ಶಶಿಕಲಾ ನಟರಾಜನ್ ಬೇರೆ ಜೈಲಿಗೆ ವರ್ಗ ಸಾಧ್ಯವಿಲ್ಲ: ಹೈಕೋರ್ಟ್
ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಯಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಶಶಿಕಲಾರನ್ನು ಬೆಂಗಳೂರಿನಿಂದ ಜೈಲಿನಿಂದ ಬೇರೆಡೆಗೆ ವರ್ಗಾವಣೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ
ಬೆಂಗಳೂರು, ಏಪ್ರಿಲ್ 03: ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಯಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಶಶಿಕಲಾರನ್ನು ಬೆಂಗಳೂರಿನಿಂದ ಜೈಲಿನಿಂದ ಬೇರೆಡೆಗೆ ವರ್ಗಾವಣೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ(ಏಪ್ರಿಲ್ 02) ತಿರಸ್ಕರಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರಿನ ಮಹಿಳಾ ಕಾರಾಗೃಹಕ್ಕೆ ಶಶಿಕಲಾರನ್ನು ಕೋರಿ ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಅರ್ಜಿ ಹಾಕಿದ್ದರು. ವಿವಿಐಪಿ ಕೈದಿ ಶಶಿಕಲಾರನ್ನು ನೋಡಲು ತಮಿಳುನಾಡಿನ ಗಣ್ಯಾತಿಗಣ್ಯರು, ತಮಿಳುನಾಡಿನ ಸಚಿವರಾದಿಯಾಗಿ ಅನೇಕ ಮುಖಂಡರು ಪರಪ್ಪನ ಅಗ್ರಹಾರಕ್ಕೆ ಬರುವುದನ್ನು ತಪ್ಪಿಸುವಂತೆ ಅರ್ಜಿಯಲ್ಲಿ ರಾಮಸ್ವಾಮಿ ಕೋರಿದ್ದರು.

ಆದರೆ, ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಕರ್ನಾಟಕ ಬಂದೀಖಾನೆ ಕಾಯ್ದೆಯನ್ನು ಮೀರಿಲ್ಲ. ಕೈದಿಗಳಿಗೆ ಹೊರ ಜಗತ್ತಿನ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ನೀಡುವ ನಿಯಮವನ್ನು ಬದಲಾಯಿಸಿಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ಸಲ್ಲಿಸಿದ್ದ ವರದಿಯನ್ನು ಹೈಕೋರ್ಟ್ ಪುರಸ್ಕರಿಸಿ, ರಾಮಸ್ವಾಮಿ ಅವರ ಅರ್ಜಿಯನ್ನು ತಿರಸ್ಕರಿಸಿದೆ.











Click it and Unblock the Notifications