Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಭಾನುವಾರ ಮತ್ತು ಸೋಮವಾರ ಕರೆಂಟ್‌ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜೂನ್‌ 29, 30ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಜೂನ್‌ 29 ಮತ್ತು 30ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Power Cut in Bengaluru s These Areas on June 29 And 30 Know details

ಪೀಣ್ಯ ವಿಭಾಗದ 66/11 ಕೆವಿ ನೆಲಗೆದರನಹಳ್ಳಿ, 66/11 ಕೆವಿ ಕಟ್ಟಿಗೆಹಳ್ಳಿ, 220/66/11 ಕೆವಿ ಎಸ್.ಆರ್.ಎಸ್. ಪೀಣ್ಯ ಉಪಕೇಂದ್ರ ಮತ್ತು 66/11 ಕೆ.ವಿ ಎ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಜೂನ್‌ 29ರ ಭಾನುವಾರ ಬೆಳಗ್ಗೆ10ರಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ,

ಜೂನ್‌ 29ರಂದು ಎಲ್ಲೆಲ್ಲಿ ಕರೆಂಟ್‌ ಕಟ್‌?: ಪೀಣ್ಯ ವಿಭಾಗದ ಕೆಂಪಯ್ಯ ಗಾರ್ಡನ್, ಏ ಟೈಪ್ ಶೆಡ್ ತಿಗಳರಪಾಳ್ಯ ಮುಖ್ತರಸ್ತೆ, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನೆಲಗೆದರನಹಳ್ಳಿ, ಎಚ್ಎಂಟಿ ಲೇಔಟ್, ಶಿವಪುರ, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಲಮಾರ್ ಲೇಔಟ್, ವಿನಾಯಕ ನಗರ, ಜಾಲಹಳ್ಳಿ ಕ್ರಾಸ್, ಶೋಭಾ ಅಪಾರ್ಟ್‌ಮೆಂಟ್.

ಅಮರಾವತಿ ಲೇಔಟ್, ಕೆಎಪಿಎಲ್, ಕರ್ನಾಟಕ ಪ್ರೈವೇಟ್ ಲಿಮಿಟೆಡ್, ರುಕ್ಮಿಣಿ ನಗರ,
ಪೀಣ್ಯ 10ನೇ ಮುಖ್ಯ ರಸ್ತೆ, 11ನೇ ಮುಖ್ಯರಸ್ತೆ, ಉಡುಪಿ ಹೋಟೆಲ್, ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮಿದೇವಿ ನಗರ, ಲಗ್ಗೆರೆ ಹಳೆ ಗ್ರಾಮ, ಲವಕುಶ ನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6, 7, 8 ಹಾಗೂ 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿವಿಎಸ್ ಕ್ರಾಸ್ ರಸ್ತೆ.

ಇಸ್ರೋ 1ನೇ ಹಂತದ ಪಿಐಎ ಪ್ರದೇಶ, ಯಶವಂತಪುರ, ಫಿಲಿಪ್ಸ್ ಕಂಪನಿ, ದ್ವಾರಕಾ ನಗರ, ಬಾಬಾನಗರ, ಕಟ್ಟಿಗೇನಹಳ್ಳಿ, ಬಾಗಲೂರು ಕ್ರಾಸ್, ಬಾಗಲೂರು ಮುಖ್ಯ ರಸ್ತೆ, ಮಣಿಪಾಲ್ ಕಾಲೇಜು, ಬಿಎಸ್‌ಫ್‌, ಪಿಡಿಎಂಎಸ್‌, ವಿನಾಯಕ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಶೇಷಾದ್ರಿ ರಸ್ತೆ, ಕುರುಬರ ಸಂಘ ವೃತ್ತ, 1ನೇ ಮುಖ್ಯ ರಸ್ತೆ ಗಾಂಧಿ ನಗರ ಮತ್ತು 1ನೇ ಕ್ರಾಸ್, ಮತ್ತು 2ನೇ ಕ್ರಾಸ್‌ನ ಹಲವೆಡೆ, ಕ್ರೆಸೆಂಟ್ ರಸ್ತೆ, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ವೆಸ್ಟ್ ಎಂಡ್ ಹೋಟೆಲ್, ಕರ್ನಾಟಕ ವಿದ್ಯುತ್ ನಿಗಮ, ಫೇರ್ ಫೀಲ್ಡ್ ಲೇಔಟ್, ಎಲ್ಎಲ್ಆರ್ ಬಿಡಬ್ಲ್ಯೂಎಸ್ಎಸ್‌ಬಿ. ಶಿವಾನಂದ ಪಾರ್ಕ್‌, ಶೇಷಾದ್ರಿಪುರಂ, ವಿನಾಯಕ ವೃತ್ತ ಇಂಧನ ಸಚಿವರು ಮತ್ತು ಗೃಹ ಮಂತ್ರಿಗಳ ವಸತಿ ನಿಲಯಗಳು, ಕುಮಾರ ಪಾರ್ಕ್‌, ಕಾವೇರಿ ಭವನ.

ಕೆಎಚ್‌ಬಿ, ಕಾಂದಾಯ ಭವನ, ಗಾಂಧಿ ನಗರದಲ್ಲಿನ ಸಿನಿಮಾ ಥಿಯೇಟರ್‌ಗಳು, ಟ್ಯಾಂಕ್ ಬಂಡ್ ರಸ್ತೆ, ಕೆಜಿ ರಸ್ತೆಯ ಒಂದು ಭಾಗ, ಆನಂದ ರಾವ್ ವೃತ್ತದಲ್ಲಿನ ಕೆಪಿಟಿಸಿಎಲ್ ಕಚೇರಿಗಳು, ರೇಸ್ ಕೋರ್ಸ್, ವಸಂತನಗರದ ಮುಖ್ಯ ಕಾರ್ಯದರ್ಶಿ ನಿವಾಸ ಮತ್ತು ಅವಿನಾಶ್ ಪೆಟ್ರೋಲ್ ಬಂಕ್ ಪ್ರದೇಶ ಮತ್ತು ಪಿಡಬ್ಲ್ಯೂಡಿ ಕಚೇರಿ ಮತ್ತು ಪೊಲೀಸ್ ಕ್ವಾಟ್ರರ್ಸ್‌ ಪ್ರದೇಶ.

ಬ್ರಿಗೇಡ್ ಪ್ಲಾಜಾ, ಶೇಷಾದ್ರಿ ರಸ್ತೆ, ಆನಂದ ರಾವ್ ವೃತ್ತ ಪ್ರದೇಶ, ಚಾಲುಕ್ಯ ವೃತ್ತ, ಬಿಡಬ್ಲ್ಯೂಎಸ್ಎಸ್‌ಬಿ ವಾಟರ್ ಪಂಪ್, ಹೈ ಗ್ರೌಂಡ್ಸ್, ವಿಠ್ಠಲ್ ಮಲ್ಯ ರಸ್ತೆ, ಮಂತ್ರಿ ಮಾಲ್, ಮಂತ್ರಿ ಗ್ರೀನ್ಸ್ ಅಪಾರ್ಟ್‌ಮೆಂಟ್, ಅಪೋಲೋ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಿದೆ.

ಸೋಮವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: 66/11 ಕೆ.ವಿ ಪ್ರೆಸ್ಟೀಜ್ ಫಾಲ್ಕನ್ ಸಿಟಿ, ಜಯನಗರ ವಿಭಾಗ ವ್ಯಾಪ್ತಿಯಲ್ಲಿ ಜೂನ್‌ 30ರ ಸೋಮವಾರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಫೋರಮ್ ಮಾಲ್, ಪ್ರೇಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜ್ಯೋತಿ ಲೇಔಟ್, ಗಂಗಪತಿಪುರ, ಸುಪ್ರಜಾ ನಗರ, ಜೆಎಸ್‌ಎಸ್‌ ಶಾಲೆ, ಜರಗನಹಳ್ಳಿ ಪಾರ್ಕ್, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ಶಾಂತಿ ಸಾ ಮಿಲ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗಾರ್ಜುನ ಪ್ರೀಮಿಯರ್ ಅಪಾರ್ಟ್‌ಮೇಂಟ್, ಶ್ರೀನಿಧಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ ಕೆಲವೆಡೆ ಇದಕ್ಕೂ ಮೀರಿ ದಿನದಲ್ಲಿ ಹಲವು ಬಾರಿ ಕರೆಂಟ್‌ ತೆಗೆಯಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+