• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಮನೆಯೊಂದರಲ್ಲಿ ಹೊರ ರಾಜ್ಯದ ಹುಡುಗಿಯರನ್ನು ಅಕ್ರಮ ಬಂಧನದಲ್ಲಿರಿಸಿದ್ದ ಆರೋಪಿ ಬಂಧನ

By ಬೆಂಗಳೂರು ಪ್ರತಿನಿಧಿ
|

ಬೆಂಗಳೂರು, ನವೆಂಬರ್.14: ಹುಡುಗಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ಅಕ್ರಮ ಬಂಧನದಲ್ಲಿರಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯು ಹೊರರಾಜ್ಯದ ಹುಡುಗಿಯರಿಗೆ ಲೇಡಿಸ್ ಸರ್ವೀಸ್ ಬಾರ್ ಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಬಂದು, ಅವರುಗಳನ್ನು ಹೊರಗಡೆ ಎಲ್ಲಿಯೂ ಕಳುಹಿಸದೇ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದ.

18 ವರ್ಷಗಳ ಹಿಂದಿನ ಪ್ರಕರಣ ಭೇದಿಸಿದ ಪುತ್ತೂರು ಪೊಲೀಸರು

ಈ ಬಗ್ಗೆ ಕೇಂದ್ರ ಅಪರಾಧ ವಿಭಾಗ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ಸದರಿ ಮಾಹಿತಿಯನ್ನಾಧರಿಸಿ ನವೆಂಬರ್ 10 ರಂದು ಕ್ಷಿಪ್ರ ಕಾರ್ಯಚರಣೆ ನಡೆಸಿ ಹುಡುಗಿಯರನ್ನು ಮಾನವ ಕಳ್ಳ ಸಾಗಣೆ ಮಾಡಿಕೊಂಡು ಬಂದಿದ್ದ ಆರೋಪಿ ಪ್ರವೀಣ್ ಶೆಟ್ಟಿ ಬಿನ್ ಶೇಖರ್ ಶೆಟ್ಟಿ (38 ವರ್ಷ) ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯಿಂದ ಒಂದು ಮೊಬೈಲ್ ಮತ್ತು 700 ರೂ. ನಗದು ಹಣವನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಅಕ್ರಮ ಬಂಧನದಲ್ಲಿರಿಸಿದ್ದ ದೆಹಲಿ ಮೂಲದ 03, ಪಂಜಾಬ್ ಮೂಲದ 03, ಮುಂಬಯಿ ಮೂಲದ 04, ರಾಜಸ್ಥಾನ ಮೂಲದ 04 ಮತ್ತು ಉತ್ತರ ಪ್ರದೇಶ ಮೂಲದ ಓರ್ವ ಯುವತಿ ಸೇರಿಂದತೆ ಒಟ್ಟು 14 ಜನ ನೊಂದ ಯುವತಿಯರನ್ನು ಸಂರಕ್ಷಣೆ ಮಾಡಲಾಗಿರುತ್ತದೆ.

ಸಿಬಿಐ ವಿವಾದ: ರಾಜಕಾರಣಿಗಳ ನಂಟು ಮತ್ತು ಲಂಚದ ವಿವರ ಬಾಯ್ಬಿಟ್ಟ ಉದ್ಯಮಿ

ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಆಲೋಕ್ ಕುಮಾರ್, ಐಪಿಎಸ್ ಮತ್ತು ಉಪ ಪೊಲೀಸ್ ಆಯುಕ್ತರವರಾದ ಗಿರೀಶ್.ಎಸ್, ಐಪಿಎಸ್ ರವರ ನೇರ ಮಾರ್ಗದರ್ಶನದಲ್ಲಿ ಮಹಿಳೆ ಮತ್ತು ಮಾಧಕ ದ್ರವ್ಯ ದಳದ ಎ.ಸಿ.ಪಿ. ರವರಾದ ಶ್ರೀ ಬಿ.ಎಸ್. ಮೋಹನ್‍ಕುಮಾರ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮತಿ ಎಸ್. ಆಯಿಷಾ, ಸಿಬ್ಬಂದಿಗಳಾದ ಶ್ರೀಮತಿ ಪದ್ಮಜಾ, ಶ್ರೀ ಶಶಿಧರ್, ಶ್ರೀ ನಂದೀಶ್ ಕೆ.ಆರ್. ಮತ್ತು ರಮೇಶ್ ರವರ ತಂಡ ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ.

English summary
Police arrested a young man who was cheating out of station girls in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X