• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋನಲ್ ಅಗರ್‌ವಾಲ್ ನಿಗೂಢ ಸಾವು: ಆರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ

|

ಬೆಂಗಳೂರು, ಡಿಸೆಂಬರ್ 17: ಅಪಾರ್ಟ್‌ಮೆಂಟ್‌ನಿಂದ ಬಿದ್ದು ಸೋನಲ್ ಅಗರ್‌ವಾಲ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಸೆ.16ರಂದು ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಮಂತ್ರಿ ಆಲ್ಫೈನ್ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿ ಸೋನಲ್ ಅಗರ್‌ವಾಲ್ ಮೃತಪಟ್ಟಿದ್ದರು. ಫ್ಲ್ಯಾಟ್ ನಂಬರ್ 505ರಲ್ಲಿ ನೆಲೆಸಿದ್ದ ಸೋನಲ್ ಇವರು 501 ನಂಬರ್‌ನ ಫ್ಲ್ಯಾಟ್‌ ನ ಬಾಲ್ಕನಿಯಿಂದ ಬಿದ್ದಿದ್ದರು.

501ನೇ ಫ್ಲ್ಯಾಟ್ ಪ್ರಸಾದ್ ಎನ್ನುವವರಿಗೆ ಸೇರಿದ್ದಾಗಿದ್ದು ಅವರ ಪತ್ನಿ ಹಾಗೂ ಸೋನಲ್ ಸ್ನೇಹಿರತಾಗಿದ್ದರು. ಮೃತದೇಹದ ಪರಿಶೀಲನೆ ವೇಳೆ ಚಿನ್ನಾಭರಣಗಳು ಹಾಗೂ ಡಾಲರ್ ಪತ್ತೆಯಾಗಿತ್ತು.

ಬೆಂಗಳೂರಿನ ಸೋನಲ್ ಅಗರ್ ವಾಲ್ ಪ್ರಕರಣ, ಬಗೆದಷ್ಟೂ ನಿಗೂಢ

ಸೋನಲ್ ಅಗರ್ ವಾಲ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಪತಿ ಡಾ. ಅವಿನಾಶ್ ಆರೋಪ ಮಾಡಿದ್ದರು, ಆದರೆ ಸೋನಲ್ ಸ್ನೇಹಿತೆ ಮನೆಯಲ್ಲಿ ಚಿನ್ನಾಭರಣ ದೋಚುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಹಾಗಾಗಿ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೊನಾಲ್ ಸ್ನೇಹಿತೆಯ ಪತಿ ಪ್ರಸಾದ್ ಆರೋಪಿಸಿದ್ದರು.

ಕಳ್ಳತನ ಇತಿಹಾಸವೇ ಇಲ್ಲ: ಸೋನಲ್ ಅವರಿಗೆ ಪರಿಚಯಸ್ಥರ ಮನೆಯಲ್ಲಿ ಕಳ್ಳತನ ಮಾಡುವ ಅಭ್ಯಾಸ ಇತ್ತು ಎನ್ನುವುದಕ್ಕೆ ಇದುವರೆಗೆ ಪುರಾವೆ ಸಿಕ್ಕಿಲ್ಲ, ಘಟನೆಯಿಂದ ಮತ್ತು ಪ್ರಸಾದ್ ಅವರ ಪತ್ನಿಯ ಆಭರಣಗಳು ತನ್ನ ಪತ್ನಿಯ ಬಳಿ ಇದ್ದುದಕ್ಕೆ ಡಾ. ಅವಿನಾಶ್ ಕೂಡ ಆಘಾತಕ್ಕೆ ಒಳಗಾಗಿದ್ದರು. ತನಿಖೆ ಪೂರ್ಣಗೊಳ್ಳುವವರೆಗೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

English summary
RR nagar police are preparing chargesheet in the doctor wife Sonal agarwaldeath. she was fell from apartment recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X