ನಾನು ರಾಷ್ಟ್ರಪತಿ ಆಗ್ಬೇಕು ಎಂದ ವಿದ್ಯಾರ್ಥಿಗೆ ಮೋದಿ ಕೊಟ್ಟ ಸಲಹೆ ಏನು?

Recommended Video

      ಮೋದಿ ಮಾತು ಕೇಳಿ ಅಚ್ಚರಿಗೊಂಡ ವಿಜ್ಞಾನಿಗಳು..? | Chandrayaan 2

      ಬೆಂಗಳೂರು, ಸೆಪ್ಟೆಂಬರ್ 7: ನಾನು ರಾಷ್ಟ್ರಪತಿ ಆಗ್ಬೇಕು ಏನಾದರು ಸಲಹೆ ಕೊಡಿ ಎಂದು ವಿದ್ಯಾರ್ಥಿಯೊಬ್ಬ ಪ್ರಧಾನಿ ಮೋದಿ ಬಳಿ ಕೇಳಿದಾಗ, ಯಾಕೆ ರಾಷ್ಟ್ರಪತಿಯೇ ಆಗಬೇಕು ಪ್ರಧಾನಿಯೂ ಆಗಬಹುದಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

      ಚಂದ್ರಯಾನ-2 ವೀಕ್ಷಣೆಗಾಗಿ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಿದ್ದ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.

      ಮೋದಿಯವರ ಬಳಿ ವಿದ್ಯಾರ್ಥಿಯೊಬ್ಬ ನಾನು ದೇಶದ ರಾಷ್ಟ್ರಪತಿಯಾಗಬೇಕು ಎಂದು ಬಯಸಿದ್ದೇನೆ ಏನಾದರೂ ಸಲಹೆ ಕೊಡಿ ಎಂದು ಕೇಳಿದ್ದಾನೆ. ಆಗ ಮೋದಿ ನಗುತ್ತಲೇ ರಾಷ್ಟ್ರಪತಿಯೇ ಯಾಕೆ ಪ್ರಧಾನಿ ಯಾಕಾಗಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.

      PM Modi Asks Student Why Not Want To Become Prime Minister

      ''ಜೀವನದಲ್ಲಿ ಗುರಿ ದೊಡ್ಡದಾಗಿಯೇ ಇರಬೇಕು, ಆದರೆ ಅದನ್ನು ಎರಡು ಭಾಗವಾಗಿ ಮಾಡಿಕೊಳ್ಳಬೇಕು, ಮೊದಲು ಸಣ್ಣ ಸಣ್ಣ ಗುರಿಯನ್ನು ತಲುಪುಬೇಕು.

      ಯಾವುದನ್ನು ನೀವು ಪಡೆದುಕೊಂಡಿಲ್ಲವೋ ಅದರ ಬಗ್ಗೆ ಯೋಚಿಸುವುದನ್ನು ಬಿಡಬೇಕು, ಯಾವುದಕ್ಕೂ ನಿರಾಸೆಯಾಗಕೂಡದು'' ಎಂದು ಮೋದಿ ಕಿವಿಮಾತು ಹೇಳಿದ್ದಾರೆ. ಆಗಸ್ಟ್‌ನಲ್ಲಿ ಇಸ್ರೋ ನಡೆಸಿದ್ದ ಆನ್‌ಲೈನ್ ಬಾಹ್ಯಾಕಾಶ ರಸಪ್ರಶ್ನೆಯಲ್ಲಿ 60 ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+