ಬೆಂಗಳೂರು ಉತ್ತರ ಭಾನುವಾರ ಸಂಪೂರ್ಣ ಕತ್ತಲುಮಯ

ಬೆಂಗಳೂರು, ಅ, 17 : ಬೆಸ್ಕಾಂಗೆ ಒಳಪಡುವ ಪೀಣ್ಯ ವಿದ್ಯುತ್ ಸ್ವೀಕರಣಾ ಕೇಂದ್ರ ವ್ಯಾಪ್ತಿಯಲ್ಲಿ ಲೈನ್ ದುರಸ್ತಿ ಕಾರ್ಯ ಅಕ್ಟೋಬರ್ 18ರ ಭಾನುವಾರ ನಡೆಯಲಿದೆ. ಆದ ಕಾರಣ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಬೆಂಗಳೂರು ನಗರದ 20% ಭಾಗದಲ್ಲಿ ವಿದ್ಯುತ್ ಕಡಿತಗೊಳಲಿದೆ.

ಜೋಗದಿಂದ ಬೆಂಗಳೂರಿಗೆ ವಿದ್ಯುತ್ ಸರಬರಾಜು ಮಾಡಲು ಪೀಣ್ಯ ವಿದ್ಯುತ್ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಬಹಳ ವರ್ಷಗಳ ಹಿಂದೆಯೇ ಮಾಡಬೇಕಾಗಿದ್ದ ದುರಸ್ತಿ ಕಾರ್ಯವನ್ನು ಬೆಸ್ಕಾಂ ಅಧಿಕಾರಿಗಳು ಇದೀಗ ಕೈಗೆತ್ತಿಕೊಂಡಿದ್ದಾರೆ. ಆದ್ದರಿಂದ ಬೆಂಗಳೂರಿನ ಉತ್ತರಭಾಗದ ಕೆಲವೆಡೆ ವಿದ್ಯುತ್ ವ್ಯತ್ಯಯಗೊಳಿಸಲು ಬೆಸ್ಕಾಂ ನಿರ್ಣಯ ತೆಗೆದುಕೊಂಡಿದೆ. [ರಾಜ್ಯದ ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?]

Power supply is no more in Bengaluru North side, on Sunday

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ :

ಅಬ್ಬಿಗೆರೆ ವಿದ್ಯುತ್ ವಿತರಣಾ ಉಪ ಕೇಂದ್ರ, ಬ್ರಿಗೇಡ್ ಗೇಟ್ ವೇ, ಬೃಂದಾವನ, ಗೋಕುಲ, ಕೆ.ಎಚ್ ಬಿ, ಎಂಇಐ, ಮಹಾಲಕ್ಷ್ಮೀ ಲೇಔಟ್ , ನಂದಿನಿ ಲೇಔಟ್, ನೆಲಗದರನಹಳ್ಳಿ, ಪ್ಲಾಟಿನಂ ಸಿಟಿ, ಎಸ್ ಆರ್ ಎಸ್ ಪೀಣ್ಯ, ಸಹಕಾರ ನಗರ, ಸೋಲದೇವನಹಳ್ಳಿ, ವಿಡಿಯಾ, ವೆಲ್ ಕಾಸ್ಟ್, ಯಲಹಂಕ ಸೇರಿ 16 ವಿದ್ಯುತ್ ವಿತರಣಾ ಉಪಕೇಂದ್ರಗಳಲ್ಲಿ ಕತ್ತಲು ಆವರಿಸಲಿದೆ.[ಬೆಳಗಾವಿಯ ಲೈನ್ ಮನ್ ಸಮೀರಗೆ ಲಕ್ಷ ರು. ಬಹುಮಾನ]

ಮಾರುತಿ ನಗರ, ಚಿಕ್ಕಬೊಮ್ಮಸಂದ್ರ, ಎಲ್ ಆಂಡ್ ಟಿ ಕೈಗಾರಿಕಾ ಪ್ರದೇಶ, ಎನ್ ಸಿ ಬಿಎಸ್, ಕಟ್ಟಿಗೇನಹಳ್ಳಿ, ದ್ವಾರಕಪುರ, ಬಿಇಎಲ್ ಲೇಔಟ್, ಮದರ್ ಡೇರಿ, ಕೋಗಿಲು, ಮಥುರಾ ಲೇಔಟ್ , ನ್ಯಾಯಾಂಗ ಬಡಾವಣೆ, ಐಎಎಸ್ ಬಡಾವಣೆ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ, ಅಲ್ಲಾಳಸಂದ್ರ ವ್ಯಾಪ್ತಿ, ಐಎಫ್ ಎಸ್ , ಜಿಕೆವಿಕೆ, ವೆಂಕಟಾಲ, ವೀಲ್ ಅಂಡ್ ಎಕ್ಸಿಲ್ ಹಾಗೂ ಎಸ್ಕಾರ್ಟ್ ಒನ್ ಮತ್ತು ಇಎಚ್ ಟಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+