Get Updates
Get notified of breaking news, exclusive insights, and must-see stories!

ಬೈಕ್‌ ಸವಾರರ ಜಾಗೃತಿಗಾಗಿ ಪೊಲೀಸರಿಂದ ಬೀದಿ ನಾಟಕ

ಬೆಂಗಳೂರು, ಜು.25: ಬೆಂಗಳೂರಲ್ಲಿ ಟ್ರಾಫಿಕ್‌ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಹೆಲ್ಮೆಟ್‌ ಇಲ್ಲದ ಬೈಕ್‌ ಚಾಲನೆ ಮೃತ್ಯುವಿಗೆ ಆಹ್ವಾನ ಎಂದು ತಿಳಿದರೂ ಹೆಲ್ಮೆಟ್‌ ಧರಿಸದೇ ಬೈಕ್‌ ಚಲಾಯಿಸುತ್ತಾರೆ.

ಟ್ರಾಫಿಕ್‌ ಪೊಲೀಸರಿಗೂ ಇದು ದೊಡ್ಡ ತಲೆನೋವಾಗಿದೆ. ಎಷ್ಟೋ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ, ಕಲಾವಿದರೊಬ್ಬರು ಯಮನ ವೇಷತೊಟ್ಟು ಜಾಗೃತಿ ಮೂಡಿಸಿದ್ದಾಯಿತು ಇದೀಗ ಮತ್ತೆ ಪೊಲೀಶರ ಸರದಿ.

ಸಂಚಾರ ನಿಯಮ ಉಲ್ಲಂಘನೆಗೆ ಬ್ರೇಕ್‌ ಹಾಕಲು ಹೊಸ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈಗ ಸ್ವತಃ ಪೊಲೀಸರೇ ಬೀದಿಗಿಳಿದು ಬೀದಿನಾಟಕ ಮಾಡುವ ಮೂಲಕ ಎಚ್ಚರಿಕೆ ಮನೋಭಾವ ಮೂಡಿಸಲು ಯತ್ನಿಸುತ್ತಿದ್ದಾರೆ.

Police street play on traffic awareness in Town hall

ಬೆಂಗಳೂರು ಟೌನ್‌ ಹಾಲ್‌ ಬಳಿ ಎಚ್ಚರ ತನ್ನ ಎಚ್ಚರ ಎಂಬ ಬೀದಿ ನಾಟಕದಲ್ಲಿ ಅಭಿನಯಿಸುವ ಮೂಲಕ ಬೈಕ್‌ ಸವಾರರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೆಲ್ಮೆಟ್‌ ಧರಿಸಿ ಪ್ರಾಣವನ್ನು ರಕ್ಷಿಸಿಕೊಳ್ಳಿ ಎಂದು ಹೇಳುವ ಮೂಲಕ ನಿಯಮಗಳ ಪಾಠ ಮಾಡುತ್ತಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ಗಣೇಶನ ವೇಷಧಾರಿಯಾಗಿ ಅರಿವು ಮೂಡಿಸಿದ್ದರು. ಅಷ್ಟೇ ಅಲ್ಲದೆ ದಂಡ ಹಾಕುವ ಬದಲು ಗುಲಾಬಿ ಹೂ ನೀಡುವ ಮೂಲಕವೂ ಸಹ ಜಾಗೃತಿ ಮೂಡಿಸಲು ಮುಂದಾಗಿದ್ದರು. ಟ್ರಾಫಿಕ್​ ಪೊಲೀಸರು ಬೈಕ್​ ಸವಾರರಿಗೆ ಅರಿವು ಮೂಡಿಸಲು ಹೊಸ ಹೊಸ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+