• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆ ಬಾಡಿಗೆ ಪಡೆಯಲು ವ್ಯಾಪಾರದ ನೆಪ: ಅಲ್ಲಿ ನಡೆಯುತ್ತಿದ್ದಿದ್ದೇ ಬೇರೆ

|

ಬೆಂಗಳೂರು, ನವೆಂಬರ್ 19: ವ್ಯಾಪಾರದ ನೆಪವೊಡ್ಡಿ ಮನೆಯನ್ನು ಬಾಡಿಗೆ ಪಡೆಯುತ್ತಿದ್ದ ಮುಂಬೈ ಮೂಲದ ಖದೀಮರು ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಜಾಲದಲ್ಲಿ ತರಕಾರಿ ವ್ಯಾಪಾರಕ್ಕೆಂದು ಮನೆ ಪಡೆದು ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿಟ್ಟಿದ್ದರು ಎಂಬುದು ಪೊಲೀಸ್ ತನಿಖೆ ವೇಳೆ ಬಹಿರಂಗಗೊಂಡಿದೆ. ಬಂಧಿತ ಬೆಂಗಳೂರು ಮೂಲದ ಅಶ್ವಕ್ ಅಲಿಯಾಸ್ ಚಾನ್ ಖಾನ್ ಚಿಕ್ಕಜಾಲದ ಕೋಳಿಪುರದಲ್ಲಿರುವ ನಿರ್ಜನ ಪ್ರದೇಶವೊಂದರಲ್ಲಿ ಈ ಮನೆಯನ್ನು ಕೆಲವು ತಿಂಗಳ ಹಿಂದೆ ಬಾಡಿಗೆಗೆ ಪಡೆದುಕೊಂಡಿದ್ದ, ಆ ವೇಳೆ ವ್ಯಾಪಾರಕ್ಕೆಂದು ಮಾಲಿಕರ ಬಳಿ ಸುಳ್ಳು ಹೇಳಿದ್ದ.

ಒಂದು ಮಗುವಿನ ಬೆಲೆ 45 ಲಕ್ಷ! ಹೀಗೆ ಮಾರಾಟವಾಗಿರುವುದು 300 ಮಕ್ಕಳು

ಆದರೆ ಮನೆಯನ್ನು ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿ ಕೂಡಿಡಲು ಬಳಸಿಕೊಂಡಿದ್ದ, ರಾಮನಗರದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ತಮ್ಮ ಸ್ಥಳವನ್ನು ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರ ಮಾಡಿದ್ದರು.

ಇನ್ನು ಕೋಳಿಪುರದಲ್ಲಿ ರಕ್ಷಿಸಲಾಗಿರುವ ಬಾಂಗ್ಲಾ ದೇಶದ ಸರ್ದಾರ್ ಹುಸೇನ್, ಸುನಂಮುಂಚಿ, ಮೊಹಮ್ಮದ್ ಮುಷ್ರಫ್, ಶಕೀಲ್ ಬಳಿ ಆರೋಪಿಗಳು ಸುಮಾರು 26ಲಕ್ಷವನ್ನು ತಮ್ಮ ಖಾತೆಗೆ ದಂಧೆಕೋರರು ಜಮಾ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನವದೆಹಲಿ: ಮಾನವ ಕಳ್ಳ ಸಾಗಣೆ, 16 ಯುವತಿಯರ ರಕ್ಷಣೆ

ಯಲಹಂಕ ಮತ್ತು ಚಿಕ್ಕಜಾಲ ಠಾಣೆ ಪೊಲೀಸರ ರಕ್ಷಣೆಯಲ್ಲಿ ಬಾಂಗ್ಲಾ ದೇಶದ ಯುವಕರಿದ್ದು, ಈಗಾಗಲೇ ಯುವಕರ ಪೋಷಕರು ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

English summary
Chikkajala police arrested a gang involved in human trafficking in bengaluru, gang has been using Bangla citizens for their business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X