ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೈಂ ಸ್ಕ್ವಾಡ್ ಸೋಗಿನಲ್ಲಿ ಬಂದು ದರೋಡೆ ಮಾಡಿ ಸಿಕ್ಕಿಬಿದ್ರು

|
Google Oneindia Kannada News

ಬೆಂಗಳೂರು, ಜನವರಿ 7: ಕ್ರೈಂ ಸ್ಕ್ವಾಡ್ ಸೋಗಿನಲ್ಲಿ ಬಂದು ದರೋಡೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ತಮ್ಮನ್ನು ಕ್ರೈಂ ಸ್ಕ್ವಾಡ್ ಎಂದು ಹೇಳಿಕೊಂಡು ರಾತ್ರಿ ವೇಳೆ ದರೋಡೆ ನಡೆಸುವ ಗ್ಯಾಂಗ್ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ

ಖಾಸಗಿ ಕಂಪನಿ ಉದ್ಯೋಗಿ ಸಲೀಂ ಪಾಷಾ ಮತ್ತು ಇವರ ಇಬ್ಬರು ಸ್ನೇಹಿತರನ್ನು ಈ ಗುಂಪು ಇತ್ತೀಚೆಗೆ ದರೋಡೆ ಮಾಡಿತ್ತು. ಡಿ.31ರಂದು ಪಾಷಾ ಅವರು ದ್ವಿಚಕ್ರ ವಾಹನದಲ್ಲಿ ಇಬ್ಬರು ಸ್ನೇಹಿತರನ್ನು ಕೂರಿಸಿ ಹೋಗುತ್ತಿದ್ದರು.

Police arrested a robbers gang

ಬಿಳಿಶಿವಾಲೆ ಕೆರೆ ಮುಖ್ಯರಸ್ತೆಯಲ್ಲಿ ಇವರನ್ನು ತಡೆದು ಏಳು ಮಂದಿ ದುಷ್ಕರ್ಮಿಗಳು ಕ್ರೈಂ ಸ್ಕ್ವಾಡ್ ಎಂದು ಹೇಳಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದೀರಿ ಎಂದು ಹೆದರಿಸಿ ವಾಹನದ ದಾಖಲೆಗಳನ್ನು ಕೇಳಿದ್ದರು. ದಾಖಲೆ ಕೊಟ್ಟ ಬಳಿಕ ನೀವು ದರೋಡೆ ಮಾಡಲು ಹೋಗುತ್ತಿದ್ದೀರಿ, ಸ್ಟೇಷನ್‌ಗೆ ನಡೀರಿ ಎಂದು ಬೆದರಿಸಿದ್ದರು.

ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ಈ ವೇಳೆ ಎರಡು ಕಾರುಗಳು ಸ್ಥಳಕ್ಕೆ ಬಂದಿದ್ದು, ಕಾರಿನಿಂದ ಇಳಿದ ಕೆಲವರು ಮೂವರನ್ನೂ ಕಾರಿಗೆ ಹತ್ತಿಸಿಕೊಂಡು ಹೋಗಿದ್ದರು. ಬಳಿಕ ಹಲ್ಲೆ ನಡೆಸಿ ಅವರ ಬಳಿ ಇದ್ದ ಮೊಬೈಲ್, ಹಣ, ಚಿನ್ನದ ಸರ ಎಲ್ಲವನ್ನೂ ಕಿತ್ತುಕೊಂಡಿದ್ದಾರೆ.ಬಳಿಕ ನಿಜವಾದ ಪೊಲೀಸರಲ್ಲ ಎಂದು ತಿಳಿಸು ದೂರು ನೀಡಲಾಗಿತ್ತು, ಇದೀಗ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

English summary
Police arrested robbery gang those loot the passengers in the name crime squad.Police arrested a robbers gang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X