ಮೆಜಿಸ್ಟಿಕ್ ಲಾಡ್ಜಿನಲ್ಲಿ ಗರ್ಭಿಣಿ ಬಿಇ ವಿದ್ಯಾರ್ಥಿನಿ ಸೂಸೈಡ್

ಒಡಿಶಾ ಮೂಲದ ಬಿಇ ವಿದ್ಯಾರ್ಥಿನಿ ಮೈಥಿಲಿ ಮಧುಸ್ಮಿತಾ ಸಾಹು ಮೃತಪಟ್ಟ ದುರ್ದೈವಿ. ಈಕೆಗೆ 25 ವರ್ಷ ವಯಸ್ಸಾಗಿತ್ತು. ಜತೆಗೆ ಈಕೆಯ ಗರ್ಭದಲ್ಲಿ ಒಂದು ತಿಂಗಳ ಮತ್ತೊಂದು ಜೀವವೂ ಟಿಸಿಲೊಡೆದಿತ್ತು. ಮೈಥಿಲಿ ಸ್ಮಿತಾ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.
ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗವನ್ನರಿಸಿ, ಸಂದರ್ಶನಕ್ಕೆಂದು ಮೈಥಿಲಿ ಬೆಂಗಳೂರಿಗೆ ಮಂಗಳವಾರ ಬಂದಿದ್ದರು. ಸಂದರ್ಶನ ಮುಗಿಸಿಕೊಂಡು ಬಂದು ಸಂಜೆ ಲಾಡ್ಜ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ ಲಾಡ್ಜ್ ಗೆ ಬಂದಿದ್ದ ಮೈಥಿಲಿ ಬುಧವಾರ ಸಂಜೆಯಾದರೂ ಕೊಠಡಿಯಿಂದ ಹೊರಬಂದಿರಲಿಲ್ಲ. ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದಾಗ ಅವರು ಬಂದು ಬಾಗಿಲು ತೆರೆದು ನೋಡಿದಾಗ ಮೈಥಿಲಿ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.
'ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಮೈಥಿಲಿ ಗರ್ಭಿಣಿಯಾಗಿದ್ದರು. ಆ ಸಂಬಂಧ ವೈದ್ಯಕೀಯ ವರದಿಯೊಂದು ಮೈಥಿಲಿ ಬ್ಯಾಗ್ ನಲ್ಲಿ ಪತ್ತೆಯಾಗಿದೆ. ಜತೆಗೆ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಸಹ ಕೊಠಡಿಯಲ್ಲಿತ್ತು' ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಆತ್ಮಹತ್ಯೆ ಪತ್ರ ದೊರೆತಿಲ್ಲ. ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications