗಳೆಲ್ಲಾ ಕೇಸರಿ ಕಲರವ ಪ್ರಾರಂಭವಾಗಿದೆ. ದೊಡ್ಡಬಳ್ಳಾಪುರ ಎಲ್ಲೆಡೆ ಬಿಜೆಪಿಯ ಬ್ಯಾನರ್, ಶುಭಾಯಶಗಳ ಬಂಟಿಂಗ್ಸ್ , ಫ್ಲೆಕ್ಸ್‌ಗಳು ರಾರಾಜಿಸುತ್ತಿದೆ.

ಸಾರ್ಥಕ ಸೇವೆ ಸಬಲೀಕರಣ ಎಂಬ ಫ್ಲೆಕ್ಸ್ ಎಲ್ಲೆಲ್ಲೂ ರಾರಾಜಿಸುತ್ತಿದೆ. ವೇದಿಕೆಯ ಪಕ್ಕದಲ್ಲಿ ದಿಲ್ಲಿ ನಾಯಕರು ಮತ್ತು ರಾಜ್ಯ ನಾಯಕರ ಕಟೌಟ್‌ ಕೂಡ ನಿಲ್ಲಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರೈಸಿದ್ದರೆ. ಯಡಿಯೂರಪ್ಪ ಎರಡು ವರ್ಷ ಆಡಳಿತವನ್ನು ನಡೆಸಿದ್ದರು. ಒಟ್ಟಾರೆ ಬಿಜೆಪಿಯ ಮೂರು ವರ್ಷದ ಸಾಧನೆಯನ್ನು ತೆರೆದಿಡುವ ನಿಟ್ಟಿನಲ್ಲಿ ಬಿಜೆಪಿ ಬೃಹತ್ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದ್ದು. ಬಿಜೆಪಿ ಹೈಕಮಾಂಡ್ ಸಹ ವಾರ್ಷಿಕೋತ್ಸವ, ಜನಸ್ಪಂದನ ಕಾರ್ಯಕ್ರಮ ಭಾಗಿಯಾಗಲಿದ್ದು. ಲಕ್ಷಾಂತರ ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿಯನ್ನು ಕೆಲವು ಸಚಿವರಿಗೆ ಹೊರಿಸಲಾಗಿದೆ.

ಸಾಲಮನ್ನಾ:ಮೊದಲ ಋಣಮುಕ್ತ ಪತ್ರ ಪಡೆಯಲಿದ್ದಾರೆ ದೊಡ್ಡಬಳ್ಳಾಪುರ ರೈತರುಸಾಲಮನ್ನಾ:ಮೊದಲ ಋಣಮುಕ್ತ ಪತ್ರ ಪಡೆಯಲಿದ್ದಾರೆ ದೊಡ್ಡಬಳ್ಳಾಪುರ ರೈತರು

ದೊಡ್ಡಬಳ್ಳಾಪುರದ ಜನಸ್ಪಂದನ

ದೊಡ್ಡಬಳ್ಳಾಪುರದ ಜನಸ್ಪಂದನ

ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನತೆ ಕಂಗಾಲಾಗಿದ್ದಾರೆ. ಕೆರೆ, ನದಿಗಳು ಉಕ್ಕಿ ಹರಿಯುತ್ತಿದೆ. ರಾಜ್ಯದ ಹಲವೆಡೆ ಜಲಕಂಟಕ ಎದುರಾಗಿದೆ. ದೊಡ್ಡಬಳ್ಳಾಪುರದ ಕೂಗಳತೆಯ ದೂರದಲ್ಲಿರುವ ಬೆಂಗಳೂರಿನಲ್ಲಿ ಜಲಧಾರೆಯಿಂದ ಜನ ರೋಸಿಹೋಗಿದ್ದಾರೆ. ಇವೆಲ್ಲದರ ನಡುವೆ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆಯುವ ಸಮಾವೇಶವನ್ನು ಚುನಾವಣಾ ಪೂರ್ವ ತಯಾರಿ ಸಮಾವೇಶ ಅಂತಲೇ ಬಿಂಬಿತವಾಗಿರುವುದರಿಂದ ಸಾರ್ಥಕ ಸಮಾವೇಶವನ್ನಾಗಿಸಲು ಬೊಮ್ಮಾಯಿ ಸಂಪುಟದ ಸಚಿವರು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ಪ್ರವೀಣ್ ನೆಟ್ಟಾರು, ಉಮೇಶ್ ಕತ್ತಿ ಸಾವಿನಿಂದ ರದ್ದು

ಪ್ರವೀಣ್ ನೆಟ್ಟಾರು, ಉಮೇಶ್ ಕತ್ತಿ ಸಾವಿನಿಂದ ರದ್ದು

ದೊಡ್ಡಬಳ್ಳಾಪುರದ ತಮ್ಮಶೆಟ್ಟಿಹಳ್ಳಿ ಬಳಿ ಜನಸ್ಪಂದನ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದ್ದು, ಬಿಜೆಪಿ ರಾಜ್ಯ ಸರ್ಕಾರದ ಮೂರು ವರ್ಷ ಮತ್ತು ಬಸವರಾಜು ಬೊಮ್ಮಾಯಿಯವರ ಒಂದು ವರ್ಷದ ಸರ್ಕಾರದ ಸಾಧನೆಗಾಗಿ ಜನಸ್ಪಂದನ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ, ಜುಲೈ 28 ರಂದು ನಡೆಯ ಬೇಕಿದ್ದ ಜನೋತ್ಸವ ಕಾರ್ಯಕ್ರಮ ಪ್ರವೀಣ್ ನೆಟ್ಟಾರು ಹತ್ಯೆಯಿಂದು ಮುಂದೂಡಿಕೆಯಾಗಿತ್ತು, ಆಗಸ್ಟ್ 28 ರಂದು ಗಣೇಶೋತ್ಸವ ಹಿನ್ನೆಲೆ ಮತ್ತೆ ಮುಂದೂಡಲಾಗಿತ್ತು, ಮೂರನೇ ಬಾರಿ ಸೆಪ್ಟೆಂಬರ್ 8 ರಂದು ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು, ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ಮತ್ತೆ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿತ್ತು

ಪದೇ ಪದೇ ಮುಂದೂಡಿಕೆಗೆ ದೇವವ ಮೊರೆ

ಪದೇ ಪದೇ ಮುಂದೂಡಿಕೆಗೆ ದೇವವ ಮೊರೆ

ಪದೇ ಪದೇ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆಯಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಮುಜುಗರ ತಂದಿತ್ತು, ಇದೀಗ ಜನಸ್ಪಂದನ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೇ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಗಣ ಹೋಮ ಹಾಗೂ ವಿಷ್ಣು ಹೋಮ ಮಾಡಲಾಯಿತು. ಹತ್ತು ಮಂದಿ ಆಗಮಿಕರ ನೇತೃತ್ವದಲ್ಲಿ ಹೋಮ ಹವನ ಜರುಗಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ರೇಷ್ಮೆ ಮಾರಾಟ‌ ಮಂಡಳಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಹಾಗೂ ಪಕ್ಷದ ಮುಖಂಡರು ಹೋಮದಲ್ಲಿ ಪಾಲ್ಗೊಂಡರು. ಆ ಮೂಲಕ ದೇವರಲ್ಲಿ ಕಾರ್ಯಕ್ರಮದ ಯಶಸ್ವಿಗೆ ಬೇಡಿಕೊಳ್ಳಲಾಯಿತು.

ಜನರನ್ನು ಕರೆತರುವ ಜವಾಬ್ದಾರಿ ಶಾಸಕ ಸಚಿವರಿಗೆ

ದೊಡ್ಡಬಳ್ಳಾಪುರದಲ್ಲಿನ ಜನಸ್ಪಂದನ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಜನ ಸೇರುವ ನಿರೀಕ್ಷೆಯಿದೆ. ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಯಲಹಂಕ, ದೇವನಹಳ್ಳಿ, ಹೊಸಕೋಟೆಯಿಂದ ಹೆಚ್ಚಿನ ಜನರು ಸೇರಿಸು ಜವಾಬ್ದಾರಿಯನ್ನು ಸಚಿವರು ಮತ್ತು ಶಾಸಕರ ಹೆಗಲಿಗೆ ಹೊರಿಸಲಾಗಿದ್ದು ಕಾರ್ಯಕ್ರಮವನ್ನು ಶತಾಯಗತಾಯ ಯಶಸ್ವಿಗೊಳಿಸಲು ಶ್ರಮವನ್ನು ಹಾಕಲಾಗುತ್ತಿದೆ.

English summary
Doddaballapur is all set for BJP's Janaspanda programme. BJP high command leaders and state leader along with Lakhs of workers are expected to attend the public meeting on September 10 and is all geared up, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X