Power Cut: ಬೆಂಗಳೂರಿನಲ್ಲಿ ಅ.19ರಂದು ವಿದ್ಯುತ್ ಕಡಿತ- ನಿಮ್ಮ ಏರಿಯಾ ಇರಬಹುದು..
ಬೆಂಗಳೂರು ಅಕ್ಟೋಬರ್ 18: ಬೆಂಗಳೂರಿನಲ್ಲಿ ಅಕ್ಟೋಬರ್ 19ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದ್ದು ಜನ ಸಹಕರಿಸುವಂತೆ ಬೆಸ್ಕಾಂ ತಿಳಿಸಿದೆ. ಹಾಗಾದರೆ ಯಾವ ಸ್ಥಳಗಳಲ್ಲಿ ವಿದ್ಯುತ್ ಇರುವುದಿಲ್ಲ ಎನ್ನುವ ಮಾಹಿತಿ ಇಲ್ಲಿದೆ.
ಅಕ್ಟೋಬರ್ 19 ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ಡಾ ರಾಜಕುಮಾರ್ ರಸ್ತೆ, ಸೆಂಟ್ ತೆರೆಸಾ ಆಸ್ಪತ್ರೆ, ಆರ್‌ಪಿಸಿ ಲೇಔಟ್, ನೇತಾಜಿ ಲೇಔಟ್, ಅತ್ತಿಗುಪ್ಪೆ, ಮೌನೇಶ್ವರ ಬಡಾವಣೆ, ಜಯನಗರ ಮತ್ತು ಸುತ್ತಲ ಪ್ರದೇಶಗಳು, ಇಗೂರು, ಇಗೂರು ಗೋಲರಹಟ್ಟಿ, ಲಿಂಗದಹಳ್ಳಿ, ಒಡ್ಡಿನಹಳ್ಳಿ, ದೊಡ್ಡೇರಿ, ದೊಡ್ಡವೀರನಹಳ್ಳಿ, ರಂಗನಪಾಳ್ಯ, ಅಪ್ಪಿನಾಯಕಾನಾಹಳ್ಳಿ, ಲಕ್ಕನಹಳ್ಳಿ, ಪಲಿಹಟ್ಟಿ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ಟೋಬರ್ 19ರಂದು ಪವರ್ ಸಪ್ಲೈ ಇರುವುದಿಲ್ಲ.

ಹಾಗೇ ಕುಂತೆಗೌಡನಹಳ್ಳಿ, ಯಲದಬಾಗಿ, ಹಾವಿನಹಾಲು, ಕತವೀರನಹಳ್ಳಿ, ನವಣೆಬೇರನಹಳ್ಳಿ, ಅಂಜೈನಪಾಳ್ಯ, ಎಲ್‌ಹೆಚ್ ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬೈದರಹಳ್ಳಿ, ದಸರಾಹಳ್ಳಿ, ವೆಂಕಟಪುರ, ಸಲುಪರಹಳ್ಳಿ, ಸೀಬೆ ಅಗ್ರಹಾರ, ದೊಡ್ಡಸೀಬೆ, ದುರ್ಗದ ಹಳ್ಳಿ, ತಿಪ್ಪನಹಳ್ಳಿ, ಬೋರಸಂದ್ರ, ಕಲ್ಲಶೆಟ್ಟಿಹಳ್ಳಿ, ಎತ್ತಪ್ಪನಹಳ್ಳಿ, ಕಲಜ್ಜಿರೊಪ್ಪ, ಸಿಬೈನಪಾಳ್ಯ, ಬಸರಿಹಳ್ಳಿ, ಹುಂಜನಾಳ್, ಬೈದರಹಳ್ಳಿಯಲ್ಲಿ ಗುರುವಾರ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.












Click it and Unblock the Notifications