ಪವಿತ್ರಾ ಗೌಡ & ನಟ ದರ್ಶನ್ ಹಿಸ್ಟರಿ ಬಿಚ್ಚಿಟ್ಟ ಪ್ರಶಾಂತ್ ಸಂಬರಗಿ
ಬೆಂಗಳೂರು, ಜೂನ್ 19: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-೧ ಆರೋಪಿಯಾಗಿ ಪೊಲೀಸರ ಬಂಧನದಲ್ಲಿರುವ ಪವಿತ್ರಾ ಗೌಡ ಬಗ್ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಮಾತನಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ಸಂಬರಗಿ, ಪವಿತ್ರಾ ಗೌಡ ಎಂಬ ಹೆಸರು ನಮಗೆ ಕೇಳಿ ಬಂದಿದ್ದು, ಇನ್ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಸುದ್ದಿ ಪತ್ರಿಕೆಯಲ್ಲಿ ಓದಿ ಅಷ್ಟೇ. ಯಾವಾಗ ಹತ್ತು ವರ್ಷದಿಂದ ಜೊತೆಗಿದ್ದೇವೆ ಎನ್ನುವ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಯಿತೂ, ಯಾವಾಗ ದರ್ಶನ್ ನಾನು ಇನ್ನೊಂದು ಮಗು ಮಾಡಿಕೊಳ್ಳುತ್ತೇನೆ ನೀನ್ಯಾರು ತಡೆಯುವುದಕ್ಕೆ ಎನ್ನುವ ವಿಜಯಲಕ್ಷ್ಮಿಗೆ ಬೈದ ಆಡಿಯೋ ವೈರಲ್ ಆಯಿತೋ ಆಗ ಇನ್ನೊಬ್ಬರು ಯಾರೋ ಇದ್ದಾರೆ ಎನ್ನುವುದು ಗೊತ್ತಾಯಿತು ಎಂದು ಹೇಳಿದರು.

ಇನ್ನೊಂದು ಮಗು ಮಾಡಿಕೊಳ್ಳುತ್ತೇನೆ ಎಂದು ದರ್ಶನ್ ರಾಜರೋಶವಾಗಿ ತಮ್ಮ ಫ್ಯಾಮಿಲಿಯನ್ನು ದ್ವೇಷಿಸುತ್ತಾರೋ, ಆವಾಗ ನಮಗೆ ಗೊತ್ತಾಗಿದ್ದು ಇನ್ನೊಂದು ಯಾರು ಹೆಂಗಸು ಇದ್ದಾರೆ ಅಂತಾ. ಅವಾಗ್ಲೇ ನಮಗೆ ಪವಿತ್ರಾ ಗೌಡ ಯಾರು? ಏನು? ಎನ್ನುವುದು ಗೂಗಲ್ ಸರ್ಚ್‌ನಿಂದ ಗೊತ್ತಾಯಿತು. ಅದನ್ನು ಬಿಟ್ಟು ಆಕೆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನನಗೆ ಇರಲಿಲ್ಲ ಎಂದಿದ್ದಾರೆ.
ಇನ್ನು ದರ್ಶನ್ ವರ್ತನೆಯ ಬಗ್ಗೆ ಮಾತನಾಡಿದ ಪ್ರಶಾಂತ್ ಸಂಬರಗಿ, ನನ್ನದು ಒಂದು ಕಳಕಳಿಯ ವಿನಂತಿ ಇತ್ತು. ದರ್ಶನ್ ಅವರು ಫಸ್ಟ್ ಅರೆಸ್ಟ್ ಆದಾಗ ಅವರ ಬ್ಲಡ್ ಸ್ಯಾಂಪಲ್ ತೆಗೆದುಕೊಳ್ಳಬೇಕಾಗಿತ್ತು. ಯಾವುದಾರೂ ಬ್ಯಾನ್ ಆಗಿರುವ ಡ್ರಗ್ಸ್‌ನ ಪ್ರಭಾವಕ್ಕೊಳಗಾಗಿದ್ದಾರಾ ಎಂದು ತಿಳಿದುಕೊಳ್ಳಬೇಕಾಗಿತ್ತು ಎಂದರು.

ಯಾಕೆಂದರೆ ನೀವು ಅವರ ಹಿಸ್ಟರಿ ತೆಗೆದು ನೋಡಿ, ಎಲ್ಲವೂ ಆವೇಶ, ಎಲ್ಲವೂ ರೌಡಿಸಂ, ಎಲ್ಲವೂ ದಬ್ಬಾಳಿಕೆ, ಎಲ್ಲಾ ತರದ್ದು ದುಷ್ಟ ಮನಸ್ಥಿತಿಯಲ್ಲಿ ಆಗಿರುವಂತಹದ್ದು. ನಿರ್ದೇಶಕರದ್ದಾಗಲಿ, ನಿರ್ಮಾಪಕರದ್ದಾಗಲಿ, ಫ್ಯಾನ್ ಜೊತೆ ಫೋಟೋ ತೆಗೆದುಕೊಳ್ಳುವಾಗಲಿರಲಿ, ವೈಟರ್ ಮೇಲಿನ ಹಲ್ಲೆಯಾಗಿರಲಿ ಹಿಸ್ಟರಿನೇ ಹೇಳುತ್ತದೆ.
ಯಾವುದೋ ಒಂದು ಈತನ ಮೇಲೆ ಪ್ರಭಾವ ಬೀರುತ್ತದೆ ಅಂತಾ. ನನಗೆಲ್ಲೋ ಒಂದು ಕಡೆ ಅನುಮಾನ ಬರುತ್ತಿದೆ. ಇವರು ಯಾವುದೋ ಒಂದರ ಪ್ರಭಾವಕೊಳ್ಳಗಾಗಿದ್ದಾರಾ ಎನ್ನುವ ಅನುಮಾನ ನನಗೆ ಇದೆ ಎಂದರು.











Click it and Unblock the Notifications