Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜೂನ್ 18ರಂದು ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜೂನ್ 18ರಂದು ಬುಧವಾರ ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಜೂನ್ 18ರ ಬುಧವಾರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಲಾಗಿದೆ.

ಜೂನ್ 18ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ: ಹಿಂದೂ ಸ್ಮಶಾನ ಪ್ರದೇಶ, ಕನ್ನೂರಹಳ್ಳಿ ರಸ್ತೆ, ಸೋಮಸುಂದರ್ ಲೇಔಟ್, ನಿಸರ್ಗ ಲೇಔಟ್, ಅನ್ನಪೂರ್ಣೇಶ್ವರಿ ನಗರ, ಮಿಲನ್ ಕಲ್ಯಾಣ ಮಂಟಪ, ಕನ್ನೂರಹಳ್ಳಿ ಗಂಗಲು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿದೆ.
ಜೂನ್ 17ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ: ಮಂಗಳವಾರ 66/11 ಕೆವಿ ಹೊಸಕೋಟೆ ವಿದ್ಯುತ್ ಉಪಕೇಂದ್ರದ ಹಿಂಭಾಗ ತುರ್ತುನಿರ್ವಹಣಾ ಕಾಮಗಾರಿ ಹಿನ್ನೆಲೆ ಹಲವಯ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ವಿದ್ಯುತ್ ವ್ಯತ್ಯಯ ಮಾಡಲಾಗಿದೆ. ಇದು ಸಂಜೆ 6 ಗಂಟೆವರೆಗೆ ಮುಂದುವರೆಯಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಗಂಗಮ್ಮನಗುಂಡಿ ರಸ್ತೆ, ಕನಕ ನಗರ, ಓಂ ಶ್ರೀ ಸ್ಕೂಲ್ ಏರಿಯಾ, ಕನಕಭವನ, ಗಂಗಲು ರಸ್ತೆ, ಹೊಸಕೋಟೆ ಪದವಿ ಕಾಲೇಜು, ಕಟ್ಟನಲ್ಲೂರು, ಹುಸ್ಕೂರು, ಬೊಮ್ಮನಹಳ್ಳಿ, ಮಂಡೂರು, ಬೂದಿಗೆರೆ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೈರೈಕೆಯಲ್ಲಿ ವ್ಯತ್ಯಯ ಮಾಡಲಾಗಿದೆ ಎಂದು ತಿಳಸಿದೆ.
ದಾವಣಗರೆಯ ಹಲವೆಡೆ ವಿದ್ಯುತ್ ವ್ಯತ್ಯಯ: ದಾವಣಗೆರೆ ನಗರದ ಪಿ.ಜೆ.ಫೀಡರ್‌ನಲ್ಲಿ ತುರ್ತು ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆ ಜೂನ್ 14ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗಿತ್ತು.
ಹೊಸ ಪೊಲೀಸ್ ಕ್ವಾಟ್ರಸ್, ಅರುಣ ಚಿತ್ರಮಂದಿರ, ವಿಶ್ವಾಸ ಅಪಾರ್ಟಮೆಂಟ್, ಎಂ.ವಿ ಪಾರ್ಕ್, ರಾಮ್ & ಕೊ ಸರ್ಕಲ್, ಪಿ.ಜೆ. ಬಡಾವಣೆ, ಎಂ.ಸಿ.ಸಿ.ಎ ಬ್ಲಾಕ್ 1, 2ನೇ, 3ನೇ ಮೇನ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿತ್ತು.












Click it and Unblock the Notifications