• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳ್ಳತನಕ್ಕಾಗಿ ಮನೆಗೆ ನುಗ್ಗಿ ಮಹಿಳೆಯ ರೇಪ್ ಮಾಡಿದ್ದವ ಸಿಕ್ಕಿಬಿದ್ದ

|

ಬೆಂಗಳೂರು, ನವೆಂಬರ್ 17: ಕಳ್ಳತನಕ್ಕೆಂದು ಮನೆಗೆ ನುಗ್ಗಿ ಮಹಿಳೆಯನ್ನು ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುರುಬರ ಹಳ್ಳಿಯ ಜೆಸಿ ನಗರ ನಿವಾಸಿ ದೇವರಾಜ್(21) ಬಂಧಿತ, ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ

ಉತ್ತರ ಭಾರತೀಯ ಮೂಲದ ಮಹಿಳೆ ತನ್ನ ಇಬ್ಬರು ಸ್ನೇಹಿತರ ಜೊತೆ ಬಸವೇಶ್ವರನಗರ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸಂತ್ರಸ್ತ ಮಹಿಳೆ ನಗರದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್

ದೀಪಾವಳಿ ಹಬ್ಬದ ನಿಮಿತ್ತ ಇಬ್ಬರು ಸ್ನೇಹಿತರು ತಮ್ಮ ಊರಿಗೆ ತೆರಳಿದ್ದರು. ನ,8ರಂದು ರಾತ್ರಿ 9.30ಎ ಸುಮಾರಿಗೆ ಕಾಮುಕ ಕಳ್ಳತನಕ್ಕೆಂದು ಮಹಿಳೆ ಮನೆ ಬಳಿ ಬಂದು ಕಾಲಿಂಗ್ ಬೆಲ್ ಒತ್ತಿದ್ದ, ಬಾಗಿಲು ತೆರೆಯುತ್ತಿದ್ದಂತೆ ಆರೋಪಿಯು ಮಹಿಳೆಯನ್ನು ತಳ್ಳಿಕೊಂಡು ಬಲವಂತವಾಗಿ ಮನೆ ಪ್ರವೇಶಿಸಿ, ಮಹಿಳೆಯ ಕೈ ಕಚ್ಚಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದ.

ಈ ಆರೋಪಿಯ ಮೇಲೆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಗಾಜು ಒಡೆದು ಪ್ರಕರಣವಿದೆ. ಅಲ್ಲದೆ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮಹಿಳೆ ಬಳಿ ಅಸಭ್ಯವಾಗಿ ವರ್ತಿಸಿದ ಪ್ರಕಟಣದಲ್ಲಿ ಒಮ್ಮೆ ಜೈಲು ಸೇರಿದ್ದ.

English summary
Basaveshwara nagara police have arrested alleged rapist. He entered a house as theft but later he raped a lady there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X