ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ಕಶ ಶಬ್ದ ಮಾಡುವ ಹಾರನ್ ಬಳಕೆ ಮಾಡೀರಾ ಜೋಕೆ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 12 : ಕರ್ಕಶ ಶಬ್ದ ಮತ್ತು ದೋಷಯುಕ್ತ ವಾಹನಗಳಿಗೆ ಬ್ರೇಕ್ ಹಾಕುವ ಕೆಲಸವನ್ನು ಆಡುಗೋಡಿ ಪೊಲೀಸರು ಮಾಡಿದ್ದಾರೆ. ದಿನದಿಂದ ದಿನಕ್ಕೆ ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ ಇತರ ವಾಹನಗಳ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದೆ.

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ, 25 ನಿಮಿಷದ ವಿಡಿಯೋ ನೋಡುವ ಶಿಕ್ಷೆಸಂಚಾರಿ ನಿಯಮ ಉಲ್ಲಂಘಿಸಿದವರಿಗೆ, 25 ನಿಮಿಷದ ವಿಡಿಯೋ ನೋಡುವ ಶಿಕ್ಷೆ

ಹೀಗಾಗಿ ಆಡುಗೋಡಿ ಸಂಚಾರ ಪೊಲೀಸರು ಹೊಸೂರು ರಸ್ತೆಯಲ್ಲಿ ಇಂತಹ ವಾಹನಗಳ ಸೈಲೆನ್ಸ ರ್ ಗಳನ್ನು ರೋಡ್ ರೋಲರ್ ಕೆಳಗಿಟ್ಟು ಉರುಳಿಸಿದ್ದಾರೆ.

Police destroy fancy bike silencers

ಸೈಲೆನ್ಸರ್ ಪೈಪ್ ಮಾರ್ಪಾಡು 80 ಡೆಸಿಬಲ್ ಮೀರಬಾರದು: ವಾಹನ ತಯಾರಿಸುವ ಕಂಪನಿಗಳು ಮೋಟಾರು ಕಾಯ್ದೆಯನುಸಾರ ವಾಹನಗಳ ಶಬ್ದವನ್ನು ನಿಗದಿಪಡಿಸಿರುತ್ತವೆ. ಆದರೆ ಕೆಲ ಮಾಲಕರು ವಾಹನಗಳ ಶಬ್ದ ಹೆಚ್ಚಿಸಿಕೊಳ್ಳುತ್ತಾರೆ. ಇದಕ್ಕಾಗಿ ಸೈಲೆನ್ಸರ್ ಪೈಪ್ ಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಹೆಚ್ಚು ಶಬ್ದ ಹೊರ ಹೊಮ್ಮುವ ಸೈಲೆನ್ಸರ್ ಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ಈ ವಾಹನಗಳು ರಸ್ತೆಗಿಳಿದ ವೇಳೆ ಭಾರೀ ಪ್ರಮಾಣದ ಸದ್ದು ಮಾಡಿಕೊಂಡು ಹೋಗುತ್ತವೆ.

ದಾವಣಗೆರೆಯಲ್ಲಿ ಪಾನಮತ್ತ ಚಾಲಕನಿಗೆ ಟ್ರಾಫಿಕ್ ಪೊಲೀಸರಿಂದ ಥಳಿತದಾವಣಗೆರೆಯಲ್ಲಿ ಪಾನಮತ್ತ ಚಾಲಕನಿಗೆ ಟ್ರಾಫಿಕ್ ಪೊಲೀಸರಿಂದ ಥಳಿತ

ಬೈಕ್ ಅಥವಾ ಇನ್ಯಾವುದೇ ವಾಹನವಾಗಿರಲಿ ಶಬ್ದ ಮಾಲಿನ್ಯ ಉಂಟುಮಾಡುವಂತಿಲ್ಲ, ಮೋಟಾರು ವಾಹನ ಕಾಯ್ದೆಯನುಸಾರ ನಿಗದಿತ ಡೆಸಿಬಲ್ ಗಿಂತ ಹೆಚ್ಚು ಶಬ್ದ ಹೊರ ಹೊಮ್ಮುವ ವಾಹನಗಳ ಮಾಲಕರ ವಿರುದ್ಧ ಕ್ರಮ ಜರುಗಿಸಬಹುದಾಗಿದೆ.

ಹೀಗಾಗಿ ಆಡುಗೋಡಿ ಟ್ರಾಫಿಕ್ ಪೊಲೀಸರು ಇಂತಹ ವಾಹನಗಳಿಗೆ ಬ್ರೇಕ್ ಹಾಕಲು ಯೋಜನೆ ರೂಪಿಸಿದ್ದು ಕರ್ಕಶ ಶಬ್ದ ಮಾಡುವ ಸುಮಾರು ನೂರಕ್ಕಿಂತಲೂ ಹೆಚ್ಚು ವಾಹನಗಳ ಸೈಲೆನ್ಸರ್ ತೆಗೆದು ಅದರ ಮೇಲೆ ರೋಡ್ ರೋಲರ್ ಗಳನ್ನು ಉರುಳಿಸಿದ್ದಾರೆ.

ಇದರ ಮೂಲಕ ಇನ್ಯಾರೂ ಕೂಡ ಇಂತಹ ಸೈಲೆನ್ಸರ್ ಗಳನ್ನು ಬಳಕೆ ಮಾಡಬೇಡಿ, ಒಂದೊಮ್ಮೆ ಬಳಸಿದರೆ ನಿಮ್ಮ ಗಾಡಿಗಳಿಗೂ ಇಂತಹುದೇ ಗತಿ ಬಂದೀತು ಎಂದು ಎಚ್ಚರಿಕೆ ನೀಡಿದ್ದಾರೆ.

English summary
Adugodi Traffic Police have destroyed many fancy bike silencers which were latered by violating motor vehicle act. The police have demonstrated the destroying the silencer by rolling road roller on them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X