Bengaluru Roads: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ರಸ್ತೆಗುಂಡಿ ದುರಸ್ತಿ ಆಗಿದೆ? ಇಲ್ಲಿದೆ ಪಟ್ಟಿ
ಬೆಂಗಳೂರು, ಅಕ್ಟೋಬರ್ 19: ಬೆಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ರಸ್ತೆಗುಂಡಿ ಸಮಸ್ಯೆಗೆ ಮುಕ್ತಿ ಕೊಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತನ್ನ ಕಾರ್ಯ ಮುಂದುವರಿಸಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ರಸ್ತೆಗುಂಡಿ ದುರಸ್ತಿ, ಡಾಂಬರೀಕರಣ, ಪ್ಯಾಚ್ ವರ್ಕ್ ಕೆಲಸಗಳು ನಡೆದಿವೆ. ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡುವಮತೆ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸೂಚಿಸಿದರು.
ಇಂದು ಭಾನುವಾರ ನಗರದ ಪ್ರಮುಖ ಭಾಗಗಳಲ್ಲಿ ಆಯುಕ್ತ ರಾಜೇಂದ್ರ ಚೋಳನ್ ಅವರು ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದರು. ನಗರದ ಸ್ವಚ್ಛತೆ ಮತ್ತು ಸುಂದರೀಕರಣಕ್ಕೆ ಆದ್ಯತೆ ನೀಡಬೇಕು. ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಿಎಂ ಮತ್ತು ಡಿಸಿಎಂ ಅವರ ನಿರ್ದೇಶನದ ಮೇರೆಗೆ ಬೆಂಗಳೂರು ಕಾಮಗಾರಿ ಸ್ಥಳ ತಪಾಸಣೆ ನಡೆಸಿದರು.

ಹಾಳಾದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಇಂಜಿನೀಯರಿಂಗ್ ವಿಭಾಗದ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಲಾಗುತ್ತಿದೆ. ಮೂಲಕ ಸಾರ್ವಜನಿಕರ ಸಂಚಾರಕ್ಕೆ ಉತ್ತಮ ರಸ್ತೆಗಳನ್ನಾಗಿಸಲು ಕ್ರಮ ವಹಿಸಲಾಗಿದೆ. ಕಳೆದ 2 ದಿನದಲ್ಲಿ ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ರಸ್ತೆ ಗುಂಡಿ/ಪ್ಯಾಚ್ ವರ್ಕ್ ಹಾಗೂ ಡಾಂಬರೀಕರಣ, ಸಿಸಿ ರಸ್ತೆ ಕಾಮಗಾರಿ ಎಂದು ಆಯುಕ್ತರು ತಿಳಿಸಿದರು.
ಕಳೆದ ಎರಡು ದಿನದಲ್ಲಿ ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ರಸ್ತೆ ಗುಂಡಿ/ಪ್ಯಾಚ್ ವರ್ಕ್ ಹಾಗೂ ಡಾಂಬರೀಕರಣ, ಸಿಸಿ ರಸ್ತೆ ಕಾಮಗಾರಿ ನಿರ್ವಹಿಸಲಾಗಿದೆ. ಅವುಗಳ ಪಟ್ಟಿ ಇಲ್ಲಿದೆ.
* ಹಲಸೂರು ಗೇಟ್ ಪೊಲೀಸ್ ಠಾಣೆ ಮುಂಭಾಗದ ರಸ್ತೆ
* ಮಿಷನ್ ರಸ್ತೆ
* ಕೆ.ಜಿ. ರಸ್ತೆ
* ಜಯಮಹಲ್ ರಸ್ತೆ
* ರಿಚ್ಮಂಡ್ ರಸ್ತೆ
* ಕಾಕ್ ಬರ್ನ್ ರಸ್ತೆ
* ಹೆಚ್.ಕೆ.ಪಿ. ರಸ್ತೆ,
* ಸೇಂಟ್ ಜಾನ್ಸ್ ಚರ್ಚ್ ರಸ್ತೆ
* ಅಲಿ ಆಸ್ಕರ್ ರಸ್ತೆ
* ಡಿಕೆನ್ಸನ್ ರಸ್ತೆ
* ಕುಮಾರ ಕೃಪ ರಸ್ತೆ
* ಮೈಸೂರು ರಸ್ತೆ
* ಸುಂಕೇನಹಳ್ಳಿ
* ಗವಿಪುರಂ ರಸ್ತೆ
* ಬಸವನಗುಡಿ ರಸ್ತೆ,
* ಗಾಂಧಿ ಬಜಾರ್ ಸುತ್ತಮುತ್ತಲಿನ ರಸ್ತೆ
* ಜೀವನ್ ಭೀಮಾನಗರದ ಜಿ.ಎಂ. ಪಾಳ್ಯ ಸುತ್ತಮುತ್ತಲಿನ ರಸ್ತೆಗಳಿಗೆ ಕಾಂಕ್ರೀಟ್ ಹಾಕಿ ರಸ್ತೆಗಳ ಅಭಿವೃಧ್ಧಿಗೆ ಕ್ರಮ ವಹಿಸಲಾಗಿದೆ.
ಸಾಮೂಹಿಕ ಸ್ವಚ್ಛತೆ ಆದ ಸ್ಥಳಗಳು
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದ ವತಿಯಿಂದ ಹೊಂಬೇಗೌಡ ನಗರದ ಬಿಟಿಎಸ್ ಮುಖ್ಯ ರಸ್ತೆಯ ನಾರಾಯಣಸ್ವಾಮಿ ಗಾರ್ಡನ್, ಇಂದಿರಾ ಕ್ಯಾಂಟೀನ್ ಅಕ್ಕಪಕ್ಕದಲ್ಲಿ, ಶಾಂತಿನಗರ ವಿಭಾಗದಿಂದ ಬನ್ನೇರುಘಟ್ಟ ರಸ್ತೆಯ ಬೃಹತ್ ನೀರುಗಾಲುವೆಯಿಂದ ಹೊಸೂರು ಮುಖ್ಯ ರಸ್ತೆವರೆಗೆ ಎರಡೂ ಬದಿಗಳಲ್ಲಿ, ಸಿವಿ. ರಾಮನ್ ನಗರ ವಿಭಾಗದಿಂದ ಫಿಲಿಪ್ಸ್ ಮಿಲೇನಿಯಂ ನಿಂದ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ವರೆಗೆ ಎರಡು ಬದಿಗಳಲ್ಲಿ, ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ನಿಂದ ಟಿನ್ ಫ್ಯಾಕ್ಟರಿ ವರೆಗೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು.
ರಸ್ತೆಯ ಎರಡೂ ಬದಿಗಳಲ್ಲಿನ ಹಸಿ ಕಸ, ಒಣ ಕಸ, ಪ್ಲಾಸ್ಟಿಕ್, ಅನುಪಯುಕ್ತ ಸೋಫಾ, ಫರ್ನಿಚರ್ ಗಳು ಇತ್ಯಾದಿ ತ್ಯಾಜ್ಯವನ್ನು ತೆರವುಗೊಳಿಸಿ ನಗರದಲ್ಲಿ ಸ್ವಚ್ಛತೆ ಮತ್ತು ಸುಂದರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಸಾಮೂಹಿಕ ಸ್ವಚ್ಛತೆ ಕಾರ್ಯದ ಸಂದರ್ಭದಲ್ಲಿ ರಸ್ತೆ ಬದಿಗಳಲ್ಲಿ ಪಾದಚಾರಿಗಳ ಮೇಲೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಪೆಟ್ಟಿ ಅಂಗಡಿಗಳನ್ನು, ಇನ್ನಿತರೆ ರೀತಿಯ ಒತ್ತುವರಿಗಳನ್ನು ಸ್ಥಳೀಯ ಪೊಲೀಸರ ನೆರವಿನಿಂದ ತೆರವುಗೊಳಿಸಲಾಯಿತು.












Click it and Unblock the Notifications