Namma metro: ನಮ್ಮ ಮೆಟ್ರೋದಲ್ಲಿ ರೀಲ್ಸ್‌ ಮಾಡಲು ಹೋಗಿ ಪಜೀತಿಗೆ ಸಿಲುಕಿದ ಯುವಕ

ಬೆಂಗಳೂರು, ಅಕ್ಟೋಬರ್‌, 07: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಇತ್ತೀಚೆಗಷ್ಟೇ ನಿಯಮ ಮೀರಿ ಗೋಬಿ ಸೇವೆನೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಬಿಎಂಆರ್‌ಸಿಎಲ್‌ 500 ರೂಪಾಯು ದಂಡ ವಿಧಿಸಿತ್ತು. ಮತ್ತೇ ಇದೀಗ ಯುವಕನೊಬ್ಬ ಮೂರ್ಚೆ ರೋಗ ಬಂದಂತೆ ನಟಿಸಿ ರೀಲ್ಸ್‌ ಮಾಡಲು ಹೋಗಿ ಪಜೀತಿಗೆ ಸಿಲುಕಿರುವ ಘಟನೆ ನಡೆದಿದೆ.

ಸಮಾನ್ಯವಾಗಿ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಅಂತಹವರಿಗೆ ಸಹಾಯ ಮಾಡುವ ಮಂದಿ ತುಂಬಾ ಜನ ಇರುತ್ತಾರೆ. ಇನ್ನೂ ಕೆಲವರು ಇಂತಹ ಘಟನೆಗಳನ್ನು ನೋಡಿ ಭಯಭೀತರಾಗಿಬಿಡುತ್ತಾರೆ. ಹಾಗೆಯೇ ಯುವಕನೊಬ್ಬ ನಮ್ಮ ಮೆಟ್ರೋದಲ್ಲಿ ಪ್ರಾಂಕ್ ಮಾಡಲು ಹೋದಾಗ ತುಂಬಾ ಜನ ಹೆದರಿದ್ದಾರೆ. ಆದರೆ ಇವನು ಹೀಗೆ ಮಾಡಿದ್ದು ರೀಲ್ಸ್‌ಗೋಸ್ಕರ ಎಂದು ಗೊತ್ತಾದ ತಕ್ಷಣವೇ ಪ್ರಯಾಣಿಕರು ಗರಂ ಆಗಿದ್ದಾರೆ.

Prank vide: Complaint File against young man who pranked in bengalurus namma metro

ವಿಜಯನಗರದಿಂದ ಮೆಜೆಸ್ಟಿಕ್​ ಕಡೆಗೆ ಬರುವ ನೇರಳೆ ಬಣ್ಣದ ಮೆಟ್ರೋ ರೈಲಿನಲ್ಲಿ ಯೂಟ್ಯೂಬರ್ ಹುಚ್ಚಾಟಕ್ಕೆ ಪ್ರಯಾಣಿಕರು ಗಾಬರಿಗೊಂಡಿದ್ದರು. ಅಲ್ಲದೆ ಎಸ್ಕಲೇಟರ್ ಮೇಲೆಯೂ ಮೂರ್ಚೆ ರೋಗ ಬಂದಂತೆ ನಟಿಸಿದ್ದಾನೆ. ಇದೀಗ ಹುಚ್ಚಾಟದ ಈ ವೀಡಿಯೋ ಬಗ್ಗೆ ಸಾಮಾಜಿಕ ಜಾಲಾತಣದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಇನ್ನು ಪ್ರಾಂಕ್ ಮಾಡಿದ ಯುವಕನ ವಿಳಾಸವನ್ನು ಪತ್ತೆ ಹಚ್ಚಿದ BMRCL ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಂಕ್ ಪ್ರಜ್ಜು ಮೇಲೆ ದೂರು ದಾಖಲಿಸಿ 500 ರೂಪಾಯಿ ದಂಡ ವಿಧಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಹಾಗೆಯೇ ಇತ್ತೀಚೆಗಷ್ಟೇ ಮತ್ತೊಂದು ಪ್ರಕರಣದಲ್ಲಿ ನಮ್ಮ ಮೆಟ್ರೋದಲ್ಲಿ ನಿಯಮ ಮೀರಿ ಗೋಬಿ ತಿಂದ ಪ್ರಯಾಣಿಕನಿಗೆ BMRCL 500 ರೂಪಾಯಿ ದಂಡ ವಿಧಿಸಿ, ಇನ್ಮುಂದೆ ಮೆಟ್ರೋದಲ್ಲಿ ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ. ಹಾಗೆಯೇ ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಒಂದು ಪ್ರಕರಣ ನಡೆದಿದ್ದು, ಮೆಟ್ರೋ ನಿಲ್ದಾಣಕ್ಕೆ ನುಸುಳಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೈಪ್ರಸ್ ಮೂಲದ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ವಿರುದ್ಧ ಬಿಎಂಆರ್​ಸಿಎಲ್ ಪ್ರಕರಣ ದಾಖಲು ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+