PM Modi Visit Bengaluru: ಮಟ್ರೋ ಯೋಜನೆ, 03 ವಂದೇ ಭಾರತ್ ರೈಲುಗಳಿಗೆ ಚಾಲನೆ: ವೇಳಾಪಟ್ಟಿ ಹೀಗಿದೆ
ಬೆಂಗಳೂರು ನಾಗರಿಕೆ ಬಹುನಿರೀಕ್ಷೆಯ ನಮ್ಮ ಮೆಟ್ರೋ (Namma Metro) ಹೊಸ ಮಾರ್ಗದ ಕನಸು ಭಾನುವಾರ ನನಸಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 10ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಬೆಂಗಳೂರಿನಲ್ಲಿ ₹22,770 ಕೋಟಿ ನಮ್ಮ ಮೆಟ್ರೋ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಇದರೊಂದಿಗೆ ವಿವಿಧ ಮಾರ್ಗಗಳಲ ಹೊಸ ಮೂರು ವಂದೇ ಭಾರತ್ ರೈಲುಗಳಿಗೂ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಆರ್‌ವಿ.ರಸ್ತೆ-ಬೊಮ್ಮಸಂದ್ರದ (RV Road-Bommasandra metro line) ಸುಮಾರು 19 ಕಿಲೋ ಮೀಟರ್ ಉದ್ದದ ನಮ್ಮ ಮೆಟ್ರೋ ಹಳದಿ ಮಾರ್ಗವಾಗಿ ತೇಜಸ್ವಿ ಸೂರ್ಯ ಅವರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುತ್ತದೆ. ಈ ಮೆಟ್ರೋ ಮಾರ್ಗ ತೆರೆಸುವ ನಿಟ್ಟಿನಲ್ಲಿ ಸಂಸದರ ಸಾಕಷ್ಟು ಪ್ರಯತ್ನ ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ. ಪ್ರಧಾನಿ ಆಗಮನ, ಭಾನುವಾರದ ಕಾರ್ಯಕ್ರಮ ಬಗ್ಗೆ ಟ್ವೀಟ್ ಪೋಸ್ಟ್ ಮಾಡಿರುವ ಅವರು ಪ್ರಧಾನಿ ಕಚೇರಿಯ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸುಮಾರು 7160 ಕೋಟಿ ರೂ. ಮೌಲ್ಯದ ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು (Metro Yellow Line) ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಬಹುನಿರೀಕ್ಷೆ ಈಗಾಗಲೇ ಕೇಂದ್ರದಿಂದ ಅನುಮೋದನೆ ಪಡೆದ 15,610 ಕೋಟಿಗೂ ಹೆಚ್ಚು ಮೌಲ್ಯದ ಬೆಂಗಳೂರು ಮೆಟ್ರೋ ಹಂತ -3 ಯೋಜನೆ ಕಾಮಗಾರಿ ಆರಂಭಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಒಟ್ಟು ₹22,770 ಕೋಟಿ ಮೆಟ್ರೋ ಯೋಜನೆಗಳಿಗೆ ಚಾಲನೆ ದೊರೆಯಲಿದೆ ಎಂದರು.
ಪ್ರಧಾನಿ ಮೋದಿಯ ಇತರ ಕಾರ್ಯಕ್ರಮಗಳು..
ನಗರದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ರೈಲು ನಿಲ್ದಾಣದಲ್ಲಿ 3 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿಯವರಿಂದ ಚಾಲನೆ ದೊರೆಯಲಿದೆ. ಅದರಲ್ಲಿ ಒಂದು ಬೆಂಗಳೂರು-ಬೆಳಗಾವಿ ನಿಲ್ದಾಣದವರೆಗೆ ಸಂಚರಿಸುವ ರೈಲಾಗಿದೆ. ನಂತರ, ಅವರು ಬೆಂಗಳೂರು ಮೆಟ್ರೋದ ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಆರ್‌ವಿ ರಸ್ತೆ (ರಾಗಿಗುಡ್ಡ) ದಿಂದ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಪ್ರಯಾಣ ಮಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ, ಪ್ರಧಾನಿ ಬೆಂಗಳೂರಿನಲ್ಲಿ ನಗರ ಸಂಪರ್ಕ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ಮಾಡಲಿದ್ದಾರೆ. ಇದಾಗುತ್ತಿದ್ದಂತೆ ವೇದಿಕೆ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೆಟ್ರೋ ಹಂತ-2 ಯೋಜನೆಯ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದ ಉದ್ದ ಸುಮಾರು 7,160 ಕೋಟಿ ರೂ.ಗಳಾಗಿದ್ದು, 16 ನಿಲ್ದಾಣ ಹೊಂದಿದೆ. ಈ ಹಳದಿ ಮಾರ್ಗವನ್ನು ತೆರೆಯುವುದರೊಂದಿಗೆ, ಬೆಂಗಳೂರಿನಲ್ಲಿ ಕಾರ್ಯಾಚರಣೆಯ ಮೆಟ್ರೋ ಜಾಲವು 96 ಕಿ.ಮೀ.ಗಳಿಗೆ ವಿಸ್ತರಣೇ ಆಗಲಿದೆ. ಲಕ್ಷಾಂತರ ಜನರಿಗೆ ಮೆಟ್ರೋ ಜಾಲ ದೈನದಂದಿನ ಸಾರಿಗೆ ಸೇವೆ ಮುಂದುವರಿಸುತ್ತದೆ.
ನಾಳೆ, ಆಗಸ್ಟ್ 10 ರಂದು ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ. ಸಂಪರ್ಕವನ್ನು ಸುಧಾರಿಸುವ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಕೆ ಎಸ್ ಆರ್ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಾಗುವುದು. ಬೆಂಗಳೂರು ನಗರದ ಮೂಲಸೌಕರ್ಯವನ್ನು ಹೆಚ್ಚಿಸಲು, ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲಾಗುವುದು.…
— Narendra Modi Kannada (@Namoinkannada) August 9, 2025
ನಮ್ಮ ಮೆಟ್ರೋ ಮೂರನೇ ಹಂತ ಯೋಜನೆ
ನಮ್ಮ ಮೆಟ್ರೋ ಮೂರನೇ ಹಂತದ (Bengaluru metro 3rd phase) 15,610 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 44 ಕಿ.ಮೀ.ಅಧಿಕ ಉದ್ದದ ಮೆಟ್ರೋ ಕಾರಿಡಾರ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಲಿದ್ದಾರೆ. ಈ ಯೋಜನೆಯಡಿ 31 ಎತ್ತರದ ನಿಲ್ದಾಣಗಳು ಬರುತ್ತವೆ. ಮೂಲಸೌಕರ್ಯ ಯೋಜನೆಯು ವಸತಿ, ಕೈಗಾರಿಕಾ, ವಾಣಿಜ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ನಗರದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುತ್ತದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ವಂದೇ ಭಾರತ್ ರೈಲುಗಳ ಮಾರ್ಗಗಳು
ಮೂರು ವಂದೇ ಭಾರತ್ ರೈಲುಗಳು ಉದ್ಘಾಟನೆಗೊಳ್ಳಲಿವೆ. ಅದರಲ್ಲಿ ಬೆಂಗಳೂರು-ಬೆಳಗಾವಿ, ಅಮೃತಸರದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರ ಹಾಗೀ ನಾಗ್ಪುರ (ಅಜ್ನಿ)- ಪುಣೆ ಮಾರ್ಗದ ಮೂರು ರೈಲುಗಳಾಗಿವೆ. ಐಶಾರಾಮಿ ಹಾಗೂ ಆರಾಮದಾಯ ಸೇವೆ ನೀಡಿರುವ ಈ ವಂದೇ ಭಾರತ್ ರೈಲುಗಳೂ ಹೈಸ್ಪೀಡ್ ರೈಲುಗಳಾಗಿದ್ದು, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆಗಿನ ಪ್ರಾದೇಶಿಕ ಸಂಪರ್ಕ ಸುಧಾರಿಸುತ್ತದೆ. ಸಂಚಾರ ಸಮಯ ಕಡಿಮೆ ಮಾಡುತ್ತಿದೆ.












Click it and Unblock the Notifications